ರಾಷ್ಟ್ರಮಟ್ಟದಲ್ಲಿ ಮಿನುಗಾರ ಹುಡುಗನ ಮಿಂಚು ಹರಿಸಿದ ಸಾಧನೆ

ನಮ್ಮವರು ಹೆಮ್ಮೆಯವರು

 

2006/07 ನೇ ಸಾಲಿನ
IAS (UPSC) ಪರೀಕ್ಷೆಯಲ್ಲಿ
ಮೊದಲನೆಯ ರ‌್ಯಾಂಕ್ ಪಡೆದು, ಇತಿಹಾಸ ನಿರ್ಮಿಸಿದ ಅಸಾಧಾರಣ ಸಾಧಕ ಮಿನುಗಾರ ಹುಡುಗ
ಮುತ್ಯಾಲರಾಜು ರೇವು
ಈಗ ಆಂಧ್ರಪ್ರದೇಶದ ಶ್ರೀಮಂತ ಜಿಲ್ಲೆಯಾದ
ಪಶ್ಚಿಮ ಗೋದಾವರಿಯ ಜಿಲ್ಲಾಧಿಕಾರಿ.

ಮುತ್ಯಾಲರಾಜು ರೇವು ಅವರು ಮೂಲತಃ
ಆಂಧ್ರಪ್ರದೇಶದ, ಕೃಷ್ಣ ಜಿಲ್ಲೆಯ ಮೀನುಗಾರರ ದ್ವೀಪ ಗ್ರಾಮವಾದ ಚಿನ್ನಗೊಲ್ಲಪಲ್ಲೆಂನವರು,
ತಂದೆ ರೇವು ನರಸಿಂಹಮೂರ್ತಿ,
ತಾಯಿ ಚಿಂತಾಮಣಿ ಅವರ ಸುಪುತ್ರರಾದ ಇವರು
ತಮ್ಮ ಬಾಲ್ಯದ ಶಿಕ್ಷಣವನ್ನು ಪ್ರತಿದಿನ ಕೃಷ್ಣ ಗೋದಾವರಿ ನದಿಯನ್ನು ದೋಣಿಯಲ್ಲಿ ದಾಟಿ
ತನಕು ಎಂಬ ಊರಿನಲ್ಲಿರುವ ಶಾಲೆಯಲ್ಲಿ
ಪಡೆಯುತ್ತಾರೆ.
ತಮ್ಮ ಹೈಸ್ಕೂಲ್, ದ್ವೀತಿಯ ವರ್ಷದ ಕಾಲೇಜು ಶಿಕ್ಷಣದಲ್ಲಿ ಉತ್ತೀರ್ಣರಾದ ಬಳಿಕ,
1998 ರಲ್ಲಿ ವಾರಂಗಲ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಾದ
ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ
ಅತ್ಯುತ್ತಮ ಅಂಕಗಳೊಂದಿಗೆ ಪ್ರವೇಶ ಪಡೆಯುತ್ತಾರೆ.
B.E ಹಾಗೂ ME ( ಮಾಸ್ಟರ್ ಅಫ್ ಇಂಜಿನಿಯರಿಂಗ್)
ಪೂರ್ಣಗೊಳಿಸಿದ ನಂತರ,
ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಪ್ರವೇಶ ಪರೀಕ್ಷೆ ಹೊಂದಿರುವ ಬೆಂಗಳೂರಿನ ಇಂಡಿಯನ್ ‌ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ಪ್ರವೇಶ ಪರೀಕ್ಷೆ ಬರೆಯುತ್ತಾರೆ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಾರೆ.
IISC ಯಲ್ಲಿ ಸಿಗ್ನಲ್ ಇಂಜಿನಿಯರಿಂಗ್ ಕೋರ್ಸಿಗೆ ಪ್ರವೇಶ ಪಡೆದು ಅಲ್ಲೂ ಕೂಡ ಪ್ರಥಮ ರ‌್ಯಾಂಕ್ ಪಡೆದು ಸಹಪಾಠಿಗಳು, ಸ್ನೇಹಿತರು ನಿಬ್ಬೆರಗಾಗುವಂತೇ ಸಾಧನೆ ಮಾಡುತ್ತಾರೆ.
ಇವರ ಅಭೂತಪೂರ್ವ ಶೈಕ್ಷಣಿಕ ಸಾಧನೆಯ ಬಗ್ಗೆ ಮಾಹಿತಿ ‌ಪಡೆವಾ ಬಹುರಾಷ್ಟ್ರೀಯ ಕಂಪನಿಗಳು
ಅವರ ಸಂಸ್ಥೆಯಲ್ಲಿ ಕೋಟ್ಯಂತರ ಸಂಬಳದ ಪ್ಯಾಕೇಜಿನ ಉದ್ಯೋಗ ಆಹ್ವಾನ ನೀಡುತ್ತಾರೆ,
ಜೊತೆಗೆ ಅಮೆರಿಕ, ಯುರೋಪಿನ ದೇಶಗಳಿಂದಲ್ಲೂ
ಇವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಾವೆ, ಅ ಅವಕಾಶಗಳನ್ನೆಲ್ಲ ನಿರಾಕರಿಸುತ್ತಾರೆ.
ಅದರೆ ಇವರು ಆಯ್ಕೆ ಮಾಡಿಕೊಳ್ಳುವುದು
ಭಾರತ ಸರ್ಕಾರದ ರೈಲ್ವೆ ‌ಇಲಾಖೆಯ ಸಿಗ್ನಲ್‌ ಇಂಜಿನಿಯರ್ ಉದ್ಯೋಗ.
ರೈಲ್ವೆ ಉದ್ಯೋಗದ ಜೊತೆಗೆ ಭಾರತದ ಅತ್ಯಂತ ಕಠಿಣ,
ಲಕ್ಷಾಂತರ ವಿಧ್ಯಾರ್ಥಿಗಳ ಕನಸಿನ IAS( UPSC)
ಪರೀಕ್ಷೆ ಬರೆಯಲು ಭರ್ಜರಿ ತಯಾರಿ ನಡೆಸುತ್ತಾರೆ.
2005 ರಲ್ಲಿ UPSC ಪರೀಕ್ಷೆ ಬರೆದು IPS ಶ್ರೇಣಿಯ
ಉದ್ಯೋಗಕ್ಕೆ ಆಯ್ಕೆ ಆಗುತ್ತಾರೆ ಅದರೆ ಇವರ ಗುರಿ ಇದಿದ್ದು IAS(UPSC) ಪರೀಕ್ಷೆಯಲ್ಲಿ ಆಯ್ಕೆ ಅಗುವದರೆಡಗೆ.

