ಹರಿಹರದಲ್ಲಿ ಲಾಕ್ ಡೌನ್ ವಿಚಾರಕ್ಕಾಗಿ, ‘ಕರೋನ ತಂದ, ಜಗಳ’

ವರದಿ: ಪ್ರಕಾಶ ಮಂದಾರ.

ಹರಿಹರ:-ಚೀನಾದಲ್ಲಿ ಜನ್ಮ ತಾಳಿದ ಕರೋನಾ ವೈರಸ್ ಇಡೀ ವಿಶ್ವಾದ್ಯಂತ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ.ಭಾರತದಲ್ಲೂ ಈ ವೈರಸ್ಸಿನ ಅವಾಂತರಗಳು ಒಂದೆರಡಲ್ಲ .

ಹೇಳಿ ಕೇಳಿ ಕರೋನಾ ಚೀನಾ ರಾಷ್ಟ್ರದ ವೈರಸ್, ಚೀನಾ ರಾಷ್ಟ್ರದಂತೆ ಈ ವೈರಸ್ಸು ದೇಶದ ಜನರ ಜನರ ನಡುವೆ ಅನೇಕ ವೈಮನಸ್ಸುಗಳನ್ನು ಸೃಷ್ಟಿ ಮಾಡುತ್ತಿದೆ .

ದೇಶದಲ್ಲಿ ಕರೋನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಕಳೆದ ಮೂರು ತಿಂಗಳು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು .ಅಂದು ಲಾಕ್ ಡೌನ್ ಘೋಷಣೆ ಮಾಡಿದ್ದ ಪರಿಣಾಮವೋ ಏನೋ ಕರೋನಾ ವೈರಸ್ ನಿಯಂತ್ರಣದಲ್ಲಿ ಇತ್ತು.

ಲಾಕ್ ಡೌನ್ ತೆರವುಗೊಳಿಸಿದೆ ತಡ ಒಂದಕ್ಕೆ ಎರಡು ಪಟ್ಟು ಕರೋನಾ ವೈರಸ್ ಹರಡುವಿಕೆಯ ಪ್ರಮಾಣ ಏರತೊಡಗಿತ್ತು.ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೂ ಕರೋನಾ ವೈರಸ್ ಹರಡಿತ್ತು. ವಿಧಿಯಿಲ್ಲದೆ ನಗರ ಪ್ರದೇಶಗಳನ್ನು ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ಸ್ಥಳೀಯ ತಾಲ್ಲೂಕು ಆಡಳಿತ ಬರಬೇಕಾಯಿತು.

ಅದರಂತೆ ಹರಿಹರದ ತಾಲ್ಲೂಕು ಆಡಳಿತವು ಸಹ ತಾಲ್ಲೂಕಿನಲ್ಲಿ ಕರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಮಧ್ಯಾಹ್ನ ಎರಡು ಗಂಟೆಯ ನಂತರ ನಗರದ ವರ್ತಕರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡುವಂತೆ ಸ್ಥಳೀಯ ಶಾಸಕ ಎಸ್ ರಾಮಪ್ಪನವರ ನೇತೃತ್ವದಲ್ಲಿ ದಿನಾಂಕ 24/6/2020.ತೀರ್ಮಾನಿಸಿ ಹರಿಹರ ನಗರವನ್ನು ಲಾಕ್ ಡೌನ್‌ ಮಾಡಲಾಯಿತು.

