ಹಿಂದುಳಿದ ವರ್ಗದಿಂದ 1996 ರಲ್ಲಿ ಎಸ ಟಿ ಸೇರ್ಪಡೆ ಆದ ನಾಯಕ ಸಮುದಾಯದವರು ಗೊಲ್ಲ ಸಮುದಾಯ ನ್ಯಾಯಯುತ್ತ ಬೇಡಿಕ್ಕೆಗೆ ಅಡಿ ಮಾಡುತ್ತಿರುವು ಖಂಡನಿಯ:- ಆನಂದರಾಜ್

ಯಾದವ ದಾವಣಗೆರೆ :- ದೇಶದ ಪರಂಪರೆ ಇತಿಹಾಸವುಳ್ಳ ಯಾದವ ( ಗೊಲ್ಲ ) ಸಮುದಾಯ ಆರ್ಥಿಕ , ಶೈಕ್ಷಣಿಕ , ಸಾಮಾಜಿಕ , ರಾಜಕೀಯವಾಗಿ ಹಿಂದುಳಿದಿದೆ . ಹಾಗಾಗಿ ಯಾದವ ( ಗೊಲ್ಲ ) ಸಮುದಾಯಕ್ಕೂ ಎಸ್.ಟಿ ಮೀಸಲಾತಿ ಬೇಕಾಗಿದೆ ಎಂದು ಜಿಲ್ಲಾ ಯಾದವ ಮಹಾಸಭಾ ಅಧ್ಯಕ್ಷ ಬಾಡದ ಆನಂದರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ . ಹರಪನಹಳ್ಳಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗಪ್ಪ ಅವರು ಗೊಲ್ಲ ಸಮಾಜವು ಎಸ್ಟಿ ಮೀಸಲಾತಿಗೆ ಸೇ ರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ . ರಾಜ್ಯದಲ್ಲಿ 35 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಸಾಮಾಜಿಕವಾಗಿ ಹಿಂದುಳಿದಿದ್ದು , ಜನರು ಸಂಕಷ್ಟದ ಹಾದಿಯಲ್ಲಿದ್ದಾರೆ . ಯಾವುದೇ ಸರ್ಕಾರ ಬಂದರೂ ನಮ್ಮ ಸಮುದಾಯದ ( ಗೊಲ್ಲ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ . ಇತ್ತೀಚೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದು ಯಾದವ ( ಗೊಲ್ಲ ) ಸಮುದಾಯವನ್ನು ಎಸ್‌ಟಿ ಜನಾಂಗಕ್ಕೆ ಸೇರ್ಪಡೆ ಮಾಡಬೇಕು , ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಪತ್ರ ಬರೆದಿದ್ದನ್ನು ರಾಜ್ಯದ ಸಮಸ್ತ ಯಾದವ ( ಗೊಲ್ಲ ) ಕುಲ ಬಾಂಧವರು ಸ್ವಾಗತಿಸಿದ್ದಾರೆ . ನಮಗೂ ಮೀಸಲಾತಿ ನೀಡಿ ನಂತರ ಒತ್ತಾಯ ಎಸ್‌ಟಿ ಸಮುದಾಯಕ್ಕೆ ಗೊಲ್ಲ ಸಮುದಾಯ ಸೇರ್ಪಡೆ ಮಾಡಲಿ , ಆದರೆ ಸರ್ಕಾರಗಳು ಕಾಲ ವಿಳಂಬ ಮಾಡದೇ ಗೊಂದಲಕ್ಕೆ ಎಡೆಮಾಡಿಕೊಡದೇ ತ್ವರಿತ ಗತಿಯಲ್ಲಿ ಈ ಕೆಲಸ ಮಾಡಬೇಕು . ನಾಯಕ ಮತ್ತು ಯಾದವ ಸಮುದಾಯ ಅನ್ನೋನ್ಯವಾಗಿದೆ . ಮೀಸಲಾತಿ ಮತ್ತು ಎಸ್‌ಟಿಗೆ ಸೇರ್ಪಡೆ ವಿಚಾರದಲ್ಲಿ ಎರಡೂ ಸಮಾಜಕ್ಕೂ ಅನ್ಯಾಯವಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬುದು ಯಾದವ ( ಗೊಲ್ಲ ) ಸಮಾಜದ ಒತ್ತಾಯ ಎಂದಿದ್ದಾರೆ.

Be the first to comment

Leave a Reply

Your email address will not be published.


*