ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಕರೊನಾ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದ್ದ ಜಾತ್ರೆ, ಪುರಾಣ ಪ್ರವಚನ, ಅನ್ನ ಸಂತರ್ಪಣೆ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸದೆ ಸರ್ಕಾರದ ಆದೇಶವನ್ನು ಪಾಲಿಸಬೇಕೆಂದು ಬಾಗಲಕೋಟೆಯ ಜನಪ್ರಿಯ ಶಾಸಕರಾದ ಡಾ.ವೀರಣ್ಣ ಸಿ ಚರಂತಿಮಠರು ಮತಕ್ಷೇತ್ರದ ಜನರಲ್ಲಿ ತಿಳಿಸಿದ್ದಾರೆ.
ಶ್ರಾವಣ ಮಾಸಾಚಾರಣೆಯಿಂದ 11 ತಿಂಗಳ ಕಾಲ ಮನಕ್ಕೆ ಹೊಸ ಚೈತನ್ಯ, ಸ್ಫೂರ್ತಿ ನೀಡುತ್ತದೆ. ಈ ಮಾಸದಲ್ಲಿ ಧಾರ್ಮಿಕ ಕ್ರಿಯೆಗಳಾದ ಭಜನೆ, ಕೀರ್ತನೆ ಹಾಗೂ ಪ್ರವಚನಗಳನ್ನು ಆಲಿಸಿ, ಪಾಲಿಸುವುದರಿಂದ ನಮ್ಮ ಜೀವನ ಪಾವನವಾಗುತ್ತದೆ. ಮಂದಿರ, ಮಠಗಳಲ್ಲಿ ನಿತ್ಯ ಭಜನೆ ಹಾಗೂ ಪ್ರವಚನ ಜರರುಗುವುದರಿಂದ ಆಂತರಿಕ ಶುದ್ಧಿ ಜೊತೆಗೆ ಮಾನಸಿಕ ಹಿತ ದೊರೆಯುತ್ತದೆ. ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ನಾವು ನಿತ್ಯ ಗುರುವಿನ ಆರಾಧನೆ, ಯೋಗ, ಜಪ, ತಪ, ಪ್ರಾರ್ಥನೆ ಹಾಗೂ ಸಂಗೀತ ಕಾರ್ಯಕ್ರಮಗಳತ್ತ ಮುಖ ಮಾಡಬೇಕಿದೆ.ಆದರೆ ಈ ಎಲ್ಲ ಕಾರ್ಯಗಳಿಗೆ ಕೊರೊನಾ ಮಹಾಮಾರಿ ಬ್ರೆಕ್ ಹಾಕಿದೆ.
Be the first to comment