ಸಮಾಜ ಕಲ್ಯಾಣ ಸಚಿವ ಕಾರಜೋಳ ವಿರುದ್ಧ ಕೋಲಿ ಸಮಾಜ ಆಕ್ರೊಶ. ಕುಮಾರ ನಾಯಕ ಮೇಲೆ ಎಸ ಟಿ ಎಸ ಸಿ ಕಾಯ್ದು ಅಡಿ ಕೇಸ ದಾಖಲಿಸಲು ಆಗ್ರಹ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಸಮಾಜ ಕಲ್ಯಾಣ ಪ್ರಿನ್ಸಿಪಲ್ ಸೆಕ್ರೆಟರಿ ಕುಮಾರ ನಾಯಕ  ಮೇಲೆ ಎಸ ಟಿ ಎಸ ಸಿ ಕಾಯ್ದು ಅಡಿಯಲ್ಲಿ ಕೇಸ ದಾಖಲಿಸಲು ಆಗ್ರಹಸಿದರು.

  • ಮುಧೋಳ ಧರಣಿಗೆ ನೀಡದ ಪೋಲಿಸರು
  • ಬೇಡಿಕೆ ಸ್ಪಂದಿಸದೆ ಇದರೆ ಹೋರಾಟ ಚುರುಕು

ಬಾಗಲಕೋಟ:- ತಳವಾರ ಸಮಾಜವನ್ನು ಎಸ್‌ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬಾಗಲಕೋಟ ಜಿಲ್ಲೆಯ ಮುಧೋಳದ ಮನೆ ಎದುರು ಸಾಂಕೇತಿಕ ಧರಣಿಗೆ ಪೊಲೀಸರು ಅನುಮತಿ ನೀಡದಿರುವುದಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ಅಧ್ಯಕ್ಷ ತಿಪ್ಪಣ್ಣರೆಡ್ಡಿ ಕಿಡಿಕಾರಿದ್ದಾರೆ . ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಕೋಲಿ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದ ಅವರು , ಮುಧೋಳದಲ್ಲಿ ಎಲ್ಲರಿಗೂ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ . ಆದರೆ ಉಪ ಮುಖ್ಯಮಂತ್ರಿಗಳು ಕೋವಿಡ್ -19 ನೆಪ ಹೇಳಿ ಸಮಾಜದಿಂದ ಧರಣಿ ನಡೆಸಲು ಅವಕಾಶ ನೀಡಿಲ್ಲ . ನೀವೇಷ್ಟೆ ಪ್ರಯತ್ನ ಮಾಡಿದರೂ ನಮ್ಮ ಹೋರಾಟ ತಡೆಯಲು ಸಾಧ್ಯವಿಲ್ಲ ಹೇಳಿದರು   . ಅಮರೇಶ ಕಾಮನಕೇರಿ ಮಾತನಾಡಿ ನಮ್ಮದು ನ್ಯಾಯಯುತ ಹೋರಾಟವಾಗಿದೆ. ಕೋಲಿ ಸಮಾಜದ ಮತ್ತು ದಲಿತ ರಾಷ್ಟ್ರಪತಿಯನ್ನು ಮಾಡಿದೆವೆ ಎಂದು ಪ್ರಚಾರ ಪಡೆದ ಬಿಜೆಪಿ ಯವರು ಸೌಲಭ್ಯಗಳನ್ನು ಕೊಡಬೇಕಾದ  ಸಂದರ್ಭದಲ್ಲಿ ತಮ್ಮ ಸರ್ಕಾರದ ಅಡಿ ಕಾರ್ಯನಿರ್ವಸು ಅಧಿಕಾರಿಗಳ ಮೂಲಕ ತಡೆಹಿಡಿಯುತ್ತಿರುವವುಕ್ಕೆ  ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬುಡಕಟ್ಟು ಹಿನ್ನೆಲೆ ಹೊಂದಿರು   ತಳವಾರ ಸಮುದಾಯವಕ್ಕೆ ಎಸ್‌  ಟಿ ಸಿಗುವದರಿಂದ  ಸಾಕಷ್ಟು ಸೌಕರ್ಯ ಸಿಗಲಿದೆ ಹೀಗಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಯನ್ನು ತಂದು ಕಾನೂನಾತ್ಮಕವಾಗಿ ಅನುಕೂಲ ಮಾಡಿಕೊಡಿಕೊಟ್ಟರು ಅಧಿಕಾರಿಗಳ ಮತ್ತು ರಾಜಕೀಯ ಕುತಂತ್ರದಿಂದ ತಳವಾರ ಸಮಾಜಕ್ಕೆ ಅನ್ಯಾಯವಾಗುತ್ತಿದೆ . ಅನ್ಯಾಯ ಸರಿಪಡಿಸಿ ತಳವಾರ ಸಮಾಜದ ಜನತೆಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು . ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

