ಗಿಡ ನೆಡುವುದು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು : ಡಿವೈಎಸ್ಪಿ ನರಸಿಂಹಮ ತಾಮ್ರದ್ವಜ.

ಜೀಲ್ಲಾ ಸುದ್ದಿಗಳು

ಹರಿಹರ:-ಗಿಡ ನೆಡುವುದು ಕೇವಲ ಪರಿಸರ ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು, ನಾವೆಲ್ಲರೂ ಉತ್ತಮ ರೀತಿಯಲ್ಲಿ ಬದುಕಿ ಆರೋಗ್ಯವಂತರಾಗಿ ಇರಬೇಕಾದರೆ,ಪರಿಸರದ ಉಳಿವು ಅಷ್ಟೇ ಪ್ರಮುಖವಾಗಿದೆ .ನಾವು ನಮ್ಮ ಮಕ್ಕಳ ಬಗ್ಗೆ ಹೇಗೆ ಕಾಳಜಿ ಬಯಸುತ್ತೇವೆಯೋ ಹಾಗೆಯೇ ನಾವು ನೆಟ್ಟ ಗಿಡಗಳನ್ನು ನಮ್ಮ ಮಕ್ಕಳಂತೆ ಕಾಳಜಿ ವಹಿಸಿ ಪಾಲನೆ ಮಾಡಿ ಪೋಷಿಸಿ ಬೆಳೆಸಿಕೊಂಡು ಹೋಗಬೇಕು .

ಶುಕ್ರವಾರದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹರಿಹರದ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ವಸತಿ ಗೃಹ ಆವರಣದಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾತನಾಡಿ ಗಿಡ ನೆಡುವುದು ಮುಖ್ಯವಲ್ಲ ,ಬದಲಾಗಿ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯವಾದದ್ದು ನಾಗರಿಕರು ಗಿಡ ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು .

ಸಿಪಿಐ ಶಿವಪ್ರಸಾದ್ ಎಂ ಮಾತನಾಡಿ ಪರಿಸರ ಉಳಿವಿಗೆ ನೆಟ್ಟ ಗಿಡಗಳ ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ .ವಾರದಲ್ಲಿ ಎರಡು ದಿನವಾದರೂ ನಾವು ನೆಟ್ಟಿರುವ ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು . ಜಾಾಹೀರಾತು


ಪರಿಸರ ಉಳಿವಿನ ಜವಾಬ್ದಾರಿ ಪ್ರತಿ ನಾಗರಿಕನ ಮೇಲೆ ಅವಲಂಬಿತವಾಗಿದೆ, ಅದು ಅವರ ಕರ್ತವ್ಯವೂ ಹೌದು.ಉತ್ತಮ ಪರಿಸರ ನಿರ್ಮಾಣದಿಂದಾಗಿ ತಾಲ್ಲೂಕು ಉತ್ತಮ ನಗರ ಎನಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸಾಗೋಣ ಎಂದರು .

ಈ ಕಾರ್ಯಕ್ರಮದ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಶೈಲ ಶ್ರೀ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ರವಿಕುಮಾರ್, ಹಾಗೂ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .

ವರದಿ.ಪ್ರಕಾಶ ಮಂದಾರ.

Be the first to comment

Leave a Reply

Your email address will not be published.


*