ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿ.

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ: ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸೇರಿ ಒಟ್ಟು 26 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 4 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.ಉಳಿದ 22 ಸಿಬ್ಬಂದಿಗಳಲ್ಲಿ ಎಸ್ಪಿ ಕಚೇರಿಯ 6 ಜನ ಸಿಬ್ಬಂದಿ, ಬನಹಟ್ಟಿ-ತೇರದಾಳ ಕಚೇರಿಯ 2ಜನ ಸಿಬ್ಬಂದಿ, ಗುಳೇದಗುಡ್ಡ ಮತ್ತು ಕೆರೂರು 6 , ಬಾಗಲಕೋಟೆ,ನವನಗರದವರು 3, 1 ಡಿಆರ್, ಇಲ್ಲಕಲ್ ಕಚೇರಿಯ 4 ಜನ ಸಿಬ್ಬಂದಿ ಯವರು ಕೋವಿಡ್ ೧೯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*