ಬಾಗಲಕೋಟೆ : ಜಿಲ್ಲೆಯಲ್ಲಿ ನಡೆಯುತ್ತಿದ್ದಂತ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದಂತ ಶಿಕ್ಷಕರೊಬ್ಬರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ನಿರತರಾದಂತ ಶಿಕ್ಷಕರಿಗೂ ಆತಂಕ ಶುರುವಾಗಿದೆ.ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುತ್ತಿದ್ದಂತ SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಶಿಕ್ಷಕನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಜು.13 ರಿಂದ 17ರವರೆಗೆ ನಡೆದಿದ್ದ ವಿಜ್ಞಾನ ವಿಷಯ ಮೌಲ್ಯಮಾಪನದಲ್ಲಿ ತೊಡಗಿದ್ದ 50 ವರ್ಷದ ಶಿಕ್ಷಕನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. 20 ಮೌಲ್ಯಮಾಪನ ನಿರತ ಶಿಕ್ಷಕರೊಂದಿಗೆ ಮೌಲ್ಯಮಾಪನದಲ್ಲಿ ಶಿಕ್ಷಕರು ತೊಡಗಿದ್ದರು. ಇದೀಗ ಮೌಲ್ಯಮಾಪನ ನಿರತನಾಗಿದ್ದಂತ ಶಿಕ್ಷಕನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟ ಹಿನ್ನಲೆಯಲ್ಲಿ, ಇತರೆ ಶಿಕ್ಷಕರಿಗೂ ಆತಂಕ ಶುರುವಾಗಿದೆ.
Be the first to comment