ಬಳ್ಳಾರಿ:ಕೂಡ್ಲಿಗಿ ತಾಲೂಕು ಖಾನಾಹೊಸಹಳ್ಳಿ, ಬಹು ಅಪರೂಪದ ಸೈಕಲ್ ಸವಾರ ಎಸ್.ಕೆ.ನಾಗರಾಜ. ಇವರು ಅರವತ್ತೈದನೇ ವಸಂತವನ್ನು ನೀರೀಕ್ಷಿಸುತ್ತಿರೋ ಇಳಿವಯಸ್ಸಿನ ಯುವ ಚೇತನರಾಗಿದ್ದಾರೆ,ಇವರು ಖಾನಾಹೊಸಹಳ್ಳಿ ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ ಸೈಕಲ್ ಸವಾರಿಯಿಂದಲೇ ತಮ್ಮನ್ನ ಗುರುತಿಸಿಕೊಂಡಿದ್ದಾರೆ.ಬಿಎಸ್ಸಿ ವ್ಯಾಸಾಂಗ ಮಾಡಿರುವ ಇವರು,ಮಾತನಾಡುವಾಗಲೆಲ್ಲ ಕನ್ನಡದೊಂದಿಗೆ ಆಂಗ್ಲಭಾಷೆಯ ತುಣುಕುಗಳನ್ನು ಸೇರಿಸಿಯೇ ಮಾತನಾಡುತ್ತಾರೆ.ಖುಷಿಯಿಂದ ಅವರು ಬಹು ದಶಕಗಳಿಂದಲೂ ಆರಿಸಿಕೊಂಡಿರುವುದು “ಸವಾರಿಗಾಗಿ ಸೈಕಲ್”ಹಾಗೂ “ಜೀವನಕ್ಕಾಗಿ ಕೃಷಿ”ಯನ್ನು, ನಾಗರಾಜರವರು ಬಾಲ್ಯದಿಂದಲೂ ಬಹು ಖುಷಿಯಿಂದ ಆರಿಸಿಕೊಂಡಿರೋದು ಕೃಷಿಯನ್ನ ಹಾಗಾಗಿ ವ್ಯವಸಾಯವನ್ನೇ ಆರಾಧಿಸುತ್ತಿದ್ದಾರೆ.ಮನೆಯಿಂದ ಮೂರು ಕಿಮೀ ದೂರವಿರುವ ತಮ್ಮ ಹೊಲ,ತೋಟಗಳಿಗೆ ನಿತ್ಯವೂ ತೆರಳುವುದು ತಮ್ಮ ನೆಚ್ಚಿನ ಸೈಕಲ್ ನಲ್ಲಿಯೇ,ಅದಕ್ಕಿಂತಲೂ ದೂರವಿರುವ ಸ್ಥಳಗಳಿಗೆ ಹಾಗೂ ಅನಿವಾ೯ತೆ ಇರುವೆಲ್ಲಡೆಗೆ ತಾವಾಗಲಿ ತಮ್ಮ ಧಮ೯ಪತ್ನಿಯೊಡಗೂಡಿ ತೆರಳುವುದು ತಮ್ಮ ಪ್ರೀತಿಯ ಸೈಕಲ್ ನಲ್ಲಿಯೇ.
ಇವರ ಮಕ್ಕಳು ಮೋಟಾರು ಬೈಕ್ ಹೊಂದಿದ್ದಾರೆ ಇವರೂ ಕೂಡ ಬೈಕ್ ರೈಡ್ ಬಲ್ಲವರಾಗಿದ್ದಾರೆ ಆದ್ರೆ ಬಳಸುವುದಿಲ್ಲ.ಸುಮಾರು 20-30ಕಿಮೀ ದೂರದಲ್ಲಿರುವ ತಮ್ಮ ನೆಂಟರ ಊರುಗಳಿಗೂ ಸೈಕಲ್ ನಲ್ಲಿಯೇ ತೆರಳುತ್ತಾರೆ,ಹಾಗಾಗಿ ಎಸ್.ಕೆ.ನಾಗರಾಜರು ಸೈಕಲ್ ನಾಗರಾಜರೆಂದೇ ಖ್ಯಾತಿ ಹೊಂದಿದ್ದಾರೆ.ಈ ವರೆಗೂ ಸೈಕಲ್ ನ ಸೀಟನಲ್ಲೆ ಕುಳಿತ ಉದಾಹರಣೆ ಇಲ್ಲ,ಕೇವಲ ಸೈಕಲ್ ಕಂಬಿಯಲ್ಲಿಯೇ ಇವರ ಸವಾರಿ,ಕಾರಣ ಕೇಳಿದರೆ ಅಭ್ಯಾಸಬಲ ಎನ್ನುತ್ತಾರವರು.
