ಶಾಸಕ ನಡಹಳ್ಳಿ ಅವರಿಂದ ಬೆದರಿಕೆ…! ನಮಗೆ ಪೊಲೀಸ ಭದ್ರತೆ ಒದಗಿಸಿ: ಕಾಂಗ್ರೆಸ್ ಬೆಂಬಲಿತ ತಾಪಂ ಸದಸ್ಯರು ಬೆದರಿಕೆ ನಿರಾಕರಿಸಿದ ಶಾಸಕ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ನಾಳೆ ಗುರುವಾರ ನಡೆಯಲಿರುವ ಮುದ್ದೇಬಿಹಾಳ ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧಿಸಿದಂತೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಂದ ಬೆದರಿಕೆ ಇದ್ದು ನಮಗೆ ಪೊಲೀಸ ಬಂದುಬಸ್ತ ೊದಗಿಸಬೇಕೆಂದು ಮುದ್ದೇಬಿಹಾಳ ತಾಲೂಕಿನ ತಾಲೂಕ ಪಂಚಾಯತ ಸದಸ್ಯರಾದ ಲಕ್ಷ್ಮೀಬಾಯಿ ಮಲ್ಲಪ್ಪ ಚಲವಾದಿ, ಪ್ರೇಮಸಿಂಗ್ ಹಣಮಂತ ಚವ್ಹಾಣ, ಲತಾ ಮುತ್ತಿನಶೆಟ್ಟಿ ಗೂಳಿ, ಶ್ರೀಶೈಲ ಮಾಮಲ್ಲಪ್ಪ ಮರೋಳ, ಅಮೀನಪ್ಪ ಹಣಮಂತಪ್ಪ ಹುಗ್ಗಿ ಹಾಗೂ ಗ್ಯಾನಮ್ಮ ಜೆಟ್ಟೆಪ್ಪ ಮಕಾಳಿ ಅವರು ಜಿಲ್ಲಾ ಪೊಲೀಸ ವರಿಷ್ಠಾಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ನಡೆಯಲಿರುವ ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಾರಿ ಗಲಾಟೆ ನಡೆಯುವ ಸಂಭವವಿದೆ. ಈ ಚುನಾವಣೆಯು ಓರ್ವ ಸದಸ್ಯ ಮತದಿಂದ ನಿರ್ಣಾಯಕವಾಗಿದ್ದು ನಮಗೆ ಬೆದರಿಕೆಗಳು ಬರುತ್ತಿವೆ. ಆದ್ದರಿಂದ ನಮಗೆ ಪೊಲೀಸ ಬಂದುಬಸ್ತ ೊದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವರೂ ಪೊಲೀಸ ಬಂದುಬಸ್ತೆಗೆ ಮನವಿ:

ಮಾಜಿ ಸಚಿವ ನಾಡಗೌಡ ಅವರು ಕೂಡಾ ಜು.೨೩ ರಂದು ನಡೆಯಲಿರುವ ತಾಲೂಕ ಪಂಚಾಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹೆಚ್ಚಿನ ಭದ್ರತೆಗಾಗಿ ಡಿವಾಯ್‌ಎಸ್‌ಪಿ ಅವರೇ ಬರಬೇಕು ಹಾಗೂ ಮತಗಟ್ಟೆಯೊಳಗೆ ಸದಸ್ಯರನ್ನು ಬಿಟ್ಟು ಬೇರ್‍ಯಾರಿಗೂ ಪ್ರವೇಶವನ್ನು ನೀಡಬಾರದು ಎಂದು ಪರಿಷ್ಠಾಕಾರಿಗಳಿಗೆ ಮನವಿ ಮಾಡಿದ್ದಾರೆ.

ನಾನು ಬೆದರಿಕೆ ಮಾಡಿ ಗೌಡ್ಕಿ ಮಾಡಿದವನಲ್ಲ: ಶಾಸಕ ನಡಹಳ್ಳಿ

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನನಗೆ ಮತದಾರರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನೇನು ಹಿಂದಿನಿಂದಲೂ ಗೌಡ್ಕಿ ಮಾಡುತ್ತಾ ಬಂದಿಲ್ಲ. ನನ್ನಿಂದ ಯಾರಿಗೂ ಬೆದರಿಕೆಯಾಗಿಲ್ಲ. ಸುಖಾಸುಮ್ಮನೆ ನನ್ನ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಗೆ ಭದ್ರತೆ ಕೇಳಿದ್ದು ನನ್ನ ಕರ್ಯಕರ್ತರಿಗೂ ಒಳ್ಳೆಯದು. ಭದ್ರತೆಯನ್ನು ಪೊಲೀಸರು ಯಾವುದೇ ಚುನಾವಣೆಗೂ ಕೊಡುತ್ತಾ ಬಂದಿದ್ದಾರೆ. ಇದೇನು ಹೊಸದಲ್ಲ ಎಂದು ಅಂಬಿಗ ನ್ಯೂಸ್ ಟಿವ್ಹಿಗೆ ಶಾಸಕ ನಡಹಳ್ಳಿ ಪ್ರತಿಕ್ರೀಯೆ ನೀಡಿದ್ದಾರೆ.

Be the first to comment

Leave a Reply

Your email address will not be published.


*