ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಜು.22:
ಮುದ್ದೇಬಿಹಾಳ ಪಟ್ಟಣದಲ್ಲಿ ಬುಧವಾರ ರಾತ್ರ ಭಾರಿ ಪ್ರಮಾಣದ ಮಳೆಯಾಗಿದ್ದು ಮುದ್ದೇಬಿಹಾಳ ಪಟ್ಟಣದ ರಸ್ತೆಗಳು ಚರಂಡಿ ನೀರಿನಿಂದ ಸಂಪೂರ್ಣವಾಗಿ ಮುಳಿಗಿವೆ. ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ಚರಂಡಿ ದುರಸ್ಥಿಯಾಗದಿರುವುದೇ ಇದಕ್ಕೆ ಕಾರಣವಾಗಿದ್ದು ಇದರ ಬಗ್ಗೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪುರಸಭೆ ಪಕ್ಕದಲ್ಲಿಯೇ ಇರುವ ಹೊರಪೇಠ ನಗರದ ಹೊಕ್ರಾಣೀ ದವಾಖಾನೆ ರಸ್ತೆಯಲ್ಲಿ ಕೆಲವರು ಚರಂಡಿಯಲ್ಲಿ ಕಲ್ಲುಗಳನ್ನು ಹಾಕಿದ್ದು ರಸ್ತೆಯಲ್ಲದೇ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿ ಸಂಪೂರ್ಣವಾಗಿ ಗಬ್ಬು ವಾಸನೆ ಹೊಡಿಯುತ್ತಿವೆ. ಕೆಲವರು ಪುರಸಭೆ ನಿರ್ಮಿಸಿದ ಚರಂಡಿಯಿಂದ ಮನೆಗಯೊಳಗೆ ನೀರು ನುಗ್ಗಬಾರದು ಎಂದು ಚರಂಡಿಯಲ್ಲಿ ಸ್ವಲ್ಪ ಪ್ರಮಾಣದ ನೀರು ಹೊರಡಲು ಅವಕಾಶವಿರುವಂತೆ ಕಲ್ಲನ್ನು ಹಾಕಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ಚರಂಡಿ ನೀರು ನುಗ್ಗುವಂತಾಗಿದೆ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ:
ಚರಂಡಿಯೊಳಗೆ ಹಾಕಲಾದ ಕಲ್ಲನ್ನು ತೆಗೆಯುವಂತೆ ಪುರಸಭೆ ಅಧಿಕಾರಿಗಳಿಗೆ ಬಡಾವಣೆಯ ನಿವಾಸಿಗರು ಸಾಕಷ್ಟು ಬಾರಿ ತಿಳಿಸಿದ್ದಾರೆ. ಆದರೆ ಕಲ್ಲು ಹಾಕಿ ಮನೆಯವರು ಪ್ರಭಾವಿಗಳಂತೆ ಕಾಣುತ್ತಿದ್ದು ಚರಂಡಿ ವಿಕ್ಷಣೆಗೆ ಬಂದಂತಹ ಪುರಸಭೆ ಅಧಿಕಾರಿಗಳು ಕಲ್ಲು ತೆಗೆಯದೇ ಸ್ಥಳದಿಂದ ಕಾಲು ಕಿತ್ತಿದ್ದಾರೆ. ಇದರಿಂದ ಬಡಾವಣೆಯ ಜನರು ಅನಾನುಕೂಲಕ್ಕೆ ಒಳಗಾಗಿದ್ದಾರೆ.
Be the first to comment