ಕಳೆದ ವಾರ ಹರಿಹರದ ಮಾಜಿ ಶಾಸಕ ಬಿಪಿ ಹರೀಶ್ ನೇತೃತ್ವದಲ್ಲಿ ಸ್ಥಳೀಯ ತಾಲೂಕಾಡಳಿತ ಮತ್ತೊಮ್ಮೆ ನಗರದ ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ನಡೆಸಿತ್ತು .ಅಂದಿನ ಸಭೆಯಲ್ಲಿ ಸಹ ನಗರದ ಕೆಲವು ವರ್ತಕರು ಉಪಸ್ಥಿತರಿದ್ದರು ಅಂದಿನ ಸಭೆಯ ನಿರ್ಣಯದಂತೆ ವರ್ತಕರ ಹಿತದೃಷ್ಟಿಯಿಂದ ಲಾಕ್ ಡೌನ್ ನನ್ನು ಮಧ್ಯಾಹ್ನದ ಬದಲು ರಾತ್ರಿ ಎಂಟು ಗಂಟೆಯ ನಂತರ ಮಾಡುವಂತೆ ಮಾಜಿ ಶಾಸಕರು ತೀರ್ಮಾನಿಸಿದರೂ, ತಾಲ್ಲೂಕಾಡಳಿತ ನಿರ್ಣಯಿಸಿತ್ತು.

ಮಾಜಿ ಶಾಸಕರ ನೇತೃತ್ವದಲ್ಲಿ ತಾಲೂಕಾಡಳಿತ ಮತ್ತೊಮ್ಮೆ ಸಭೆ ಸೇರಿ ರಾತ್ರಿ ಎಂಟು ಗಂಟೆಯ ನಂತರ ಲಾಕ್ ಡೌನ್ ಸಮಯ ನಿಗದಿಪಡಿಸಿದ್ದು ಸ್ಥಳೀಯ ಹಾಲಿ ಶಾಸಕ ಎಸ್ ರಾಮಪ್ಪ ಹಾಗೂ ಅವರ ಬೆಂಬಲಿಗರನ್ನು ಕೆರಳಿಸಿತ್ತು .

ಕಳೆದ ನಾಲ್ಕು ದಿನಗಳ ಹಿಂದೆ ನಗರದ ವಿಶ್ರಾಂತಿ ಗೃಹದಲ್ಲಿ ಶಾಸಕರ ನೇತೃತ್ವದಲ್ಲಿ ಕೆಲವು ವರ್ತಕರ ಸಮ್ಮುಖದಲ್ಲಿ ನಗರದಲ್ಲಿ ಲಾಕ್ ಡೌನ್ ವಿಧಿಸುವ ತೀರ್ಮಾನದ ಸಭೆಯನ್ನು ನಡೆಸಿದರು.

ಶಾಸಕರ ನೇತೃತ್ವದಲ್ಲಿ ನಗರದ ವಿಶ್ರಾಂತಿ ಗೃಹದಲ್ಲಿ ಸಭೆ ನಡೆಸಿದ ಮಾಹಿತಿ ತಾಲ್ಲೂಕು ಆಡಳಿತಕ್ಕೆ ಬಂದ ಕಾರಣ ಇಂದು ಮತ್ತೊಮ್ಮೆ ನಗರದ S.J.V.P ಕಾಲೇಜು ಸಭಾಂಗಣದಲ್ಲಿ ಹಾಲಿ ಮಾಜಿ ಶಾಸಕರ ನೇತೃತ್ವದಲ್ಲಿ ನಗರದ ವರ್ತಕರ ಸಮ್ಮುಖದಲ್ಲಿ ತಾಲ್ಲೂಕು ಆಡಳಿತ ಇಂದು ಸಭೆ ನಡೆಸಿತು.

ಇಂದಿನ ಸಭೆಯಲ್ಲಿ ನಗರ ಪ್ರದೇಶದಲ್ಲಿ ಲಾಕ್ ಡೌನ್ ಘೋಷಣೆಯ ಸಮಯ ನಿಗದಿಪಡಿಸುವ ವಿಚಾರದಲ್ಲಿ ಹಾಲಿ ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು .

ಹಾಲಿ ಮಾಜಿ ಶಾಸಕರ ನಡುವಿನ ಮಾತಿನ ಚಕಮಕಿಯಲ್ಲಿ ತಾಲ್ಲೂಕು ಆಡಳಿತ, ನಗರಸಭೆ,ಪೊಲೀಸ್ ಇಲಾಖೆಯ ಅಧಿಕಾರಿಗಳು,ಮೂಕ ವಿಸ್ಮಿತರಾಗಿ ನೋಡುತ್ತಿರುವ ದೃಶ್ಯ ಕಂಡು ಬಂದಿತು .

