ಜಿಲ್ಲಾ ಸುದ್ದಿಗಳು
ಯಾದಗಿರಿ:
ಅಗಲಿದ ಮಗನ ಸ್ಮರಣಾರ್ಥ ಬಡ ಕುಟುಂಬದ ಮಕ್ಕಳಿಗೆ ಪೂಜ್ಯರ ಜೊತೆಗೂಡಿ ಕುಟುಂಬಸ್ಥರಿಂದ ಉಚಿತ ನೋಟ್ ಬುಕ್ ಮತ್ತು ಪೆನ್ ಗಳ ವಿತರಣೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕುರುಬನ ತಳ್ಳಳ್ಳಿ ಎನ್ನುವ ಸುಮಾರು ೨೫೦ ರಿಂದ ೩೦೦ ಮನೆಗಳಿರುವ ಪುಟ್ಟ ಗ್ರಾಮವದು, ಈ ಕುಗ್ರಾಮದ ರೈತಾಪಿ ಕುಟುಂಬದ ನಿಂಗಣ್ಣ ಸಾಹುಕಾರ ಮಾಲಗತ್ತಿಯವರಿಗೆ ಒಟ್ಟು ೯ ಜನ ಮಕ್ಕಳು ೯ ಜನರ ಪೈಕಿ ೪ ಜನ ಹೆಣ್ಣು ಮಕ್ಕಳು ೫ ಜನ ಗಂಡು ಮಕ್ಕಳು ಈ ೫ ಜನ ಗಂಡು ಮಕ್ಕಳ ಪೈಕಿ ನಾಲ್ಕನೇಯ ಮಗನೆ ಮಹಾರಾಯ..
ಸ್ವಗ್ರಾಮವಾದ ಕೆ. ತಳ್ಳಳ್ಳಿ ಯಲ್ಲಿ ಜನಿಸಿದ ಈ ವಿದ್ಯಾರ್ಥಿ ಒಂದರಿಂದ ಏಳನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ತಮ್ಮೂರಲ್ಲೆ ಮುಗಿಸಿ, ನಂತರದಲ್ಲಿ ಪ್ರೌಢಶಾಲೆಯ ೮ನೇ ತರಗತಿಯನ್ನು ಸುರಪೂರ ತಾಲೂಕಿನ ಬೈಚಬಾಳ ಶಾಲೆಯಲ್ಲಿ ಹಾಗೂ ೯,೧೦, ನೆ ತರಗತಿಯನ್ನು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ. ಮುಂದೆ ಪಿಯುಸಿ ಶಿಕ್ಷಣನ್ನು ಅದೇ ತಾಳಿಕೋಟೆಯ ಘನಮಠೇಶ್ವರ ಕಾಲೇಜಿನಲ್ಲಿ ಮುಗಿಸಿ ನಂತರ ಡಿಗ್ರಿ ಪದವಿಯನ್ನು ಕಲಬುರ್ಗಿಯಲ್ಲಿ ಮುಗಿಸುತ್ತಾರೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಐಎಎಸ್ ಮಾಡುವ ಮೂಲಕ ಜಿಲ್ಲಾಧಿಕಾರಿಯಾಗಿ ಸಮಾಜ ಸೇವೆ ಮಾಡುವ ಉದ್ದೇಶವನ್ನು ಹೊಂದಿದ್ದ ಇನರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ದೇಹಲಿಗೆ ತೆರಳಿ ಯುಪಿಎಸ್ ಸಿ ಕೋಚಿಂಗ್ ಪಡೆಯುತ್ತಾರೆ ದೇಹಲಿಯ ಕೋಚಿಂಗ್ ಮುಗಿಯುತ್ತಿದ್ದಂತೆ ಗೆಳೆಯರ ಜೊತೆಗೂಡಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ತೆರಳಿ ಅಲ್ಲಿಯೇ ಬಾಡಿಗೆ ಮನೆಯನ್ನು ಪಡೆದು ಅಭ್ಯಾಸದಲ್ಲಿ ನಿರತರಾಗುತ್ತಾರೆ, ಹೀಗೆ ತಿಂಗಳುಗಳು ಕಳೆದಂತೆ ಒಮ್ಮಿಂದೊಮ್ಮೆಲೆ ಏನಾಯ್ತೋ ಗೊತ್ತಿಲ್ಲ ಎದೆಯಲ್ಲಿ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ದಿನಾಂಕ ೨೨-೦೭-೨೦೧೯ ರಂದು ನಿಧನರಾದರು..