ಮನೆಯಿಂದ ಒಮ್ಮೆ ಸವಾರಿ ಪ್ರಾರಂಭಿಸಿದರೆ ಉತ್ತಿ ಮುಟ್ಟೋ ವರೆಗೂ ಎಲ್ಲೂ ಸೈಕಲ್ ನಿಂದ ಇಳಿಯುವುದಿಲ್ಲ,ನಿಲ್ಲಿಸುವುದಿಲ್ಲ ಇಳಿವಯಸ್ಸಿನ ನಾಗರಾಜರು.ಸೈಕಲ್ ಪಂಕ್ಚರ್ ಅಥವಾ ಏನಾದರೂ ಅನಾರೋಗ್ಯ ಕಾರಣ ಅಥವಾ ಸೈಕಲ್ ರಿಪೇರಿ ಅನಿವಾಯ೯ವಿದ್ದರೆ ಮಾತ್ರ ಸವಾರಿ ನಿಲ್ಲುವುದು ಇಲ್ಲವಾದರೆ ಎಲ್ಲಿಯೂ ಸೈಕಲ್ ನಿಲ್ಲಿಸಲ್ಲ.ಇದೆಲ್ಲಾ ಯಾವಕಾರಣಕ್ಕಾಗಿ ಎಂದರೆ, ಎಂಥವರೂ ದಂಗಾಗಿ ಹೋಗುವ ಉತ್ತರ ಸಿಗುತ್ತದೆ. ಸೈಕಲ್ ತುಳಿಯೋದರಿಂದಾಗಿ ತಾವು ಸದಾ ಚೈತನ್ಯವಾಗಿರಲು ಸಾಧ್ಯವೆನ್ನುತ್ತಾರೆ ಅರವತ್ತರ ಗಡಿದಾಟಿರುವ ನಾಗರಾಜರವರು,ನಾಗರಾಜಪ್ಪ ರೆನಿಸಿಕೊಳ್ಳಲು ಇಷ್ಟವಿಲ್ಲವಂತೆ.ತಾವು ಸದಾ ರಾಜನಂತೇಯೇ ಚಿರಯೌವ್ವ ಹೊಂದಿರಲು ಇಚ್ಚಿಸಿದ್ದಾರಂತೆ,ಸದೃಢ ದೇಹದೊಂದಿಗೆ ಆರೋಗ್ಯ ಹಾಗೂ ಚೈತನ್ಯವನ್ನು ಹೊಂದಿರಲು ಸೈಕಲ್ ಸವಾರಿನೇ ಕಾರಣ ಎನ್ನುತ್ತಾರೆ ಖಾನಾಹೊಸಹಳ್ಳಿಯ ಎಸ್.ಕೆ.ನಾಗರಾಜರು.
ಇವರ ಬಾಲ್ಯಸ್ನೇಹಿತರಾದ ಹಾಗೂ ಹಿರಿಯ ದಲಿತ ಮುಖಂಡರು ಮತ್ತು ಪತ್ರಕರ್ತರಾದ,ಸಿದ್ದಾಪುರ ಗ್ರಾಮದ ಈಶ್ವರಪ್ಪನವರು,ಮಾತನಾಡಿ ಗ್ರಾಮೀಣ ಭಾಗದ ರೈತರ ಬಹು ಹೆಮ್ಮೆಯ ಸವಾರಿ ಸೈಕಲ್ ಸವಾರಿ.ನಾಲ್ಕು ಹೆಜ್ಜೆಗೂ ಬೈಕನ್ನೇ ಅವಲಂಬಿಸಿರುವ ಈಗಿನ ಯುವ ಪೀಳಿಗೆ ಸದಾ ಅನಾರೋಗ್ಯದಿಂದ ಬಳಲುತಿರುತ್ತಾರೆ,ಸದಾ ಸೈಕಲ್ ಸವಾರಿಯನ್ನೇ ನಂಬಿರುವವರು ಆರೋಗ್ಯದಿಂದ ಇರುತ್ತಾರೆ. ಇದಕ್ಕೆ ನಾಗರಾಜರೇ ಜೀವಂತ ಸಾಕ್ಷಿ,ನಾಗರಾಜರು ಈ ವರೆಗೂ ಆಸ್ಪತ್ರೆಯ ಹೊಸ್ಥಿಲು ತುಳಿದಿಲ್ಲ. ಇಳಿವಯಸ್ಸಿನ ನವಚೈತನ್ಯದ ಚಿಲುಮೆಯಾಗಿದ್ದಾರೆ.ಸೈಕಲ್ ಸವಾರಿಯಿಂದಲೇ ಈ ಹಿಂದೆ ಯುವಪೀಳಿಗೆಯಲ್ಲಿ ಪ್ರೀತಿ,ಪ್ರೇಮ,ಪ್ರಣಯಗಳ ಕಥೆಗಳು ಜನ್ಮತಾಳಿವೆ,ಹಳೇ ತಲೆಮಾರಿನವರ ಸವಿ ಸವಿ ನೆನಪಿನ ಸಾವಿರ ಕನಸ್ಸುಗಳಿಗೆ ರೆಕ್ಕೆಕಟ್ಟಿ ಸವಾರಿ ಬೆಳಸುವುದೇ “ಸೈಕಲ್”, ಎನ್ನುತ್ತಾರೆ ಸಿದ್ದಪುರಗ್ರಾಮದ ಈಶ್ವರಪ್ಪನವರು.
Be the first to comment