ಸಾಂಪ್ರದಾಯಿಕ ಕೃಷಿ ಪದ್ಧತಿಯ ಅವನತಿಯ ಹಿನ್ನಲೆಯಲ್ಲಿ,ಸಾಂಪ್ರದಾಯಿಕ ಕೃಷಿ ಪರಿಕರಗಳು ನೇಪತ್ಯಕ್ಕೆ ಸೇರಿವೆ ಹಾಗೂ ಅವುಗಳನ್ನು ತಯಾರಿಸುವ ಕುಶಲಕರ್ಮಿಗಳು ಸಹ ಬಹು ಅಪರೂಪಾಗಿದ್ದಾರೆ.ರೈತಾಪಿವಗ೯ವು ಯಂತ್ರಗಳನ್ನು ಅವಲಂಭಿತ ಕೃಷಿಗೆ ಅಂಟಿಕೊಂಡಿದ್ದಾರೆ,ರೈತರು ತಮ್ಮ ವ್ಯವಸಾಯದ ಚಟುವಟಿಕೆಗಳಲ್ಲಿ ಎಲ್ಲಾಹಂತದಲ್ಲಿಯೂ ಯಂತ್ರವಲಂಭಿತವಾಗಿದ್ದಾರೆ.ಕೇವ ಗ್ರಾಮೀಣ ಭಾಗಗಳಲ್ಲಿ ಕಾಣಸಿಗುವ ಸಾಂಪ್ರದಾಯಿಕ ಕೃಷಿ ಪರಿಕರಗಳು ತಮ್ಮ ಮೂಲ ಸ್ವರೂಪದಿಂದ ತೀರಾ ಬಿನ್ನಾಗಿವೆ.ಕಾರಣ ಅವು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ,ಯಂತ್ರಗಳು ಅವುಗಳ ಜಾಗವನ್ನು ಅತಿಕ್ರಮಾಡಿಕೊಂಡಿವೆ ಇದರಿಂದಾಗಿ ಅವು ನೇಪತ್ಯಕ್ಕೆ ಸರಿದಿವೆ.ಅವುಗಳನ್ನು ತಯಾರಿಸುವ ಬಡಗಿತನದ ಕಸುಬುದಾರರು ಹಾಗೂ ಕುಶಲಕಮಿ೯ಗಳೂ ನಾಪತ್ತೆಯಾಗಿದ್ದಾರೆ ಯಂತ್ರಗಳ ಬಳಕೆಯಿಂದಾಗಿ ಅವರ ಕುಶಲತೆಗೆ ತಕ್ಕ ವೇದಿಕೆ ಮತ್ತು ಬೇಡಿಕೆ ಇಲ್ಲಾವಾಗಿದೆ.ಅವರ ಜಾಗವನ್ನು ಯಂತ್ರಗಳು ಕಸಿದು ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ಸಂಪೂಣ೯ ಮರೆಮಾಚಿವೆ.ಗ್ರಾಮೀಣ ಭಾಗದ ಕುಶಲಕಮಿ೯ಗಳು ಅನಾಥ ಪ್ರಜ್ಞೆಯಿಂದ ನೊಂದುಕೊಳ್ಳುತ್ತಿದ್ದಾರೆ.ಸಕಾ೯ರಗಳ ಯೋಜನೆಗಳು ಕುಶಲಕಮಿ೯ಗಳ ಪಾಲಿಗೆ ಆಗಸದಲ್ಲಿರುವ ನಕ್ಷತ್ರಗಳಾಗಿವೆ.ಈ ಕುರಿತು ಕೂಡ್ಲಿಗಿಯ ಕುಶಲಕಮಿ೯ ಹಾಗೂ ಶ್ರೀಊರಮ್ಮ ದೇವಿ ಅಚ೯ಕ ಬಡಿಗೇರ ಈರಣ್ಣ ಮಾತನಾಡಿ,ತಂದೆ ಅಜ್ಜರ ಕಾಲದಲ್ಲಿ ಕೃಷಿ ಪರಿಕರಗಳನ್ನು ತಯಾರಿಸಿಯೇ ವಷ೯ಪೂತಿ೯ ಜೀವನ ನಡೆಸಿದ್ದಾರೆ.