ಬೇರೊಂದು ದೂರದ ಊರಿಗೆ ಓದಲು ಹೋಗಿರುವ ಮಗನ ಮರಣದ ಸುದ್ದಿ ತಿಳಿದ ತಕ್ಷಣ ಕುಟುಂಬದವರಿಗೆ, ಬರಸಿಡಿಲು ಬಡಿದಂತಾಗಿ ಕುಟುಂಬದ ಕೊಂಡಿ ಕಳಚಿದಂತಾಗುತ್ತದೆ.
ನಂತರದಲ್ಲಿ ಯುವಕನ ಶವವನ್ನು ಈಡೀ ಗ್ರಾಮವೇ ಸ್ವಾಗತಿಸಿ, ಸ್ನೇಹಿತರು, ಬಂಧು ಬಾಂಧವರು ಆ ಕರಾಳ ದಿನದಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಾರೆ.
ಮುಂದೆ ಪೂಜ್ಯರ ಮತ್ತು ಗುರು ಹಿರಿಯರ ಸಮ್ಮುಖದಲ್ಲಿ ಕುರುಬ ಸಮಾಜದ ವಿಧಿ ವಿಧಾನಗಳ ಮೂಲಕ ಊರ ಮುಂದಿನ ತಮ್ಮ ತೋಟದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ವಿಧಿಯಾಟ ನೋಡಿ ಯುವಕ ಮಾರಯ್ಯರ ಯುಪಿಎಸ್ ಸಿ ಕನಸು ಇಂದಿಗೂ ಸಹ ನನಸಾಗಿಯೇ ಉಳಿದಿದೆ, ಈ ದಿನ ಅಗಲಿದ ಮಗನ ಸ್ಮರಣಾರ್ಥವಾಗಿ ಪ್ರಥಮ ವರ್ಷದ ಪುಣ್ಯ ಸ್ಮರಣೆ ಮಾಡಿ ಊರಿಗೆ ಊಟ ಹಾಕಿಸುವ ಮೂಲಕ ಮಾಲಗತ್ತಿ ಕುಟುಂಬದವರಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಪೆನ್ಸಿಲ್, ಪೆನ್ನು ಗಳನ್ನು ವಿತರಿಸಿದರು..
ಇದೇ ಸಂದರ್ಭದಲ್ಲಿ ಅಗತೀರ್ಥ ಗ್ರಾಮದ ಸರೂರ ಶಾಖಾ ಮಠದ ಶ್ರೀ ಗುರು ರೇವಣಸಿದ್ದೇಶ್ವರ ಶಾಂತಮಯ ಮಹಾ ಸ್ವಾಮಿಗಳು, ಶ್ರೀ ಮತಿ ಮಲ್ಲಮ್ಮ ಗಂ/ನಿಂಗಣ್ಣ ಸಾಹುಕಾರ, ಸಣ್ಣಕೆಪ್ಪ ಸಾಹುಕಾರ, ಮಾರಯ್ಯ ಸಾಹುಕಾರ, ಶಿವಕುಮಾರ ನಗನೂರ, ಸಣ್ಣ ಮಾರಯ್ಯ ಗಂಗನಾಳ, ಶಿಕ್ಷಕ ಸಿದ್ದನಗೌಡ ಬಿರಾದಾರ,ಸಾಹೇಬಗೌಡ ಪೊ:ಪಾಟೀಲ, ಭೀಮಣ್ಣ ಮಾಸ್ತರ, ಯಂಕಣ್ಣ ದೇವಿಕೇರಿ ಸೇರಿದಂತೆ ಸ್ನೇಹಿತರು ಕುಟುಂಬಸ್ಥರು, ಹಾಗೂ ಗ್ರಾಮದ ಇತರರು ಉಪಸ್ಥಿತರಿದ್ದರು..
Be the first to comment