ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪಟ್ಟಣದ ಪಿಲೇಕಮ್ಮ ನಗರದಲ್ಲಿ ಸುನೀಲ್ ಹಡಲಗೇರಿ ಹಾಗೂ ಅವರ ಗೆಳೆಯರ ಬಳಗ ವತಿಯಿಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ೫೧ನೇ ಜನ್ಮದಿನೋತ್ಸವವನ್ನು ಮಾರುತೇಶ್ವರ ದೇವಾಲಯದಲ್ಲಿ ಹಾಲಿನ ಅಭಿಷೇಕ ಮಾಡಿ ೧೧ಜನ ಮತ್ತೈದೆಯರ ಉಡಿತುಂಬುವ ಮೂಲಕ ಸರಲವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರ ಪುತ್ರ ಭರತ ಪಾಟೀಲ ಅವರು, ನಮ್ಮ ತಂದೆಯವರ ಜನ್ಮ ದಿನವನ್ನು ಪ್ರತಿ ವರ್ಷವೂ ಅಭಿಮಾನಿಗಳು ಅದ್ದೂರಿಯಿಂದ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದ ದೇಶದೊಂದಿಗೆ ಮುದ್ದೇಬಿಹಾಳ ಕ್ಷೇತ್ರವೂ ತತ್ತರಿಸಿದ್ದು ಜನರ ನೋವಿನಲ್ಲಿ ಅದ್ದೂರಿ ಆಚರಣೆಗೆ ನಮ್ಮ ಕುಟುಂಬವು ವಿರೋಧಿಸಿದ ಹಿನ್ನೆಲೆ ಅಭಿಮಾನಿಗಳೂ ಇದಕ್ಕೆ ಮಹತ್ವ ನೀಡಿದ್ದು ತುಂಬಾ ಸಂತಸವಾಗಿದೆ. ಅಲ್ಲದೇ ಸರಳ ಆಚರಣೆಯಲ್ಲಿಯೂ ಅದ್ಭುತವಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನೆ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಹಾಗೂ ಶಾಸಕರ ಪುತ್ರಿ ಸುಶ್ಮೀತಾ ಪಾಟೀಲ ಅವರು ೧೧ ಜನ ಮುತ್ತೈದೆಯರಿಗೆ ಉಡಿ ತುಂಬಿದರು.
ಸನ್ಮಾನ:
ತಂದೆಯ ಜನ್ಮದಿನ ಆಚರಣೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಸರಳ ರೀತಿ ಆಚರಣೆ ಮಾಡಿದ ಶಾಸಕರ ಪುತ್ರ ಭರತ ಪಾಟೀಲ, ಶರತ ಪಾಟೀಲ ಹಾಗೂ ಸುನೀಲ ಪಾಟೀಲ ಅವರಿಗೆ ಸುನೀಲ ಹಡಲಗೇರಿ ಬೆಂಬಲಿಗರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮೀತಿ ಅಧ್ಯಕ್ಷ ಶರಣಯ್ಯ ಬುದಿಹಾಳಮಠ, ಶಾಸಕರ ಪುತ್ರರಾದ ಶರತ ಪಾಟೀಲ, ಸುನೀಲ ಪಾಟೀಲ, ವಿಜಯ ಸಾವಂಕೆ, ಮಲ್ಲು ಬಿರಾದಾರ, ಹರೀಶ ಸಿಂಘೆ, ಶಿವರಾಜ ಹಿಪ್ಪರಗಿ, ಸಾಯಿಕುಮಾರ ಲಮಾಣಿ, ರಾಜು ಪಡೇಕನೂರ, ಮುತ್ತು ಬೆನಕಟ್ಟಿ, ಪ್ರಶಾಂತ ತಳವಾರ, ಪ್ರವೀಣ ಉದ್ದಾರ, ಪ್ರವೀಣ ಮಹಾಲಿಂಗಪುರ, ಆಕಾಶ ಲಮಾಣಿ, ರಾಜು ಕರೇಕಲ ಇದ್ದರು.
Be the first to comment