ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ:-ಕರ್ನಾಟಕ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಸಮಾಜ ಕುರುಬ ಸಮಾಜವಾಗಿದ್ದು ಸತತವಾಗಿ ಎಲ್ಲಾ ಪಕ್ಷಗಳಿಂದ ಅಧಿಕಾರ ವಂಚಿತ ಹಾಗೂ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ನ್ಯಾಯ ಸಿಗದ ಸಮಾಜ ಎಂದರೆ ಅದು ಕುರುಬ ಸಮಾಜ.
ಕರ್ನಾಟಕದ ಯಾವುದೇ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ನಿರ್ಣಾಯಕರು ಕುರುಬ ಸಮಾಜದವರಾಗಿದ್ದು, ನಾವು ದಶಕಗಳಿಂದ ನೋಡಿದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ರಾಜಕೀಯದಲ್ಲಿ ಸಿಗ್ತಾ ಇಲ್ಲ,
ಬಿಜೆಪಿ ಪಕ್ಷದ ಸರ್ಕಾರ ರಚನೆ ಆಗುವುದರಲ್ಲಿ ಮುಖ್ಯ ಪಾತ್ರವಹಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಕೂಡ ತಾವು ತ್ಯಾಗ ಮಾಡಿ ಬಿಜೆಪಿ ಸರ್ಕಾರ ರಚಿಸಲು ಕಾರಣೀಭೂತರಾದ ಹಿರಿಯ ನಾಯಕರಾದ ಎಚ್.ವಿಶ್ವಾನಾಥ , ಎಮ್.ಟಿ. ಬಿ.ನಾಗರಾಜ, ಆರ್.ಶಂಕರ ಅವರನ್ನು ಬಿಜೆಪಿ ಪಕ್ಷ ಹಾಗೂ ಸನ್ಮಾನ್ಯ ಯಡಿಯೂರಪ್ಪನವರು ವಿಧಾನಪರಿಷತ್ತಗೆ ಆಯ್ಕೆ ಮಾಡಬೇಕು, ಹಾಗೂ ಕಾಂಗ್ರೇಸ್ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಕುರುಬ ಸಮಾಜದ ಮತಗಳು ಮುಖ್ಯ ಕಾರಣ ಎನ್ನುವುದನ್ನು ಸನ್ಮಾನ್ಯ ಸಿದ್ದರಾಮಯ್ಯನವರು ಮರೆಯದೆ ಕಾಂಗ್ರೇಸ್ ಪಕ್ಷದಲ್ಲಿ ಕುರುಬ ಸಮಾಜದ ಎಚ್.ಎಮ್.ರೇವಣ್ಣನರನ್ನು ವಿಧಾನಪರಿಷತ್ತ್ ಸದಸ್ಯರಾಗಿ ಮುಂದುವರೆಸಬೇಕು, ಹಾಗೂ ಹಿಂದುಳಿದ ಭಾಗದ ಹೈದರಾಬಾದ ಕರ್ನಾಟಕದ ರೈತ ಹೋರಾಟಗಾರ ಹಾಗೂ ಕುರುಬ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ಸಲಾದಪೂರ ಅವರನ್ನು ವಿಧಾನಪರಿಷತ್ತಗೆ ಆಯ್ಕೆ ಮಾಡಬೇಕು ಎಂದು ಎಲ್ಲಾ ಪಕ್ಷದ ಮುಖಂಡರುಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗನಗೌಡ ಪಾಟೀಲ ದೇವಿಕೇರಾ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದ ಅಧ್ಯಕ್ಷರುಗಳಲ್ಲಿ ಮತ್ತು ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ವರದಿ:- ರಾಘವೇಂದ್ರ ಮಾಸ್ತರ
Be the first to comment