ಹರಿಹರ:ಕರೋನಾ ವೈರಸ್ ಹರಡು ಕೆಯ ನಿಯಂತ್ರಣದ ವಿಚಾರದಲ್ಲಿ ಹರಿಹರದ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲ.? ಹೀಗೊಂದು ಪ್ರಶ್ನೆ ಕಾಡ್ತಿದೆ ತಾಲ್ಲೂಕಿನ ಜನಸಾಮಾನ್ಯರಲ್ಲಿ .ಕರೋನಾ ವೈರಸ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಕಾನೂನು ಆದೇಶ ತರುತ್ತಿರುವುದು ನೋಡಿದರೆ ಎಲ್ಲೋ ಒಂದು ಕಡೆ ಹರಿಹರದ ತಾಲ್ಲೂಕು ಆಡಳಿತ ತೊಘಲಕ್ ಆಡಳಿತವನ್ನು ನೆನಪಿಗೆ ತರುತ್ತಿದೆ .
ಕರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಹರಿಹರದ ತಾಲ್ಲೂಕು ಆಡಳಿತ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ದಿನಾಂಕ 24 ರಂದು ಹರಿಹರದ ಶಾಸಕ ಎಸ್ ರಾಮಪ್ಪನವರ ಅಧ್ಯಕ್ಷತೆಯಲ್ಲಿ ,ನಗರದ ವರ್ತಕರ ಸಮ್ಮುಖದಲ್ಲಿ ಹರಿಹರ ನಗರವನ್ನು ಮಧ್ಯಾಹ್ನ 2 ಗಂಟೆಯ ನಂತರ ಲಾಕ್ ಡೌನ್ ಮಾಡುವ ತೀರ್ಮಾನಕ್ಕೆ ಬಂದು ಅಂದೇ ಮುಂದಿನ ಆದೇಶದವರೆಗೂ ಹರಿಹರ ನಗರ ಲಾಕ್ ಡೌನ್ ಎಂದು ಘೋಷಣೆ ಮಾಡಲಾಗಿತ್ತು .
ಅಂದು ಶಾಸಕರ ಅಧ್ಯಕ್ಷತೆಯಲ್ಲಿ ಹರಿಹರ ನಗರ ಮಧ್ಯಾಹ್ನದ ನಂತರ ಲಾಕ್ ಡೌನ್ ತೀರ್ಮಾನಕ್ಕೆ ಸಂಬಂಧಿಸಿದಂತೆ ಕೆಲವು ವರ್ತಕರು ಹಾಗೂ ಬೀದಿಬದಿ ವ್ಯಾಪಾರ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಕಾರಣ ಮತ್ತೊಮ್ಮೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸಂಜೆ 5 ಗಂಟೆಯ ನಂತರ ಲಾಕ್ ಡೌನ್ ಮಾಡುವ ತೀರ್ಮಾನಕ್ಕೆ ಬರಲಾಯಿತು .ಆದರೆ ಬಾರ್ ಗಳಿಗೆ ರಿಯಾಯಿತಿ ನೀಡಿ ಬೀದಿ ಬದಿ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಬರೆ ಎಳೆಯಲಾಯಿತು .
ತಾಲ್ಲೂಕು ಆಡಳಿತದ ಮಲತಾಯಿ ಧೋರಣೆಯನ್ನು ಖಂಡಿಸಿ ಹರಿಹರದ ಮಾಜಿ ಶಾಸಕರ ನೇತೃತ್ವದಲ್ಲಿ ಮತ್ತೊಮ್ಮೆ ವರ್ತಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಹರಿಹರದ ಪೊಲೀಸ್ ಠಾಣಾ ಆವರಣದಲ್ಲಿ ಮತ್ತೊಮ್ಮೆ ಸಭೆ ಸೇರಿ ಹರಿಹರ ನಗರವನ್ನು ರಾತ್ರಿ 8 ಗಂಟೆಯ ನಂತರ ಲಾಕ್ ಡೌನ್ ಮಾಡುವ ತೀರ್ಮಾನಕ್ಕೆ ಬರಲಾಯಿತು ಮಾಜಿ ಶಾಸಕರು ಹರಿಹರದ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವರ್ತಕರ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದರು ಎಂಬ ಮಾತು ಕೇಳಿಬಂದಿತ್ತು.
ಹರಿಹರದ ಮಾಜಿ ಶಾಸಕ ಬಿಪಿ ಹರೀಶ್ ಇವರು ಹರಿಹರದ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಲಾಕ್ ಡೌನ್ ಅವಧಿಯನ್ನು ವಿಸ್ತರಣೆ ಮಾಡಲಾಯಿತು, ಇದರಿಂದ ಹರಹರದ ಹಾಲಿ ಶಾಸಕ S.ರಾಮಪ್ಪನವರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಹಾಗಾದರೆ ನಮ್ಮ ಶಾಸಕರು ವರ್ತಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಹಿತದೃಷ್ಟಿ ಗಮನಿಸಿಲ್ಲವೇ.? ಅವರು ಸಹ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರ ಹಿತದೃಷ್ಟಿ ಹಾಗೂ ತಾಲ್ಲೂಕಿನ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಅವರು ಸಂಜೆ ಐದು ಗಂಟೆಯ ನಂತರ ಲಾಕ್ ಡೌನ್ ಮಾಡುವ ತೀರ್ಮಾನಕ್ಕೆ ಬಂದಿದ್ದರು ಆದರೂ ಅವರ ಮಾತನ್ನು ಧಿಕ್ಕರಿಸಿ ತಾಲ್ಲೂಕು ಆಡಳಿತ ಮಾಜಿ ಶಾಸಕರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸುವ ಅವಶ್ಯಕತೆ ಏನು ಇತ್ತು .?ಎಂಬ ಪ್ರಶ್ನೆಗಳನ್ನು ಮಾಡತೊಡಗಿದರು .
