ಕೊವಿಡ್-19 ಸಸ್ಪೆಕ್ಟೆಡ ಕಂಡು ಬಂದರೆ ವಿದ್ಯಾರ್ಥಿಗಳಿಗೆ ಪ್ರತ್ಯೆಕ ಕೊಠಡಿ ವ್ಯವಸ್ಥೆ.
ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್,ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ.
ಬಾಗಲಕೋಟೆ:ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಕರೋನಾ ವೈರಸ್ ಹಿನ್ನೆಲೆಯಲ್ಲಿ ಅನೇಕ ಬಾರಿ ಮುಂದೂಡಿದ್ದು ಪರೀಕ್ಷೆಗಳು ಜೂನ್ 25ಕ್ಕೆ ಪ್ರಾರಂಭವಾಗಲಿದ್ದು ಪರೀಕ್ಷೆಗಳಿಗೆ ಕೊರೊನಾ ರೋಗ ಭೀತಿ ಇಲ್ಲದೇ ಪರೀಕ್ಷೆಯನ್ನು ಬರೆಯಲು ಸಕಲ ಸಿದ್ಧತೆಯನ್ನು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ ದಾಶ್ಯಾಳ ಹೇಳಿದರು.
ಹುನಗುಂದ ಪಟ್ಟಣದ ತಹಶಿಲ್ದಾರ್ ಸಭಾಭವನದಲ್ಲಿ ತಹಶಿಲ್ದಾರ್ ಬಸವರಾಜ ನಾಗರಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಗುಣಮಟ್ಟ ಹಾಗೂ ಪಾರದರ್ಶಕತೆಯಿಂದ ನಡೆಸುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಆರೋಗ್ಯ ಇಲಾಖೆ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ , ಪುರಸಭೆ, ನಗರಸಭೆ ಸರಕಾರದೊಂದಿಗೆ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಥರ್ಮಲ್ ಸ್ಕ್ಯಾನಿಂಗ್ ಮತ್ತು ಹ್ಯಾಂಡ್ ಸೈನಿ ಟೇಸರ್ ಮಾಡಿ ಮಾಸ್ಕ ನಿಡಿ ಪರೀಕ್ಷಾ ಕೇಂದ್ರದ ಒಳಗಡೆ ಬಿಡುವ ಜವಾಬ್ದಾರಿಯನ್ನು ನೀಡಲಾಗಿದೆ .ಪ್ರತಿಯೊಬ್ಬ ವಿದ್ಯಾರ್ಥಿಗೆ ಮೂರು ಪೇಪರ್ ಗಳಿಗೆ ಒಂದರಂತೆ ಒಟ್ಟು ಎರಡು ಮಾಸ್ಕಗಳನ್ನು ಇಲಾಖೆಯ ವತಿಯಿಂದ ನೀಡಲಾಗುವುದು ಎಂದು ಸಭೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಅವಳಿ ತಾಲ್ಲೂಕಿನಲ್ಲಿ ಹದಿನಾಲ್ಕು ಪರೀಕ್ಷಾ ಕೇಂದ್ರ ವ್ಯವಸ್ಥೆ.
ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ಧನ್ನೂರು, ಚಿತ್ತರಗಿ, ಕೂಡಲ ಸಂಗಮ, ವಿ.ಮ ಪ್ರೌಢಶಾಲೆ ಹುನಗುಂದ, ಅಮೀನಗಡ, ಕಮತಗಿ, ಸೂಳೆಬಾವಿ, ಸರ್ಕಾರಿ ಪ್ರೌಢ ಶಾಲೆ ವಿದ್ಯಾನಗರ ಹುನಗುಂದ, ಗುಡೂರು, ತುಂಬ, ಕಂದಗಲ್ ಎಸ್.ಆರ್.ಕೆ. ಇಳಕಲ್,ಎಸ್.ವಿ.ಎಮ್.ಇಳಕಲ, ಸರ್ಕಾರಿ ಪ.ಪೂ ಇಳಕಲ ಸೇರಿದಂತೆ 14 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಶಿಕ್ಷಣ ಇಲಾಖೆಯ 442 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಒಂದು ಕೊಠಡಿಯಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ.
ಪರೀಕ್ಷಾ ಕೇಂದ್ರದ ಒಂದು ಕೊಠಡಿಯಲ್ಲಿ ಹದಿನೆಂಟರಿಂದ ಇಪ್ಪತ್ತು ಜನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಒಂದು ವೇಳೆ ಯಾರಾದರೂ ಕೋವಿಡ್-19 ಸಸ್ಪೆಕ್ಟೆಡ್ ಕಂಡು ಬಂದರೆ ಅಂಥವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿ. ಕೊರೊನಾ ಸಮಸ್ಯೆ ಉಂಟಾದರೆ ಕೇಂದ್ರವನ್ನು ಬದಲಾಯಿಸಲು ಹುನಗುಂದ ತಾಲ್ಲೂಕಿನಲ್ಲಿ ಒಂದು ಕೇಂದ್ರ ಮತ್ತು ಇಳಕಲ್ ತಾಲ್ಲೂಕಿನಲ್ಲಿ ಒಂದು ಕೇಂದ್ರವನ್ನು ಹೆಚ್ಚಿಗೆ ಮಾಡಲಾಗಿದೆ.
ವಿದ್ಯಾರ್ಥಿಗಳ ಸ್ವಂತ ತಾಲ್ಲೂಕಿನಲ್ಲಿಯೇ ಪರೀಕ್ಷೆ ಬರೆಯಲು ಅನುಮತಿ.
