ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಬೆಳಗಿನ ಉಪಹಾರಕ್ಕೆ ಹಳಸಿದ ಅನ್ನ ನೀಡುತ್ತಿರುವ ಜಿಲ್ಲಾ ಆರೋಗ್ಯ ಅಧಿಕಾರಿಗಳು ಜಿಲ್ಲಾ ಆಡಳಿತದ ನಿರ್ಲಕ್ಷ ಧೋರಣೆಯಿಂದ ಕೋರೋಣ ರೋಗಿಗಳಿಗೆ ಸಹಾಯ ಮಾಡುವರು ಯಾರು ಇಲ್ಲದಂತ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ಇದೆ.
ಕೊರೊನಾ ಒಂದು ಮಹಾಮಾರಿ ಈ ಕೊರೊನಾದಲ್ಲಿ ಸಿಲುಕಿರುವ ರೋಗಿಗಳನ್ನು ಮಕ್ಕಳಂತೆ ಜೋಪಾನ ಮಾಡಿ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರ ಇಂದು ಸಾಕಷ್ಟು ಹಣಕಾಸಿನ ನೆರವು ನೀಡುತ್ತಿದ್ದರು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಅಲ್ಲಿರುವ ಸಿಬ್ಬಂದಿಯವರ ನಿಷ್ಕಾಳಜಿತನದಿಂದ ಅಲ್ಲಿರುವ ರೋಗಿಗಳಿಗೆ ಸರಿಯಾಗಿ ಆಹಾರದ ವ್ಯವಸ್ಥೆ ಆಗುತ್ತಿಲ್ಲ,ಅಲ್ಲದೆ ಅಲ್ಲಿ ಶೌಚ ಹಾಗೂ ಸ್ನಾನಕ್ಕೂ 20 ಜನರ ನಡುವೆ ಒಂದೆ ಚಂಬನ್ನು ಉಪಯೋಗಿಸಲಾಗುತ್ತಿದೆ ಎಂದು ಅಲ್ಲಿರುವ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ರೋಗಿ ಬಲಿಷ್ಠರಿದ್ದರೆ ಹಾಸ್ಟೆಲ್ ಗೆ ಶಿಪ್ಟ್ ಮಾಡಿ ಒಳ್ಳೆ ಉಪಚಾರ ನೀಡುವ ಭರವಸೆ ನೀಡುತ್ತಾರೆ ರೋಗಿ ಬಡವ ಮತ್ತು ಅಸಹಾಯಕನಾದರೆ ಇದ್ದ ವ್ಯವಸ್ಥೆಯಲ್ಲೆ ಉಪಚಾರ ಪಡೆಯಬೇಕು.ದಿನೆ ದಿನೆ ಸೊಂಕಿತರ ಸಂಖ್ಯೆ ಹೆಚ್ಚುತಿದ್ದು ರೋಗಿಗಳನ್ನು ಗುಣಪಡಿಸಲು ಆಸ್ಪತ್ರೆಯಲ್ಲಿ ಪೌಷ್ಠಿಕ ಆಹಾರದ ಕೊರತೆ ಕಂಡುಬರುತ್ತಿದ್ದು ಜನರಲ್ಲಿ ಆತಂಕ ಶುರುವಾಗಿದೆ.
ಕೆಟ್ಟ ಮೇಲೆ ಬುದ್ದಿ ಬಂತು :
ಸದ್ಯ ಕೋವಿಡ್-19 ಸೊಂಕಿತ ರೋಗಿಗಳಿಗೆ ಆಹಾರ ಪೂರೈಸುತ್ತಿದ್ದ ಪೂರೈಕೆದಾರರನ್ನು ಬದಲಾಯಿಸಲಾಗಿದ್ದು ಇನ್ನು ಮುಂದೆ ನಮ್ಮ ಆಸ್ಪತ್ರೆಯಲ್ಲಿಯೇ ಅಡುಗೆ ತಯಾರಿಸುವವರಿಂದ ತಯಾರಿಸಿದ ಆಹಾರವನ್ನೆ ನೀಡಲು ನಿರ್ಧರಿಸಲಾಗಿದೆ ಎಂದು ಡಾ.ಪ್ರಕಾಶ ಮಾಹಿತಿ ತಿಳಿಸಿದ್ದಾರೆ.
Be the first to comment