ಜಿಲ್ಲಾಸುದ್ದಿಗಳು
ನಾಲತವಾಡ:
ಸರಕಾರದ ಆದೇಶದಂತೆ ರೈತರಿಗೆ ಬೀಜ ವಿತರಣೆ ಮಾಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾಲತವಾಡ ಕೃಷಿ ಅಧಿಕಾರಿ ವೈ. ಬಿ. ಕ್ಷತ್ರಿ ಹೇಳಿದರು.
ರೈತರಿಗೆ ತೊಗರಿ ಹಾಗೂ ಹೆಸರು ಬೀಜ ವಿತರಣೆ ಕಾರ್ಯಕ್ರಮ ನಾಲತವಾಡ ಕೃಷಿ ಅಧಿಕಾರಿ.ಯಂಕಪ್ಪ .ಬಿ. ಕ್ಷತ್ರಿ. ಉದ್ಘಾಟಿಸಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ರೈತ ಸಂಪರ್ಕ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಾಲತವಾಡ ಭಾಗದ 47 ಹಳ್ಳಿಗಳಿಗೆ ತೊಗರಿ ಹಾಗೂ ಹೆಸರು ಬೀಜ ವಿತರಣೆ ಮಾಡಲಾಗುವುದು. ಕೆ. ಕಿಸಾನ್ ಯೋಜನೆಯಲ್ಲಿ ರೈತರು ದಾಖಲೆ ನೀಡಿದ್ದಾರೆ. ಅದಕ್ಕಾಗಿ ದಾಖಲೆ ನೀಡಿರುವವರು ತೊಗರಿ, ಹೆಸರು ಬೀಜಗಳನ್ನು ತೆಗೆದುಕೊಂಡು ಹೋಗಲು ಮನವಿ ಮಾಡಿದರು. ಇ ವೇಳೆ M S ಪಾಟೀಲ ಶಂಕರಾವ ದೇಶಮುಖ ಗಂಗಣ್ಣ ಹಳೇಮನಿ ಬಿಮಣ್ಣ ಗುರಿಕಾರ ಮಹಾಂತಪ್ಪ ಗಾದಿ ವೀರೆಶ ಕಸಬೆಗೌಡರ್ ಅಂಬ್ರಪ್ಪ ಸಿರೀ ಪರಸು ಕಂದಗಲ್ಲ. ಕಾಜಿ ಬಾಬು ತೇಗಿನಮನಿ ಇದ್ದರು.
Be the first to comment