ಹರಿಹರ:ಕರೋನಾ ಅಗ್ನಿ ಪರೀಕ್ಷೆಯ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳ ಭವಿಷ್ಯದ ಫಲಿತಾಂಶ ಇಂದು ಪ್ರಕಟಗೊಂಡಿದೆ .ಹರಿಹರ ತಾಲೂಕಿನ ಬಿಳಸನೂರು ಗ್ರಾಮದ ಕಾವೇರಿ ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 558 ಅಂಕಗಳೊಂದಿಗೆ ಶೇಕಡಾ 93 ಪರ್ಸೆಂಟೇಜ್ ಯೊಂದಿಗೆ ಅದ್ವಿತೀಯ ಸಾಧನೆಯನ್ನು ಮಾಡಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ ,ಆದರೆ ಈ ವಿದ್ಯಾರ್ಥಿನಿಗೆ ಗಣಿತ ಅತ್ಯಂತ ಸುಲಭ ನೂರಕ್ಕೆ ನೂರು ಅಂಕಗಳು ಗಣಿತದಲ್ಲಿ ಪಡೆದಿದ್ದಾರೆ .
ಕಾವೇರಿ ಶೇಖಡ ತೊಂಬತ್ತು ಮೂರು ಅಂಕಗಳೊಂದಿಗೆ ಅದ್ವಿತೀಯ ಸಾಧನೆ ಮಾಡಿದ್ದಕ್ಕೆ ಕುಟುಂಬದ ಎಲ್ಲ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ.
ಇವತ್ತಿನ ಅಂಕ ನನಗೆ ಸಂತೋಷವನ್ನು ತಂದಿದೆ ಆದರೆ ಇಂಗ್ಲಿಷ್ ಮತ್ತು ಕೆಮಿಸ್ಟ್ರಿಯಲ್ಲಿ ಕಡಿಮೆ ಅಂಕ ಬಂದಿದೆ ಆದ್ದರಿಂದ ಮತ್ತೊಮ್ಮೆ ಮೌಲ್ಯಮಾಪನ ಮಾಡುವಂತೆ ಅರ್ಜಿ ಹಾಕುತ್ತೇನೆ .ಮುಂದೆ ಎಂಜಿನಿಯರಿಂಗ್ ಮಾಡುವ ಆಸೆ ಇದೆ ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ನೋಡಬೇಕು ದೇವರ ಇಚ್ಛೆಯಂತೆ ನಡೆಯಲಿದೆ.
Be the first to comment