ಜಿಲ್ಲಾಸುದ್ದಿಗಳು
ಬಾಗಲಕೋಟ:
ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದ್ನು ತೋರಿಸಿಕೊಟ್ಟ ಮಹಾನ ಸಾಧಕ.
ಬಾಗಲಕೋಟೆ: ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ
ಹಳಿಂಗಳಿ ಗ್ರಾಮದ ಪ್ರವೀಣ್ ಶಂಭುಲಿಂಗ ಸುಣಗಾರ್ ನೇಪಾಳದ ಪೋಕರಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಚಿನ್ನ ಗೆದ್ದಿದ್ದಾರೆ.
ಆರನೇ ಇಂಡೋ ನೇಪಾಳ್ ಯುತ್ ರೂರಲ್ ಗೇಮ್ಸ್ ಮತ್ತು ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಿತು. ಪ್ರವೀಣ್ ಹತ್ತು ದೇಶಗಳ ಮಲ್ಲರೊಂದಿಗೆ ಸೆಣಸಿ ಬಂಗಾರಕ್ಕೆ ಕೊರಳೊಡ್ಡಿದರು.
y
ಬಾಲ್ಯದಲ್ಲೇ ನನ್ನ ತಂದೆ ತೀರಿ ಹೋದರು ನನ್ನಮ್ಮ ಶೋಭಾ ನನ್ನ ಕನಸಿಗೆ ನೀರೆರೆದರು. ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಮೆ ಮಾಡಿ ನನ್ನನ್ನು ಪೈಲ್ವಾನ್ ಮಾಡಿದರು ಸೇನೆಗೆ ಸೇರುವುದೇ ನನ್ನ ಗುರಿ ಎಂದು ಪ್ರವೀಣ್ ಹೇಳಿದರು.
ಪ್ರತಿಭೆಯನ್ನು ಗುರುತಿಸಿದ ಕೋಚ್ ಬನಹಟ್ಟಿ ಎಸ್.ಆರ್.ಎ. ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರವೀಣ್ ಸುಣಗಾರನ ಕುಸ್ತಿ ಕ್ರೀಡೆ ಮೇಲಿರುವ ಆಸಕ್ತಿಯನ್ನು ಕಂಡ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಕೃಷ್ಣ ಎಂಬ ಕೋಚರ್ ಪ್ರವೀಣ್ ಗೆ ತರಬೇತಿ ನೀಡಿದರು.ಕ್ರೀಡಾ ಪ್ರೇಮಿಗಳು ಈ ಬಡ ಕ್ರೀಡಾ ಪಟುವಿಗೆ ಆರ್ಥಿಕ ನೆರವು ನೀಡಿ ಇನ್ನೂ ಉನ್ನತ ರೀತಿಯಲ್ಲಿ ಬೆಳೆಯಲು ಸಹಾಯ ಆಗಲಿ.
Be the first to comment