ಕಂಪ್ಲಿ : ಹಿಂದೂ ತಳವಾರ ಹಾಗೂ ಪರಿವಾರ ಜಾತಿಯವರಿಗೆ ಕೂಡಲೇ ಸರ್ಕಾರ ಎಸ್.ಟಿ ಪ್ರಮಾಣ ಪತ್ರ ನೀಡಬೇಕು . ಇಲ್ಲದಿದ್ದಲ್ಲಿ ಬಹುಜನ ಪಾರ್ತಿಯಿಂದ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾ ಗುವುದು ಎಂದು ಬಹುಜನ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮರು ನಾಗರಾಜ ಹೇಳಿದರು . ಪಟ್ಟಣದ ಎಪಿಎಂಸಿ ಆವರಣದ ಪತಂಜಲಿ ಯೋಗ ಕಟ್ಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 2020 ರ ಎಪ್ರಿಲ್ ತಿಂಗಳಲ್ಲಿ ನಡೆದ ಪಾರ್ಲಿಮೆಂಟ್‌ನಲ್ಲಿ ತಳವಾರ ಮತ್ತು ಪರಿವಾರ ಜಾತಿಗಳನ್ನು ಎಸ್ಪಿ ಪಟ್ಟಿಗೆ ಸೇರಿಸಿತು . ಕರ್ನಾಟಕ ರಾಜ್ಯ ಸರ್ಕಾರವು ಪ್ರಸಕ್ತ ವರ್ಷದ ಜೂ .6 ರಂದು ಗೆಜೆಟ್ ನೋಟಿಫಿಕೇಶನ್ ಮೂಲಕ ಓಬಿಸಿ ಪ್ರವರ್ಗ 1 ರ ಪಟ್ಟಿಯಿಂದ ತಳವಾರ ಮತ್ತು ಪರಿವಾರ ಜಾತಿಗಳನ್ನು ತೆಗೆದು ಹಾಕಿ . ಎಸ್ಪಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಯಿತು . ತಳವಾರ ಮತ್ತು ಪರಿವಾರ ದವರಿಗೆ ಎಸ್ಪಿ ಪ್ರಮಾಣ ಪತ್ರ ದೊರೆಯಲು ಶುರುವಾಯಿತು . ಆದರೆ , ಕೆಲ ಅಧಿಕಾರಿಗಳ ಕುತಂತ್ರದಿಂದ ಹಿಂದೂ ತಳವಾರ ಮತ್ತು ಪರಿವಾರದವರಿಗೆ ಎಸ್ಪಿ ಪ್ರಮಾಣ ಪತ್ರ ಕೊಡಲು ಹಿಂದೇಟು ಹಾಕಲಾಗುತ್ತಿದೆ . ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಎಸ್ಪಿ ಸರ್ಟಿಫಿಕೇಟ್ ಕೊಡಬೇಕೆಂದು ಆದೇಶ ಹೊರಡಿಸಿದೆ . ಆದರೆ , ಸಮಾಜ ಕಲ್ಯಾಣ ಇಲಾಖೆಯ ಪ್ರಿನ್ಸಿಪಾಲ್ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್ ಪಟ್ಟಭದ್ರ ಮಾತು ಕೇಳಿ , ತಳವಾರ ಮತ್ತು ಪರಿವಾರ ಸಮುದಾಯದ ಜನರಿಗೆ ಸಂವಿಧಾನದಿಂದ ದೊರೆತ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ . ಇದರಿಂದ ಲಕ್ಷಾಂತರ ತಳವಾರ ಹಾಗೂ ಪರಿವಾರ ಸಮುದಾಯ ದವರಿಗೆ ಅನ್ಯಾಯವಾಗಿದೆ . ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಹಿಂದೂ ತಳವಾರ ಮತ್ತು ಪರಿವಾರ ಜಾತಿಯವರಿಗೆ ಎಸ್ಪಿ ಪ್ರಮಾಣ ಪತ್ರ ನೀಡಬೇಕು . ಸಮಾಜ ಕಲ್ಯಾಣ ಇಲಾಖೆ ಪ್ರಿನ್ಸಿಪಾಳ ಪ್ರಧಾನ ಕಾರ್ಯದರ್ಶಿ ಕುಮಾರ್‌ನಾಲಯಕ್ ಅವರನ್ನು ತನಿಖೆಗೆ ಒಳಪಡಿಸಿ , ಕರ್ತವ್ಯದಿಂದ ವಜಾಗೊ ಜಿಸಬೇಕೆಂದು ಆಗ್ರಹಿಸಿದರು . ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಿ.ಎ.ಚನ್ನಪ್ಪ . ಪಕ್ಷದ ಮುಖಂಡರಾದ ರಾಜಕುಮಾರ , ಹೆಚ್.ತಿಪ್ಪೇಸ್ವಾಮಿ , ಕೃಷ್ಣ , ವಿರೇಶ್ . ಮನೋಹರ ಇದ್ದರು .
Be the first to comment