ನಾಲತವಾಡ:ರಾಜ್ಯ ಸರ್ಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ವ್ಯವಹಾರಕ್ಕೆ ವಿಧಿಸಿದ ಸೆಸ್ ವಿರೋಧಿಸಿ ಜುಲೈ 14ರಿಂದ ಅನಿರ್ದಷ್ಟಾಧಿವರೆಗೆ ಎಪಿಎಂಸಿಯ ಎಲ್ಲಾ ವಹಿವಾಟು ಬಂದ್
ಮಾಡಲಾಗುವುದುಎಂದು ನಾಲತವಾಡ ಅಡತ್ ಮರ್ಚೆಂಟ್ ಅಸೋಸಿಯೇಷನ್ ಕಾರ್ಯಧ್ಯಕ್ಷ ಎಂ ಬಿ ಅಂಗಡಿ ಸಾಹುಕಾರರು ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ‘ಎಪಿಎಂಸಿಯಲ್ಲಿ ವಹಿವಾಟು ಮಾಡುವವರಿಗೆ ರಾಜ್ಯ ಸರ್ಕಾರ ಶೇ.1 ರಷ್ಟು ಸೆಸ್ ವಿಧಿಸಿದೆ. ಆದರೆ ಎಪಿಎಂಸಿ ಪ್ರಾಂಗಣದ ಹೊರೆಗೆ ವಹಿವಾಟು ನೆಡೆಸುವವರಿಗೆ ಕೇಂದ್ರ ಸರ್ಕಾರ ಯಾವುದೇ ಸೆಸ್ ವಿಧಿಸುತ್ತಿಲ್ಲ.ಇದು ರಾಜ್ಯ ಸರ್ಕಾರದ ತಾರತಮ್ಯ ಧೋರಣೆಯಾಗಿದೆ. ಹಾಗೂ ರಾಜ್ಯದ ಎಲ್ಲಾ ಎಪಿಎಂಸಿಗೂ ಮರಣಶಾಸನ ವಾಗಲಿದೆ.ಇದರಿಂದ ಹಮಾಲರು ಸೇರಿದಂತೆ ಸಾವಿರಾರು ಕುಂಟುಂಬಗಳು ಬೀದಿಗೆ ಬರಲಿವೆ. ಎಪಿಎಂಸಿ ಮಾರುಕಟ್ಟೆ ಗಳು ಕಣ್ಮರೆ ಆದರೂ ಅಚ್ಚರಿ ಇಲ್ಲಾ ಅಂತಾ ಮಾರ್ಮಿಕವಾಗಿ ಎಂದು ಹೇಳಿದರು.ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರವು ಮಾರುಕಟ್ಟೆ ಶುಲ್ಕವನ್ನು ಶುಲ್ಕರಹಿತವಾಗಿ ಅಥವಾ ಶೇ. 0.2ರಷ್ಟು ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಡತ್ ಮರ್ಚೆಂಟ್ ಅಸೊಶಿಯೇಶನ್ ಅದ್ಯಕ್ಷ ರಾದ ಎಸ್.ಎನ್.ಸಂಗಮ ಶೆಟ್ಟರ್, ಬಿ.ಎಸ್.ಪಾಟೀಲ, ಬಿ.ಎ.ಚಿನಿವಾಲರ(ಕತ್ತಿ),
ಗಿರೀಶಗೌಡ ಪಾಟೀಲ, ಸಂಗಣ್ಣ ಹಡಲಗೇರಿ, ಉಮೇಶ ಇಲಕಲ್ಲ, ಮಹಾಂತೇಶ. ಗಂಗನಗೌಡ್ರ, ಬಸಣ್ಣ ವಡಗೇರಿ,ಶಂಕ್ರರಣ್ಣ ನಾಗರದಿನ್ನಿ, ಬಸವರಾಜ ತಾತರಡ್ಡಿ, ಅಮರೇಶ ಮಳ್ಳತ್ತಿ , ಮಲ್ಲು ಸ್ಥಾವರಮಠ, ಹಣಮಂತ ತೊಗರಿ,ಅರವಿಂದ ಬಿರಾದಾರ, ಮಾಹಾಂತೇಶ ಹಂಪನಗೌಡ್ರ, ಶೇಖರ ಬಿಕ್ಷಾವತಿಮಠ, ಶರಣು ಇಲಕಲ್ಲ ಹಾಗೂ ಎಪಿಎಂಸಿಯ ವರ್ತಕರು,ಗುಮಾಸ್ತರು, ಹಮಾಲರು ಉಪಸ್ಥಿತಿದರು.
Be the first to comment