ಅವಳಿ ತಾಲೂಕಿನ 4853 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಇನ್ನೂ ಬೇರೆ ತಾಲ್ಲೂಕಿನಿಂದ ಹುನಗುಂದಕ್ಕೆ ಬಂದು ಅಧ್ಯಯನ ಮಾಡುತ್ತಿದ್ದ 25 ವಿದ್ಯಾರ್ಥಿಗಳು ಆಯಾ ತಾಲ್ಲೂಕಿನಲ್ಲಿಯೇ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಿದರೆ, ಇನ್ನೂ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಮಂಗಳೂರು, ಬೆಂಗಳೂರು, ಉಡುಪಿ ಸೇರಿದಂತೆ ಬೇರೆ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಅಧ್ಯಯನ ಮಾಡುತ್ತಿದ್ದ 96 ಜನ ವಿದ್ಯಾರ್ಥಿಗಳು ಸಧ್ಯ ನಮ್ಮಲ್ಲಿಯೇ ಪರೀಕ್ಷೆಗಳನ್ನು ಬರೆಯಲಿದ್ದಾರೆ.
ಪರೀಕ್ಷೆಗೆ ಒಂದೂವರೆ ಗಂಟೆ ಮುಂಚಿತ ಹಾಜರಿರಬೇಕು.
ಪರೀಕ್ಷೆಗಳು ಬೆಳಿಗ್ಗೆ 10:30 ಗಂಟೆಗೆ ನಡೆಯಲಿವೆ.ಕೊರೊನಾ ರೋಗದ ಭೀತಿಯಿಂದ ಮಕ್ಕಳಿಗೆ ತೊಂದರೆಯಾಗದಂತೆ ಸಾಮಾಜಿಕ ಅಂತರ ಮತ್ತು ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನ್ ಮಾಡುವ ದೃಷ್ಟಿಯಿಂದ ಪರೀಕ್ಷೆ ಸಮಯಕ್ಕಿಂತ ಒಂದೂವರೆ ಗಂಟೆ ಮುಂಚಿತವಾಗಿಯೇ ವಿದ್ಯಾರ್ಥಿಗಳು ಹಾಜರಿರಬೇಕು.
ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಸಿಂಪಡನೆ.
ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗುವ ಎರಡು ದಿನ ಮುಂಚಿತವಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಮಾಡಿಸಲಾಗುವುದು. ಪರೀಕ್ಷೆಯ ದಿನದಂದು ಎರಡು ಗಂಟೆ ಮುಂಚಿತವಾಗಿಯೇ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಲಾಗುವುದು.
ಉಚಿತ ಬಸ್ ಸಾರಿಗೆ ವ್ಯವಸ್ಥೆ.
ಪ್ರತಿ ದಿನ ವಿದ್ಯಾರ್ಥಿಗಳನ್ನು ಅವರ ಊರಿನಿಂದ ಉಚಿತವಾಗಿ ಸಾರಿಗೆ ಬಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಪರೀಕ್ಷೆ ಮುಗಿದ ನಂತರ ಪುನಃ ಅವರ ಊರಿಗೆ ಅದೇ ಬಸ್ಸಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನ್ ದಿಂದ ಚೆಕ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುವುದು.ಒಂದು ವೇಳೆ ಯಾರಾದರೂ ಕೊವಿಡ್-19 ಸಸ್ಪೆಕ್ಟೆಡ್ ಅನಿಸಿದಲ್ಲಿ ಅಂಥವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ
ಮೊಬೈಲ್ ಬಳಕೆಗೆ ನಿಷೇಧ.
ಪರೀಕ್ಷೆ ಕೊಠಡಿಯಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಮೊಬೈಲ್ ಬಳಸುವಂತಿಲ್ಲ.
ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಕೇಂದ್ರಕ್ಕೆ ಭೇಟಿ ನೀಡಿದಾಗ ಮೊಬೈಲನ್ನು ಹೊರಗಡೆ ಇಡುವಂತೆ ಸೂಚಿಸಲಾಗಿದೆ.
ತಾಲೂಕಿನ 14 ಕೇಂದ್ರಗಳಲ್ಲಿ 4853 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು,ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಂತೆ ವಿದ್ಯಾರ್ಥಿಗಳು ಯಾವುದೆ ಆತಂಕಕ್ಕೆ ಒಳಗಾಗದೆ ನೋಡಿಕೊಳ್ಳುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.ಪರೀಕ್ಷಾ ಕೇಂದ್ರದ ಸುತ್ತಲೂ 144 ಕಲಂ ಜಾರಿಯಲ್ಲಿದ್ದು ಸಾರ್ವಜನಿಕರು ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳಬೇಕು.
ಬಸವರಾಜ ನಾಗರಾಳ
ತಹಶಿಲ್ದಾರರ ಹುನಗುಂದ
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಸಿ.ಬಿ ಮ್ಯಾಗೇರಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ತಾಲ್ಲೂಕು ವೈದ್ಯಾಧಿಕಾರಿ ಡಾ ಪ್ರಶಾಂತ್ ತುಂಬಗಿ, ಪಿ ಎಸ್ ಐ ಪುಂಡಲೀಕ ಪಟಾತರ, ಎಂ.ವಿ ಅರಳಿ, ಬಿ.ಬಿ ಕುರಿ, ಅಕ್ಕಮಹಾದೇವಿ ಗದ್ದಿ, ಸಿ.ವೈ ಕುರಿ,ಸಿದ್ದು ಪಾಟೀಲ,ಸಾರಿಗೆ ಅಧಿಕಾರಿ ಸೇರಿದಂತೆ ಅನೇಕರು ಇದ್ದರು.
ವರದಿ:- ಶರಣಪ್ಪ ಹೆಳವರ ಬಾಗಲಕೋಟ
Be the first to comment