 



ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿದವರು ಇಂದು ದೇಶ ಪ್ರಥಮ ಪ್ರಜೆ ಆಗಿದ್ದಾರೆ. ಅವರು ಪರಿಶಿಷ್ಟ ಜಾತಿಯಲ್ಲಿ ಬರುತ್ತಾರೆ ದೇಶ ಎಲ್ಲ ರಾಜ್ಯಗಳು ಎಸ ಸಿ ಮತ್ತು ಎಸ ಟಿ ಪಡೆಯುವ ಅರ್ಹತೆ ಹೊಂದಿರು ಸಮಾಜ ಕೋಲಿ ಸಮಾಜ ಈ ವಿಷಯವಾಗಿ ಎಷ್ಟು ಪದಗಳು ಎಸ ಸಿ ಎಸ ಟಿ ಪಡೆಯುವ ಅರ್ಹತೆ ಪಡೆದಿವೆ ಎಂದು ರಾಷ್ಟ್ರಪತಿ ರಾಮನಾಥ ಕೊವಿಂದ ರವರು ಅಖಿಲ ಭಾರತೀಯ ಕೋಲಿ ಸಮಾಜದ ಜನರಲ್ ಸೆಕ್ರೆಟರಿ ಆಗಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲ್ಲ ಅರ್ಹತೆ ಕರ್ನಾಟಕದಲ್ಲಿ ಹೊಂದಿರುವ ತಳವಾರ ಮತ್ತು ಟೋಕರೆ ಕೋಳಿ ಎಸ ಟಿ ನೀಡದಿರಲು ಹಿಂಭಾಗಿಲಿಂದ ಕುತಂತ್ರ ಮಾಡಿ ತಳವಾರ ಮತ್ತೆ ಕೆಟಗೆರಿ ಒಂದಕ್ಕೆ ಸೇರಿಸಿದು ಅಲ್ಲ, ಕೆಟಗೆರಿ ಒಂದರಲ್ಲಿ ಸೇರಿಸಿದನು ತೆಗೆಯಬೇಕು ಎಸ ಟಿ ಪ್ರಮಾಣ ಪತ್ರ ನೀಡಬೇಕು
ತಿಪ್ಪಣ್ಣ ರೆಡ್ಡಿ
ರಾಜ್ಯಾಧ್ಯಕ್ಷರು
ಅಖಿಲ ಭಾರತೀಯ ಕೋಲಿ ಸಮಾಜ


ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಆಗಿದ ಸಂದರ್ಭದಲ್ಲಿಕೋಲಿ ಸಮಾಜದ  ದೇಶಾದ್ಯಂತ 100 ಕ್ಕೂ ಅಧಿಕ ಜಾತಿಯ ಹೆಸರುಗಳು ಎಸ ಟಿ ಎಸ ಸಿ ಅರ್ಹತೆ ಹೊಂದಿವೆ ರಾಷ್ಟ್ರಪತಿ ರಾಮನಾಥ ಕೊವಿಂದ ರವರು ಬರೆದ ಪತ್ರ



ಧರಣಿ ತಡೆದ ಮುಧೋಳ ಪೊಲೀಸ್ ಅಧಿಕಾರಿಗೆ ಸಮಾಜ ಸಚಿವರಾದ ಗೋವಿಂದ ಕಾರಜೋಳ ಮನೆ ಮುಂದೆ ಧರಣಿ ಮಾಡಲು ದಿನಾಂಕ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ಬಾಗಲಕೋಟ ಜಿಲ್ಲಾಧ್ಯಕ್ಷ ಸಂಜೀವ್ ಡಿಗ್ಗಿ , ಮುಧೋಳ ತಾಲೂಕು ಅಧ್ಯಕ್ಷ ಹಣಮಂತ ಅಬಿಗೇರ , ಪ್ರಮುಖರಾದ ಭೀಮಸಿ ತಳವಾರ , ಮಹಾನಿಂಗ ಅಂಬಿಗೇರ್ , ಸುರೇಶ ತಳವಾರ , ಶ್ರೀಕಾಂತ ಕೋಳಿ , ಚಿನ್ನಪ್ಪ ಅಂಬಿ ವೆಂಕಪ್ಪ ಉಳ್ಳಾಗಡ್ಡಿ , ವಿದ್ಯಾದರ ವಾಲಿಕರ , ವಿಲ್ ಹುಡೇದ್ , ಉಮೇಶ ಕಲ್ಲಿ , ಪ್ರಕಾಶ ಪೀಠಕ , ಈರಣ್ಣ ಇಳಕಲ್ , ವಿಜಯ ಆಲೂರ , ನಾಗೇಶ ನಾಗೇಶ ದಳವಾಯಿ , ಇದ್ದರು.


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*