ಜಿಲ್ಲಾ ಸುದ್ದಿಗಳು
ಯಾದಗಿರಿ:
ವಲಸೆ ಕಾರ್ಮಿಕರ ಕ್ವಾರಂಟೈನ್ ಕದ ಮುಚ್ಚಿಕೊಳ್ಳುತ್ತಿದ್ದಂತೆ ಕೊರೊನಾ ವೈರಸ್ ಸೇವಾನಿರತ ಪೋಲಿಸ್ ಠಾಣೆಯ ಬಾಗಿಲು ತಟ್ಟಿದೆ ಎನ್ನವ ಗುಮಾನಿ ಇದ್ದು, ಶಹಾಪುರ ನಗರ ಪೋಲಿಸ್ ಠಾಣೆಗೆ ವೈರಸ್ ಸೊಂಕು ತಗುಲಿದೆಯಾ ಎನ್ನವ ಮಾತು ಸಾರ್ವತ್ರಿಕ ವಲಯದಲ್ಲಿ ಕೆಳಿ ಬರುತ್ತಿದೆ.
ಕಳೆದ ಮೂರ್ನಾಲ್ಕು ತಿಂಗಳ ಕಾಲ ಕೊರೊನಾ ವೈರಸ್ ಲಾಕ್ ಡೌನ್ ಜಾರಿಯಲ್ಲಿ ಜನ ಸಾಮಾನ್ಯರ ಹಿತ ಕಾಪಾಡಿದ ಪೋಲಿಸರು ಹಗಲಿರುಳು ಶ್ರಮಿಸಿದ್ದು ಶ್ಲಾಘನೀಯವಾದರೆ, ಕೊರೊನಾ ವಾರಿಯರ್ಸ್ ಗಳಿಗೂ ಈ ವೈರಸ್ ಅಟ್ಟಹಾಸ ಬೀರಿದೆ ಎನ್ನವುದರಲ್ಲಿ ಸಂಶಯವಿಲ್ಲ,
ವಲಸೆ ಕಾರ್ಮಿಕರ ಕ್ವಾರಂಟೈನ್ ಗಳನ್ನು ಕಾಯ್ದುಕೊಂಡು ಇಷ್ಟು ದಿನ ತಮ್ಮ ಮನೆ ಕುಟುಂಬಗಳನ್ನೇ ಮರೆತು ಕರ್ತವ್ಯನಿರ್ವಹಿಸಿದ ಈ ಪೋಲಿಸ್ ವಾರಿಯರ್ಸ್ ಗಳಿಗೆ ಈಗ ಕೊರೊನಾ ಬೀತಿ ಎದುರಾಗಿದೆ.
ಶಹಾಪುರ ನಗರ ಠಾಣಾ ಪೋಲಿಸ್ ಪೇದೆಯೋರ್ವರಿಗೆ ಈ ವೈರಸ್ ಸೊಂಕು ಇದೆ ಎನ್ನವ ಸಂಶಯವಿದ್ದು ನಿಖರವಾದ ವರದಿಗಾಗಿ ಸಂಜೆ ಸರ್ಕಾರ ಬಿಡುಗಡೆ ಮಾಡುವ ಹೆಲ್ತ್ ಬುಲೇಟಿನ್ ವರದಿಗಾಗಿ ಕಾಯಬೇಕಿದೆ.
ವೈರಸ್ ದೃಡ ಪಟ್ಟಲ್ಲಿ ಠಾಣೆ ಸೀಲ್ ಡೌನ್?
ಕೊರೊನಾ ವೈರಸ್ ಸೊಂಕು ಠಾಣೆ ಸಿಬ್ಬಂದಿಯವರಿಗೆ ದೃಡಪಟ್ಟಲ್ಲಿ ನಗರದ ಹೃದಯ ಭಾಗದಲ್ಲಿರುವ ಪೋಲಿಸ್ ಠಾಣೆ ಮತ್ತು ಪೋಲಿಸ್ ಕ್ವಾಟರ್ಸ ಸಿಲ್ ಡೌನ್ ಆಗುವ ಸಂಭವಿದೆ,ಎನ್ನವ ಮಾತು ಕೇಳಿ ಬರುತ್ತಿದೆ,14 ದಿನಗಳ ಕಾಲ ಈ ಠಾಣೆ ಸಂಪೂರ್ಣ ಲಾಕ್ ಆಗುವದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಅಲ್ಲದೆ ಸಂಭಂಧಪಟ್ಟ ಠಾಣಾ ಅಧಿಕಾರಿಗಳ ಸಂಪರ್ಕದಲ್ಲಿದ್ದ ಸಿಬ್ಬಂದಿಯವರು 14 ದಿನಗಳ ಕಾಲ ಹೊಮ್ ಕ್ವಾರಂಟೈನ್ ನ ಹೊಸ ನೀತಿಗೆ ಒಳಪಡುವುದು ಖಚಿತವಾಗಿರುತ್ತದೆ.
