ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಚರಂತಿಮಠ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಬಾಗಲಕೋಟೆ ನಗರಸಭೆಯ ಎಸ್‍ಎಫ್‍ಸಿ ಶೇ.5ರ ಅನುದಾನದಡಿ 9 ಜನ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಶಾಸಕ ವೀರಣ್ಣ ಚರಂತಿಮಠ ಗುರುವಾರ ವಿತರಿಸಿದರು.

ನಗರಸಭೆಯ ಬಯಲು ರಂಗ ಮಂದಿರದ ಆವರಣದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳ ವಿತರಿಸಿ, ವಾಹನಗಳ ದಾಖಲೆಗಳನ್ನು ನೀಡಿ ನಂತರ ಮಾತನಾಡಿದ ಅವರು ಸರಕಾರದ ಸೌಲಭ್ಯಗಳನ್ನು ವಿಕಲಚೇತನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಂತರ ಬಯಲು ಮಂದಿರದ ಆವರಣ ವೀಕ್ಷಿಸಿದ ಶಾಸಕರು ಆವರಣದಲ್ಲಿರುವ ಕಲ್ಲುಗಳನ್ನು ತೆಗೆದು ಸ್ವಚ್ಛತೆ ಕಾಯ್ದುಕೊಳ್ಳಲು ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು. ನಗರಸಭೆ ಆವರಣದಲ್ಲಿರುವ ಜಿಮ್ ಪಾರ್ಕನ್ನು ಶಾಸಕರು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಸೇರಿದಂತೆ ರಾಜು ನಾಯ್ಕರ,ಅಂಬಾಜಿ ಜೋಶಿ, ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಬಡಿಗೇರ, ರಂಗನಾಥ ಕಂಬಾರ, ವಿಠಲ ಅಚ್ಚಲಕರ, ಶಿವಪ್ಪ ಜಾಲಗಾರ, ಗುರುಬಾಯಿ ಹಿರೇಮಠ, ಮನೋಹರ ನರಸಪ್ಪನವರ, ಮೀತಾ ಗಣಾತ್ರಾ, ರೇಣುಕಾ ಲಮಾಣಿ, ಸುರೇಶ ಜೋಶಿ ವಿಕಲಚೇತನರು ತ್ರಿಚಕ್ರ ವಾಹನ ಪಡೆದುಕೊಂಡರು.

Be the first to comment

Leave a Reply

Your email address will not be published.


*