ಆ ಕಾಲದಲ್ಲಿ ನಗದು ಹಣವಿಲ್ಲ, ತಾವು ತಯಾರಿಸಿಕೊಟ್ಟ ಕೃಷಿ ಪರಿಕರಗಳಿಗೆ ತಕ್ಕಂತೆ ಕಾಳು, ಕಡಿ,ಅಗತ್ಯ ಸಾಮಾಗ್ರಿಗಳನ್ನು ಕ್ರಯ ವಿಕ್ರಯ ರೀತಿಯಲ್ಲಿ ಕುಶಲಕಮಿ೯ಗಳಿಗೆ ರೈತರು ನೀಡುತ್ತಿದ್ದರಂತೆ ಎಂದು ತಮ್ಮ ಕಣ್ಣಂಚಿನಲ್ಲಿ ನೀರುತುಂಬಿಕೊಳ್ಳೋ ಮೂಲಕ ನುಡಿದರು,ಅದು ಅವರಲ್ಲಿರುವ ಗ್ರಾಮೀಣ ಕುಶಲಕಮಿ೯ಗಳ ಮೇಲಿನ ಮಮಕಾರದ ಹಾಗೂ ಕಾಳಜಿಯ ಪ್ರತೀಕದಂತಿತ್ತು.ಒಟ್ಟಾರೆಯಾಗಿ ಆಧುನಿಕ ಯಂತ್ರಾಧಾರಿತ ಕೃಷಿ ಪದ್ಧತಿ ಭರಾಟೆಗೆ ಸಾಂಪ್ರದಾಯಿಕ ಕೃಷಿ ಪದ್ದತಿಯ ಅವನತಿಯಾಗಿದೆ.ಸಾಂಪ್ರದಾಯಿಕ ಕೃಷಿ ಪರಿಕರಗಳು ಕಾಣದಾಗಿವೆ,ಗ್ರಾಮೀಣ ಭಾಗದ ಕುಶಲಕಮಿ೯ಗಳ ಬದುಕು ಬರಡಾಗಿದೆ ಅವರ ಕುಟುಂಬಗಳು ನಲುಗಿಹೋಗಿವೆ.ಸಕಾ೯ರ ಶೀಘ್ರವೇ ಕುಶಲಕಮಿ೯ಕಮಿ೯ಗಳ ಕುಶಲೋಪಚಾರ ಮಾಡಬೇಕಿದೆ,ಅದಕ್ಕಾಗಿ ಸೂಕ್ತ ಆಥಿ೯ಕ ನೆರವು ಹಾಗೂ ಅಗತ್ಯ ಯೋಜನೆಗಳನ್ನು ಜಾರಿತರಬೇಕಿದೆ ಎಂದು, ಕೂಡ್ಲಿಗಿ ತಾಲೂಕು ವಿಶ್ವಕಮ೯ ಸಮಾಜದ ಯುವ ಮುಖಂಡ ಹಾಗೂ ಪತ್ರಕರ್ತ ಬಡಿಗೇರ ನಾಗರಾಜ ಸಕಾ೯ರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ. ಕೊರೋನಾ ಲಾಕ್ ಡೌನ್ ಪರಿಹಾರ ನಿಧಿ ಪಲಾನುಭವಿಗಳೆಂದು ಗ್ರಾಮೀಣ ಕುಶಲಕಮಿ೯ಗಳನ್ನು ಪರಿಗಣಿಸಬೇಕೆಂದು,ವಂದೇ ಮಾತರಂ ಜಾಗೃತಿ ವೇದಿಕೆ ಹಾಗೂ ವಿಶ್ವಕಮ೯ಸಮಾಜದ ಪದಾಧಿಕಾರಿಗಳು ಸಕಾ೯ರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.
Be the first to comment