ನಾಲತವಾಡ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪಟ್ಟಣದಲ್ಲಿ ಸೋಮವಾರದಿಂದ ಜೂನ್ 30ರ ವರೆಗೆ ಪ್ರತಿ ದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹಾಗೂ ಪ್ರತಿ ಸೋಮವಾರ ಸಂತೆಯಿರುವ ಹಿನ್ನೆಲೆಯಲ್ಲಿ ಬೆ. 7 ರಿಂದ ಸಂಜೆ 6 ಗಂ. ವರೆಗೆ ಕಿರಾಣಿ ಅಂಗಡಿಗಳು ಸೇರಿದಂತೆ ಬಟ್ಟೆ,ಬಂಗಾರ,ಬಾಂಡೆದ ಅಂಗಡಿ ತೆರೆಯಲು ಪಟ್ಟಣದ ವರ್ತಕರ ಅಸೋಸಿಯೇಷನ್ ನಿರ್ಧರಿಸಿದೆ ಎಂದು ಕಿರಾಣಿ ವರ್ತಕರ ಸಂಘಟನೆಯ ಜೆ.ಟಿ.ಓಸ್ವಾಲ ತಿಳಿಸಿದರು.
ಪಟ್ಟಣದ ಬಜಾರದ ಓಸ್ವಾಲರ ಕಿರಾಣಿ ಅಂಗಡಿಯಲ್ಲಿ ಸೇರಿದ್ದ ವರ್ತಕರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.
ಸಂದರ್ಭದಲ್ಲಿ ಕಿರಾಣಿ ವರ್ತಕರಾದ ಈರಯ್ಯ ಸ್ಥಾವರ ಮಠ,ನಾಗರಾಜ ಚಿನಿವಾರ,ದೇವಿಚಂದ ಸಂಘವಿ,ಸಂಗಣ್ಣ ಇಲಕಲ್ಲ,ಶರಣಪ್ಪ ಇಲಕಲ್ಲ,ಬಸವರಾಜ ಫಣಿಗೋಳ,ಈರಣ್ಣ ಕಸಬೇಗೌಡ್ರ,ವೀರೇಶ ಪೂಜಾರಿ,ವಿರುಪಾಕ್ಷಪ್ಪ. ಪಡಶೆಟ್ಟಿ,ವೀರೇಶ ಪಟ್ಟಣಶೆಟ್ಟಿ,ಬಸವರಾಜ ಚೌಧರಿ,ಅಂಭಾ ಕಿರಾಣಿ ಅಂಗಡಿಯ ಮಾಲೀಕ,ಕ್ಲಾಥ್ ಮರ್ಚಂಟ್ ನ ಬಸಣ್ಣ ಎಸ್. ಮೇಗಲಮನಿ,ಲಲಿತ ಸಂಘವಿ,ಲಲಿತ ಜೈನ,ರಾಜು,ಬಾಂಡೆ ವರ್ತಕರಾದ ರಮೇಶ ಗೋಂಧಳೆ,ಜ್ಯುವೆಲ್ ವ್ಯಾಪಾರಿಗಳಾದ ಸುಭಾಷ ಪತ್ತಾರ ಇದ್ದರು.
Be the first to comment