ಮಾತಿನ ಚಕಮಕಿ ಇನ್ನೇನು ವಿಕೋಪಕ್ಕೆ ಹೋಗುತ್ತದೆ ಎನ್ನುವ ಷ್ಟರಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಹಾಲಿ ಮಾಜಿ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು .ನಂತರ ಮಾತನಾಡಿದ ನಗರ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ.ಕರೋನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಲಾಕ್ ಡೌನ್ ವಿಧಿಸುವ ಸಂಬಂಧದ ಸಭೆಯಲ್ಲಿ ವರ್ತಕರ ಹಿತ ಕಾಪಾಡಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಅನಾಗರಿಕರಂತೆ ನಾಗರಿಕರ ಸಮ್ಮುಖದಲ್ಲಿ ವರ್ತಿಸುವುದು ಶೋಭೆ ತರುವಂಥದ್ದಲ್ಲ .ಈಗಾಗಲೇ ಕರೋನಾ ವೈರಸ್ ಹರಡುವಿಕೆಯ ವೇಗ ಹೆಚ್ಚಾಗಿದೆ ಜನರ ಪ್ರಾಣ ಕಾಪಾಡಬೇಕಾಗಿದೆ ಇಂತಹ ಸಂದರ್ಭದಲ್ಲಿ ನಾಯಕರು, ಸಾರ್ವಜನಿಕರು,ತಾಳ್ಮೆಯಿಂದ ವರ್ತಿಸಿ ಎಲ್ಲರಿಗೂ ಅನುಕೂಲಕರವಾಗುವ ಸಮಯವನ್ನು ನಿಗದಿಪಡಿಸಬೇಕು ಎಂದು ಹೇಳಿದರು .

ಇಂದು ನಡೆದ ಸಭೆಯಲ್ಲಿ ‘ಕರೋನ ತಂದ ಜಗಳ’ದಿಂದ ರಾಜಕೀಯ ಪ್ರತಿಷ್ಠೆಗಾಗಿ ಮಾತಿನ ಚಕಮಕಿ ನಡೆಸಿರುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ.

ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಆಳುವಂಥ ಸರಕಾರಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಕೈಜೋಡಿಸಬೇಕು.ಜನರ ಜೀವ,ಜೀವನ ಎರಡು ಕಾಪಾಡಬೇಕು ಅದು ಎಲ್ಲರ ಕರ್ತವ್ಯವೂ ಹೌದು.

ಯಾರು ಏನೇ ಮಾತಿನ ಚಕಮಕಿ ನಡೆಸಲಿ ಸಾರ್ವಜನಿಕರಾದ ನಾವು ಕೊರೊನಾ ನಿಯಂತ್ರಣದ ವಿಚಾರವಾಗಿ ಜಗಳವಾಡದೆ ಸಾಮಾಜಿಕ ಅಂತರ ಕಾಪಾಡಿಕೊಂಡು,ಮಾಸ್ಕ್ ಅನ್ನು ಬಳಸಿ ನಮ್ಮ ನಂಬಿದ ಕುಟುಂಬವನ್ನು ರಕ್ಷಣೆ ಮಾಡೋಣ,ಆ ನಿಟ್ಟಿನಲ್ಲಿ ಆಳುವಂಥ ಸರ್ಕಾರದ ಜೊತೆ ಕೈ ಜೋಡಿಸೋಣ, ಸಾಗೋಣ,ಸ್ವಯಂ ಪ್ರೇರಿತ ಲಾಕ್ ಡೌನ್ ಹಾಕಿಕೊಳ್ಳೋಣ ಎಂಬುದೇ ನಮ್ಮ ಮಾಧ್ಯಮದ ಕಳಕಳಿಯಾಗಿದೆ .

Be the first to comment

Leave a Reply

Your email address will not be published.


*