ಶಹಾಪುರ ತಾಲ್ಲೂಕಿನ ರಸ್ತಾಪುರದಲ್ಲಿ ಓರ್ವ ವ್ಯಕ್ತಿ ಮೃತ, ಸರ್ಕಾರದ ನೀತಿ ಪ್ರಕಾರ ಅಂತ್ಯ ಸಂಸ್ಕಾರ. ಮೃತ ವ್ಯಕ್ತಿಗೆ ಕೊರೋನಾ ವೈರಸ್ ತಗುಲಿರುವ ಶಂಕೆ

ವರದಿ: ರಾಘವೇಂದ್ರ ಮಾಸ್ತರ

ಜಿಲ್ಲಾ ಸುದ್ದಿಗಳು

ಯಾದಗಿರಿ: 

ಅನಾರೋಗ್ಯದಿಂದ 50 ವರ್ಷದ ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ನೆಡದಿದೆ. ಮೃತ ವ್ಯಕ್ತಿ ಕಳೆದ ಹತ್ತು ವರ್ಷಗಳ ಹಿಂದೆ ಹೃದಯಚಿಕಿತ್ಸೆಗೆ ಒಳಗಾಗಿದ್ದ ಎನ್ನಲಾಗಿದ್ದು. ಇತ್ತೀಚೆಗೆ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ, ಕಲಬುರ್ಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಪ್ರಥಮದಲ್ಲಿ ಕೊರೊನಾ ವೈರಸ್ ಪರೀಕ್ಷೆ ಗೆ ಒಳಪಡಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು.



ಔಷದೋಪಚಾರಗಳು ಫಲಿಸದೇ ಈ ವ್ಯಕ್ತಿ ರವಿವಾರ ಮೃತಪಟ್ಟಿದ್ದನು. ಇನ್ನೂ ತಪಾಷಣೆ ವರದಿಗಾಗಿ ಕಾಯಲಾಗುತ್ತಿದ್ದು, ಇಂದು ಮೃತ ಶವವನ್ನು ಸರ್ಕಾರದ ನೀತಿ ಪ್ರಕಾರ ಸಂಸ್ಕಾರ ಮಾಡಲಾಯಿತು.ಕೊರೊನಾ ಶಂಕೆ ವ್ಯಕ್ತವಾಗುತ್ತಿದ್ದು ಪ್ರಸ್ತುತ ವರದಿ ಬರುವವರೆಗೆ ಮೃತ ಕುಟುಂಬಸ್ಥರನ್ನು ಹೊಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ.

ವರದಿ ದೃಢಪಡಿಸಿಕೊಂಡ ನಂತರದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ವಾಬ್ ಪರೀಕ್ಷೆಗೆ ಒಳಪಡಿಸಲಾಗುವದು ಎಂದು ತಾಲುಕಾ ವೈಧ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ಪತ್ರಿಕೆಗೆ ತಿಳಿಸಿದ್ದಾರೆ .
ಮೃತ ವ್ಯಕ್ತಿಯ ಕೇರಿಯನ್ನು ಸೀಲ್ ಡೌನ್ ಸಹ ಮಾಡಲಾಗುತ್ತಿದೆ. ಎಂದು ವೈದ್ಯರು ತಿಳಿಸಿದ್ದಾರೆ.



 

Be the first to comment

Leave a Reply

Your email address will not be published.


*