ಮತ್ತೆ 2006/07 ನೇ ಸಾಲಿನಲ್ಲಿ IAS (UPSC)
ಪರೀಕ್ಷೆ ಬರೆಯುತ್ತಾರೆ,
ಐತಿಹಾಸಿಕ ಪ್ರಥಮ ರ‌್ಯಾಂಕ್ ಪಡೆದು
ತಮ್ಮ ಗುರಿ ತಲುಪುತ್ತಾರೆ.
ಇವರ ಸಾಧನೆಯು ಇಡಿ ದೇಶದ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಆಂಧ್ರಪ್ರದೇಶ ಸರ್ಕಾರವು ಇವರನ್ನು ಆಂಧ್ರಪ್ರದೇಶದ ಅತ್ಯಂತ ಶ್ರೀಮಂತ, ಹೆಮ್ಮೆಯ ಸಂಸ್ಥೆಯಾದ
ಈಸ್ಟರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿಯ
ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡುತ್ತಾರೆ.
ನಿರಂತರ ಪರಿಶ್ರಮ, ಬದ್ದತೆಯ ಕಾರಣದಿಂದ,
ಇವರಿಗೆ ಪ್ರಮೋಷನಗಳು ದೊರೆಯುತ್ತದೆ.
ಈಗ ಮುತ್ಯಾಲರಾಜು ರೇವು ಅವರನ್ನು ಆಂಧ್ರಪ್ರದೇಶದ ಆತ್ಯಂತ ಶ್ರೀಮಂತ ಜಿಲ್ಲೆಯಾದ ಪಶ್ಚಿಮ ಗೋದಾವರಿಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.
ಇವರ ಸಾಧನೆ ಸಕಲ ಕೋಲಿ ಸಮಾಜಕ್ಕೆ ಪ್ರೇರಣೆ ಆಗಲಿ.
ಮತ್ತು ಇವರು ಇನ್ನೂ ಉನ್ನತ ಮಟ್ಟದ ಉದ್ದೆ ಅಲಂಕಾರಿಸಲಿ,
ಜನರ ಸೇವೆ ಮಾಡಲಿ.
ಜಿಲ್ಲಾಧಿಕಾರಿ ಮುತ್ಯಾಲರಾಜು ರೇವು ಅವರು ಜೀಲ್ಲಾ ದೋಣಿಯ ನಾವಿಕ ನಾಗಿ ಎಲ್ಲರನ್ನೂ ದಡ ಸೇರಿಸಲಿ

Be the first to comment

Leave a Reply

Your email address will not be published.


*