ನಗರ ಠಾಣೆಗೆ ಎಸ್ಪಿ ಬೇಟಿ
ಕೊರೊನಾ ವೈರಸ್ ಸೊಂಕು ಅನುಮಾನದ ಸ್ಥಿತಿಯಲ್ಲಿರುವ ಶಹಾಪುರ ನಗರ ಪೋಲಿಸ್ ಠಾಣೆಗೆ ಯಾದಗಿರಿ ಜಿಲ್ಲಾ ಎಸ್ಪಿ ಋಷಿಕೇಷ ಭಗವಾನ ಸೊನಾವಣೆ , ಹಾಗೂ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಬೇಟಿ ನೀಡಿ ಸಮಗ್ರ ವರದಿ ಪಡೆದಿದ್ದಾರೆ ಎಂದು ಹೆಳಲಾಗುತ್ತಿದೆ, ಅಲ್ಲದೆ ಸೊಂಕು ಸಂಜೆಗೆ ದೃಡಪಟ್ಟಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಅಲ್ಲದೆ ಭೀಮರಾಯನಗುಡಿ ಸ್ವಾಬ್ ಟೆಸ್ಟಿಂಗ್ ಕೇಂದ್ರಕ್ಕೂ ಬೇಟಿ ನೀಡಿ ಪರೀಶೀಲನೆ ನೆಡೆಸಿದರು.
ಶಹಾಪುರ ಠಾಣಾ ಪೋಲಿಸ್ ರಿಗೆ ಟೆಷ್ಟಿಂಗ ಶಿಘ್ರ ವರದಿಗೆ ಸೂಚನೆ
ನಗರ ಠಾಣೆಗೆ ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ಎಚ್ಚರಗೊಂಡ ತಾಲೂಕು ಆಡಳಿತ ತಕ್ಷಣವೆ ಶಹಾಪುರ ನಗರ ಠಾಣಾ ಅಧಿಕಾರಿಗಳಿಗೆ ಸಿಬ್ಬಂದಿಯವರಿಗೆ ಭೀ,ಗುಡಿಯಲ್ಲಿ ಸ್ವಾಬ್ ಪರಿಕ್ಷಗೆ ಒಳಪಡಿಸಲಾಯಿತು,
ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಪೋಲಿಸ್ ಸಿಬ್ಬಂದಿಯವರಿಗೆ ಸೂಕ್ತ ರಕ್ಷಣೆ ಅವಶ್ಯಕವಾಗಿದ್ದು ಪರಿಕ್ಷಗೊಳಗಾಗಿದ್ದ ಎಲ್ಲಾ ಪೋಲಿಸರ ಪರೀಕ್ಷಾ ವರದಿ ಶಿಘ್ರ ತರಿಸಿಕೊಳ್ಳಬೇಕು ಎಂದು ಅವರು ವೈಧ್ಯಧಾಧಿಕಕಾರಿಗಳಿಗೆ ಸೂಚನೆ ನೀಡಿದರು,
ಮುಂಜಾಗ್ರತಾ ಕ್ರಮವಾಗಿ ಎಲ್ಲರಿಗೂ ಮಾಸ್ಕ ಮತ್ತು ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ,ಎಂದು ತಿಳಿದು ಬಂದಿದೆ,
ಕಳೆದ 20 ದಿನಗಳ ಹಿಂದೆ ಪರೀಕ್ಷಾ ನೆಡೆದ ವರದಿ ವಿಳಂಬ
ಇತ್ತೀಚೆಗೆ ಕಳೆದ 20 ದಿನಗಳ ಹಿಂದೆಯಷ್ಟೆ ಪರಿಕ್ಷೆಗೊಳಗಾಗಿದ್ದ ಸ್ಥಳಿಯ ಠಾಣೆ ಸಿಬ್ಬಂದಿ ಪೆದೆಯವರು ಕರ್ತವ್ಯ ನಿರತರಾಗಿದ್ದಾರೆ, ಅಲ್ಲದೆ ವರದಿ ವಿಳಂಬದಿಂದ ಸೊಂಕು ಬೀತಿ ಹೆಚ್ಚಾಗುತ್ತಿದ್ದು ವೈದ್ಯಕೀಯ ಇಲಾಖೆ ನಿರ್ಲಕ್ಷತೆಯಿಂದ ಆತಂಕ ಸೃಷ್ಟಿಯಾಗಿದೆ ಎನ್ನವ ಆರೋಪಗಳಿದ್ದು ಪರಿಕ್ಷೆ ವರದಿ ತಕ್ಷಣವೆ ದೃಡಪಟ್ಟಲ್ಲಿ ಇನ್ನೂ ಸೊಂಕು ತಡೆಗಟ್ಟಬಹುದಾಗಿತ್ತು, ಆದರೆ 20 ದಿನಗಳ ವಿಳಂಬವಾದ ವರದಿ ಇಂದು ಠಾಣೆ ಸಿಬ್ಬಂದಿ ಸೇರಿದಂತೆ ಇತರೆ ಸಾರ್ವಜನಿಕರಲ್ಲಿ ತಳಮಳ ಉಂಟಾಗಿದೆ. ಇದರಿಂದಾಗಿ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುವದೋ ಕಾದುನೊಡಬೇಕಿದೆ.
Be the first to comment