ಬಾಗಲಕೋಟೆ:ಕರ್ನಾಟಕ ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರವರ್ಗ-1ರಲ್ಲಿ ಬರುವ 6(a) ದಿಂದ 6(ak) ವರೆಗಿನ ಕೋಲಿ, ಗಂಗಾಮತ, ಬೆಸ್ತ, ಕಬ್ಬಲಗಿ, ಮೊಗವೀರ, ಅಂಬಿಗ, ಅಂಬಿ, ಬಾರ್ಕಿ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ ಬೆಸ್ತರ, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆ ಮಕ್ಕಳು, ಗಂಗಾಕುಲ, ಗಂಗಾಮತಸ್ಥ, ಗಂಗಾಪುತ್ರ, ಗೌರಿ ಮತ,ಹರಕಂತ್ರ, ಜಲಗಾರ, ಕಬ್ಬೇರ, ಕಬ್ಬಲಿ, ಕಹರ್, ಖಾರ್ವಿ, ಮಡ್ಡರ್, ಮೀನಗಾರ್, ಮಗೇರ್, ಮುಕ್ಕಾವಾನ್, ಪರಿವಾರ್, ಸುಣಗಾರ, ತೊರೆಯ, ವಾಗಿ ಸಮಾಜದ ಜನರ ಆರ್ಥಿಕ ಅಭಿವೃದ್ದಿಗಾಗಿ 2020 21 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
1) ಬ್ಯಾಂಕುಗಳ ಸಹಯೋಗ ದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ.
2) ಸ್ವಯಂ ಉದ್ಯೋಗ ಸಾಲ ಯೋಜನೆ.
3) ಕಿರು ಸಾಲ / ಸ್ವಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆ.
4) ಅರಿವು ಶೈಕ್ಷಣಿಕ ಸಾಲ ಯೋಜನೆ.
5) ಗಂಗಾ ಕಲ್ಯಾಣ ನೀರಾವರಿ ಯೋಜನೆ.
6) ಕೌಶಲ್ಯಾಭಿವೃದ್ದಿ/ಉದ್ಯಮಶೀಲತಾ ತರಬೇತಿ.
ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ಈ ಮೇಲ್ಕಂಡ ಸಮಾಜದವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಯಲ್ಲಿ ಅಥವಾ ನಿಗಮದ ವೆಬ್ ಸೈಟ್ ನಲ್ಲಿ ಪಡೆದು https://ambigaradevelopment.karnataka.govt.in ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಲು ತಿಳಿಸಿದೆ.
ಆನ್ ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಅರ್ಜಿಗಳನ್ನು ನಿಗಮದ ಜಿಲ್ಲೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕೊ.ಸಂಖ್ಯೆ 233 ಜಿಲ್ಲಾಡಳಿತ ಭವನ ನವನಗರ ಬಾಗಲಕೋಟೆ ಕಚೇರಿಗೆ ಬೇಟಿ ನಿಡಿ ಅರ್ಜಿ ಪಡೆದು ಅರ್ಜಿಯಲ್ಲಿ ತಿಳಿಸಿದ ದಾಖಲಾತಿಗಳೊಂದಿಗೆ ದಿನಾಂಕ: 12-08-2020ರ ಸಂಜೆ : 4:30 ರೊಳಗೆ ಸಲ್ಲಿಸುವುದು.
Be the first to comment