ಹಾಲಿ ಮಾಜಿ ಶಾಸಕರ ಹಾಗೂ ಪಕ್ಷದ ಕಾರ್ಯಕರ್ತರ ಪ್ರಶ್ನೆಗಳಿಂದ ದಂಗಾದ ತಾಲೂಕಾಡಳಿತ ಇಂದು ಮತ್ತೊಮ್ಮೆ ನಗರದ S.J.V.P ಕಾಲೇಜಿನ ಸಭಾಂಗಣದಲ್ಲಿ ಲಾಕ್ ಡೌನ್ ಹೇರುವ ಕುರಿತು ಮತ್ತೊಮ್ಮೆ ಸಭೆ ಕರೆಯಲಾಗಿತ್ತು .
ಇಂದು ನಡೆದ ಸಭೆಯಲ್ಲಿ ಹಾಲಿ ಮಾಜಿ ಹಾಗೂ ವರ್ತಕರ ಸಮ್ಮುಖದಲ್ಲಿ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದು ಸಂಜೆ 6 ಗಂಟೆಯ ನಂತರ ಹರಿಹರ ನಗರವನ್ನು ಲಾಕ್ ಡೌನ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು .
ಇಂದು ತೆಗೆದುಕೊಂಡ ತೀರ್ಮಾನದಿಂದ ತಾಲ್ಲೂಕು ಆಡಳಿತ ಒಂದು ತಿಂಗಳಲ್ಲಿ ನಾಲ್ಕು ಬಾರಿ ಸಭೆ ನಡೆಸಿ ಲಾಕ್ ಡೌನ್ ಸಮಯವನ್ನು ಪರಿಪರಿಯಾಗಿ ಬದಲಾಯಿಸುವುದರ ಮೂಲಕ ಹಿಂದೆ ದೆಹಲಿಯ ರಾಜನಾಗಿದ್ದ ತೊಘಲಕ್ ನಡೆಸಿದ ದರ್ಬಾರ್ ಅನ್ನು ಹರಿಹರದ ತಾಲೂಕಾಡಳಿತವು ನಡೆಸಿತ್ತೇ ಎಂಬ ಅನುಮಾನ ಕಾರ ತೊಡಗಿದೆ .
ಇಂದು ತೆಗೆದುಕೊಂಡ ತೀರ್ಮಾನ ಇನ್ನೆಷ್ಟು ದಿನಗಳವರೆಗೆ ಇರುತ್ತದೆಯೋ ಗೊತ್ತಿಲ್ಲ ,ಇದು ರಾಜಕೀಯದ ಪ್ರತಿಷ್ಠೆಯ ಕಾರಣದಿಂದ ಮುಂದೆ ಯಾವ ತಿರುವು ಬೇಕಾದರೂ ಪಡೆಯಬಹುದು.
ತಾಲ್ಲೂಕಿನ ಜನತೆಗೆ ಕರೋನಾ ವೈರಸ್ ಭಯದ ನಡುವೆಯೂ ತಾಲ್ಲೂಕು ಆಡಳಿತದ ಅಂಧ ದರ್ಬಾರು ನಗರದ ಜನತೆಗೆ ಪುಗಸಟ್ಟೆ ಮನರಂಜನೆ ನೀಡುತ್ತಿರುವುದಂತೂ ಸತ್ಯ.
ಕರೋನಾ ವೈರಸ್ ನಿಯಂತ್ರಿಸುವ ವಿಚಾರದಲ್ಲಿ ಹರಿಹರದ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಯಿತೇ.?ಮುಂದಿನ ದಿನದಲ್ಲಿ ತಾಲ್ಲೂಕಿನಲ್ಲಿ ಇನ್ನಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ .
ಸಾರ್ವಜನಿಕರು ತಾವೇ ಸ್ವತಃ ದಿಗ್ಬಂಧನವನ್ನು ಹಾಕಿಕೊಂಡು ಅನಾವಶ್ಯಕವಾಗಿ ನಗರಕ್ಕೆ ಆಗಮಿಸದೆ ಸಾಮಾಜಿಕ ಅಂತರ ಕಾಪಾಡಿ ,ಮಾಸ್ಕ್ ಬಳಸಿ,ನಿಮ್ಮನ್ನು ನಂಬಿದ ನಿಮ್ಮ ಕುಟುಂಬ ರಕ್ಷಣೆಯ ಜವಾಬ್ದಾರಿ ಇದೆ ಎಂಬುದನ್ನು ಮರೆಯಬೇಡಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
Be the first to comment