ಜಿಲ್ಲಾಸುದ್ದಿಗಳು
ಬಳ್ಳಾರಿ:
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಹೋಬಳಿಯ ಟಿ.ಕಲ್ಲಹಳ್ಳಿ ಗ್ರಾಮ,ಎಸ್ಸಿ ಕಾಲೋನಿಯು ಈಗಲೂ ಸ್ಥಳೀಯ ಆಡಳಿತದಿಂದ ಹಾಗೂ ಕೆಲ ಇಲಾಖೆಗಳ ತಾಲೂಕು ಅಧಿಕಾರಿಗಳಿಂದ ಶೋಷಣೆಗೆ ಗುರಿಯಾಗಿದೆ ಎಂದು ಕನಾ೯ಟಕ ದಲಿತ ಸಂಘಷ೯ ಸಮಿತಿ ದೂರಿದೆ.ಹತ್ತಾರು ವಷ೯ಗಳಿಂದ ಹತ್ತಾರು ಗುಡಿಸಲುವಾಸಿಗಳಿಗೆ ಗುಡಿಸಲಿನಿಂದ ಮುಕ್ತಿ ಸಿಕ್ಕಿಲ್ಲ.ಸಕಾ೯ರ ದಾಖಲುಗಳಲ್ಲಿ ಮಾತ್ರ ಗುಡಿಸಲು ಮುಕ್ತ ಗ್ರಾಮ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದೆ,ಪಲಾನುಭವಿ ಆಯ್ಕೆಯಲ್ಲಿ ಭಾರೀ ಬ್ರಷ್ಠಾಚಾರ ನಡೆಸಲಾಗುತ್ತಿದೆ,ಮನೆಯುಳ್ಳವರಿಗೇ ಮನೆಗಳನ್ನು ಕೊಡುತ್ತಿದ್ದಾರೆ ಎಂದು ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿಗ್ರಾಮ ಗಮನಕ್ಕಿಲ್ಲ:
ಕೂಡ್ಲಿಗಿ ತಾಲೂಕು ಗಡಿಗ್ರಾಮವಾಗಿರುವ ಕಲ್ಲಳ್ಳಿ ಗ್ರಾಮವನ್ನು ತಾಲೂಕು ಆಡಳಿತಾಧಿಕಾರಿಗಳು,ಪ್ರಮುಖ ಜನಪ್ರತಿನಿಧಿಗಳು,ಶಾಸಕರು,ಸಂಸದರು ಗಮನದಲ್ಲಿಟ್ಟುಕೊಂಡು ಮೂಲಭೂತ ಸೌಕಯ೯ಗಳನ್ನು ಸಮಪ೯ಕವಾಗಿ ಒದಗಿಸಬೇಕಿದೆ.ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ಸೂಕ್ತ ನಿಧೇ೯ಶನ ನೀಡಬೇಕೆಂದು ಗ್ರಾಮಸ್ಥರು ಈ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.ಎಸ್ಸಿ ಕಾಲೋನಿಯಲ್ಲಿ ನೈಮ೯ಲ್ಯತೆ ಮರೀಚಿಕೆಯಾಗಿ ಹಲವಾರು ವಷ೯ಗಳೇ ಆಗಿವೆ. ಫಾಗಿಂಗ್,ಕೀಟನಾಶಕ ಸಿಂಪಡಣೆಗಳ ಪರಿಚಯ ಗ್ರಾಮಸ್ಥರಿಗೆ ತಿಳಿದೇ ಇಲ್ಲವಾಗಿದೆ,ಕಂಬಗಳಲ್ಲಿ ಬಲ್ಪಗಳಿಲ್ಲದ ಕಾರಣ ರಾತ್ರಿಯಾದರೆ ಎಸ್ಸಿ ಕಾಲೋನಿ ಕಾಡ್ಗತ್ತಲಿನಲ್ಲಿ ಮಂಗ ಮಾಯವಾಗಿ ಬಿಡುತ್ತದೆ.ವಿಷ ಜಂತು,ಕಾಡು ಮೃಗಗಳ ಉಪಟಳದ ನಡುವೆ ನಿತ್ಯ ಜೀವನ,ಬಹು ಚಿಂತಾಜನಕ ಸ್ಥಿತಿ ನಿಮಾ೯ಣವಾಗಿದ್ದರೂ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಶುದ್ಧ ಕುಡಿಯೋ ನೀರು ಎಸ್ಸಿ ಕಾಲೋನಿಗೆ ಜನರಿಗೆ ಒದಗದಾಗಿದೆ. *ವಸತಿ ಒದಗಿಸಿ ಆಗ್ರಹ-*ಹತ್ತು