ಬಾಗಲಕೋಟೆ:2020-21 ನೇ ಸಾಲಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳು covid-19 ನಿಂದ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಯ ಕಲಿಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಮತ್ತು ನಿಧಾನಗತಿಯಲ್ಲಿ ಸಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಿದ್ದು DESERT ನಿರ್ದೇಶಕರು 8 ರಿಂದ 10 ನೇ ತರಗತಿಗೆ 20.07.2020 ರಿಂದ ವಿಡಿಯೋ ಪಾಠ ಪ್ರಸಾರ ಮಾಡಲು ಕ್ರಮ ಕೈಗೊಂಡಿರುತ್ತಾರೆ.ವಿಡಿಯೋ ಪಾಠಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ.ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.30 ರಿಂದ 11.00 ಗಂಟೆಯವರೆಗೆ ಮತ್ತು 11.30 ರಿಂದ 12.00 ರವರೆಗೆ. ಹಾಗೂ ಮಧ್ಯಾಹ್ನ 3.00 ರಿಂದ 4.30 ಮತ್ತು 5.00 ರಿಂದ 5.30 ರವರೆಗೆ.ಬೋಧನಾ ಸಮಯ: 30 ನಿಮಿಷಗಳು. ಮೊದಲ 4 ವಾರ ಸೇತುಬಂಧ – ಹಿಂದಿನ ವರ್ಷದ ಸಾಮರ್ಥ್ಯ ಮತ್ತು ಕೌಶಲ್ಯಗಳ ಪುನರ್ ಮನನ.
ಮೇಲಿನ ವೇಳಾಪಟ್ಟಿ ಪ್ರಕಾರ ಚಂದನ ವಾಹಿನಿಯಲ್ಲಿ 8,9&10 ನೇ ತರಗತಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮದ ಮೂಲಕ ವಿಷಯಗಳ ಭೋದನೆ & ಚರ್ಚೆ ಇರುತ್ತದೆ. ಎಲ್ಲ ಪ್ರೌಢಶಾಲಾ ಮುಖ್ಯಗುರುಗಳು ವೇಳಾಪಟ್ಟಿಯನ್ನು ತಮ್ಮ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ಅಥವಾ ವಾಟ್ಸಾಪ್ ಗ್ರೂಪ್ ಮೂಲಕ ತಿಳಿಸಿ, ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿ ವೀಕ್ಷಣೆ ಮಾಡಿದ ಎಲ್ಲ ವಿಷಯಗಳ ಟಿಪ್ಪಣಿ ಮಾಡಿಕೊಳ್ಳಲು ತಿಳಿಸಿ ಸದರಿ ವಿಷಯಗಳ ಜವಾಬ್ದಾರಿಯನ್ನು ತಮ್ಮ ಶಾಲಾ ವಿಷಯ ಶಿಕ್ಷಕರಿಗೆ ನೀಡಿ ಪ್ರತಿ ಅವಧಿಯಲ್ಲಿ ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ, ಪ್ರತಿ ದಿನದ ಎಲ್ಲ ವಿಷಯ & ಅವಧಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಅವಧಿವಾರು, ವಿಷಯವಾರು ಮಾಹಿತಿ ಕ್ರೋಢೀಕರಿಸಿ ಪ್ರತಿ ದಿನ ತಾವು ವಾಟ್ಸಾಪ್ ಮೂಲಕ ಕಾರ್ಯಾಲಯಕ್ಕೆ ಸಲ್ಲಿಸಲು ತಿಳಿಸಲಾಗಿದೆ.
ಮುಖ್ಯ ಶಿಕ್ಷಕರು SDMC ಸಭೆ ಕರೆದು ಎಲ್ಲ ಮಕ್ಕಳು ವಿಡಿಯೋ ಪಾಠ ನೋಡುವಂತೆ ಕ್ರಮ ವಹಿಸುವುದು.TV ಇಲ್ಲದಿರುವ ಮಕ್ಕಳಿದ್ದರೆ ಬೇರೆ ಮನೆಯಲ್ಲಿ ವ್ಯವಸ್ಥೆ ಮಾಡುವಂತೆ ಕ್ರಮ ವಹಿಸಲು ತಿಳಿಸುವುದು. ಮುಖ್ಯ ಶಿಕ್ಷಕರು ಶಿಕ್ಷಕವಾರು ಮಕ್ಕಳ ಗುಂಪು ರಚನೆ ಮಾಡಿ ಮಕ್ಕಳ ಕಲಿಕಾ ಚಟುವಟಿಕೆಗಳ ಮತ್ತು ಗೃಹ ಪಾಠಗಳ ನಿರ್ವಹಣೆಗೆ ಕ್ರಮ ಕೈಗೊಳ್ಳುವುದು.
ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಶಿಕ್ಷಕರು ಒಂದುಗೂಡಿ ಇಲಾಖೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಯಶಸ್ಸಿಗೊಳಿಸೋಣ. ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಿ ಗಟ್ಟಿಗೊಳಿಸೋಣ.
Be the first to comment