ಬಳ್ಳಾರಿ :ಜಿಲ್ಲಾ ಹಗರಿಬೊಮ್ಮನಹಳ್ಳಿಯಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ,ಪತ್ರಿಕಾ ದಿನಾಚರಣೆ ಕಾಯ೯ಕ್ರಮ ಜರುಗಿತು.ಕಾಯ೯ಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಭೀಮಾನಾಯ್ಕ ರವರು ಮಾತನಾಡಿದರು.ಪತ್ರಕರ್ತರಿಗೆ ಪತ್ರಿಕಾ ಭವನದ ನಿರ್ಮಾಣಕ್ಕಾಗಿ 20 ಲಕ್ಷ ರೂ ಗಳನ್ನು ನೀಡುವುದು,ಅದಕ್ಕಾಗಿ ಪತ್ರಕರ್ತರಿಗೆ ನಿವೇಶನಗಳನ್ನು ಪುರಸಭೆಯಿಂದ ಒದಗಿಸಿಕೊಡುವುದು ಅವರು ನುಡಿದರು.
ರಾಜ್ಯ ಸಕಾ೯ರ ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ಗಳೆಂದು ಪರಿಗಣಿಸಬೇಕು,ವಿಮೆ ಸೌಲಭ್ಯದಡಿಯಲ್ಲಿ ಸೇರಿಸಬೇಕೆಂದು ಕಾಯ೯ನಿರತ ಪತ್ರಕರ್ತರ ಸಂಘದ ರಾಜ್ಯ ಕಾಯ೯ದಶಿ೯ಗಳಾದ ಬಂಗ್ಲೆ ಮಲ್ಲಿಕಾರ್ಜುನರವರು ನುಡಿದರು.ಈ ಸಂಬಂಧ ಸಕಾ೯ರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ,ಸಕಾ೯ರ ಮೀನಾ ಮೇಷ ಎಣಿಸುತ್ತಿದೆ.ಈ ಕುರಿತು ರಾಜ್ಯದ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಪತ್ರಕರ್ತರಿಗೆ ನೆರವಾಗಬೇಕೆಂದು ವೇದಿಕೆ ಮುಖಾಂತರ K.U.W.J ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ಶಾಸಕರ ಗಮನ ಸೆಳೆದರು. ಪ್ರತಿಕ್ರಿಯಿಸಿದ ಶಾಸಕರಾದ ಭೀಮಾನಾಯ್ಕರವರು,ಈ ಕುರಿತು ಮುಖ್ಯಮಂತ್ರಿ ಯವರ ಗಮನಕ್ಕೆ ಖುದ್ದಾಗಿ ತರುವುದಾಗಿ ತಿಳಸಿದರು.
ತಾವು ಈ ಸಂಬಂಧ ಸರ್ಕಾರಕ್ಕೆ ಇಂದೇ ಪತ್ರ ಬರೆಯುವುದಾಗಿ ತಿಳಿಸಿದರು.ಪತ್ರಕರ್ತರ ಬಗ್ಗೆ ತಾವು ಎಂದೆಂದಿಗೂ ಕಾಳಜಿಯನ್ನು ಮೆರೆದಿದ್ದು, ಶಾಸಕನಾಗಿ ಈ ಕ್ಷೇತ್ರದಲ್ಲಿ ಏಳು ವರ್ಷ ಸೇವೆ ಸಲ್ಲಿಸುತ್ತಿರುವುದಕ್ಕೆ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಬಹಳ ದೊಡ್ಡದು ಎಂದು ಅವರು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ಮೋಹನರೆಡ್ಡಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ತಾಲೂಕು ಅಧ್ಯಕ್ಷರಾದ ಬುಡ್ಡಿ ಬಸವರಾಜ್,ಪದಾಧಿಕಾರಿಗಳು,ಅಧಿಕಾರಿಗಳು,ಸಂಘ ಸಂಸ್ಥೆಯ ಅಧ್ಯಕ್ಷರುಗಳು,ಆಶಾ ಕಾರ್ಯಕರ್ತೆಯರು,ಆಯುಷ್ ಅಧಿಕಾರಿಗಳು ಹಾಗೂ ಮತ್ತಿತರರು ಕಾಯ೯ಕ್ರದಲ್ಲಿ ಭಾಗವಹಿಸಿದ್ದರು.
Be the first to comment