ಹಲವು ವಷ೯ಗಳಿಂದಲೂ ಗುಡಿಸಲಿನಲ್ಲಿಯೇ ವಾಸಿಸುತ್ತಿರುವವರಿಗೆ ಶೀಘ್ರವೇ ವಸತಿ ಸೌಲಭ್ಯ ನೀಡಬೇಕೆಂದು, ಕನಾ೯ಟಕ ದಲಿತ ಸಂಘಷ೯ ಸಮಿತಿಯ ಮುಖಂಡರಾದ ಸಿದ್ದಾಪುರ ಈಶ್ವರಪ್ಪ, ಗೆದ್ದಲಗಟ್ಟೆ ಹನುಮೇಶ ಸೇರಿದಂತೆ ಮುಂತಾದವರು ತಾಲೂಕಾಡಳಿತಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿರುವ ಕೆಲ ಗುಡಿಸಲುಮನೆಗಳ ಗೋಡೆಗಳು,ಯಾವ ಕ್ಷಣದಲ್ಲಾದರೂ ಕುಸಿದು ಬೀಳುವಂತಿವೆ ಹಾಗೂ ಗರಿಗಳಿಂದ ನಿಮಾ೯ಣಗೊಂಡಿರುವ ಮೇಲ್ಚಾವಣೆ ಗಾಳಿ ಮಳೆ ರಬಸಕ್ಕೆ ಹಾರಿ ಹೋಗುವ ದುಸ್ಥಿತಿಯಲ್ಲಿವೆ.ಇಂತಹ ಕುಟುಂಬಗಳಿಗೆ ಆಸರೆಯಾಗುವವರು ಯಾರು ಇಲ್ಲದಂತಾಗಿದೆ. ಮನೆ ಉಳ್ಳವರಿಗೆ ಮನೆ ನೀಡುವ ಸ್ಥಳೀಯ ಆಡಳಿತಕ್ಕೆ ನಿರಾಶ್ರಿತರು ಹಿಡಿಶಾಪ ಹಾಕುತ್ತಿದ್ದಾರೆ
ವಸತಿ ಹೀನರು ವಸತಿ ಉಳ್ಳವರು ಯಾರು ಎಂಬುದನ್ನು ಅರಿತೂ ಕೂಡ,ಕೆಲಬ್ರಷ್ಠ ಅಧಿಕಾರಿಗಳು ತಮ್ಮ ಸಹಿ ಶೀಲನ್ನು ಮಾರಿಕೊಂಡು ಲಂಚ ಎಂಬ ಹೇಸಿಗಿಗೆ ಆಸೆಪಡುತ್ತಿದ್ದಾರೆ.ಈ ಮೂಲಕ ಅವರು ತಮ್ಮನ್ನು ಶೋಷಿಸುತ್ತಿದ್ದಾರೆಂದು ನಿರಾಶ್ರಿತರು ಗಂಭೀರವಾಗಿ ಆರೋಪಿಸಿದ್ದಾರೆ.ಸರ್ಕಾರ ಮಾತ್ರ ಗ್ರಾಮಿಣಾಭಿವೃದ್ಧಿಯೇ ನಮ್ಮ ದ್ಯೇಯ ಎಂದು ಹೇಳುತ್ತಿದೆ,ಸ್ಥಳೀಯ ಹಾಗೂ ತಾಲೂಕು ಆಡಳಿತ ಗ್ರಾಮಗಳಲ್ಲಿನ ನಿಜವಾದ ಬಡವರಿಗೆ ಮೂಲಭೂತ ಸೌಕರ್ಯಗಳು ತಲುಪಿವಿಯೇ ಎಂದು ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲೆ ಹಾಗುಾ ತಾಲೂಕಿನಾಧ್ಯಂತ ಪ್ರಸ್ಥುತ ವಷ೯ದಲ್ಲಿ,ನಿಜವಾದ ನಿರಾಶ್ರಿತರಿಗೆ ಮನೆಗಳನ್ನು ಜಿಲ್ಲಾಡಳಿತ ಒದಗಿಸಬೇಕು,ವಸತಿ ಹಂಚಿಕೆಯಲ್ಲಿ ಬ್ರಷ್ಠಾಚಾರ ಜರುಗಿದ್ದಲ್ಲಿ ಉಗ್ರಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ,ಕನಾ೯ಟಕ ದಲಿತ ಸಂಘಷ೯ಸಮಿತಿ,ಕನ್ನಡಪರ ಸಂಘಟನೆಗಳು,ಮಹಿಳಾ ಸಂಘಟನೆಗಳು,ರೈತಪರ ಸಂಘಟನೆಗಳು ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಆಡಳಿತಾಧಿಕಾರಿಗಳಿಗೆ ಈ ಮೂಲಕ ಎಚ್ಚರಿಸಿವೆ.
Be the first to comment