ಕೊರೊನಾ ಕಫ್ಯೂ೯ ಸ್ತಬ್ಧ ವಾದ ಹುಕ್ಕೇರಿ ತಾಲೂಕು.

ವರದಿ:- ಕಲ್ಲಪ್ಪ ಪಾಮನಾಯಕ ಹುಕ್ಕೇರಿ

ಜೀಲ್ಲಾ ಸುದ್ದಿಗಳು

ಹುಕ್ಕೇರಿ ವರದಿ:ರಾಜ್ಯದಲ್ಲಿ ಶನಿವಾರ ರಾತ್ರಿ 7 ಘಂಟೆಯಿಂದ ಕೊರೊನಾ ಕಫ್ಯೂ೯ ಜಾರಿಯಲ್ಲಿದ್ದು ಹುಕ್ಕೇರಿ ತಾಲೂಕಿನ ಯಮಕನಮರ್ಡಿ, ಪಾಶ್ಚಾಪೂರ, ಸಂಕೇಶ್ವರ,ಹುಕ್ಕೇರಿ ನಗರಗಳಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸಂಚಾರ ,ಕಿರಾಣಿ,ಕಾಯಿಪಲ್ಲೆ ಸಹಿತ ಅಂಡಿ ಮುಗ್ಗಟ್ಟುಗಳು ಹಾಗೂ ಇತರೆ ಎಲ್ಲಾ ಚಟುವಟಿಕೆಗಳು ಬಂದ ಆಗಿದ್ದವು. ಪೋಲಿಸರು ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರಿಂದ ನಗರಗಳು ಜನರಿಲ್ಲದೆ ಬೀಕೊ ಎನ್ನುತ್ತಿದ್ದವು.

ಹುಕ್ಕೇರಿ ನಗರದ ಪ್ರಮುಖ ಸ್ಥಳಗಳು

ನಾಳೆ ಮುಸಲ್ಮಾನ ಬಾಂಧವರ ರಮ್ಜಾನ್ ಹಬ್ಬ ವಿರುವದರಿಂದ ಅಗತ್ಯ ಹಬ್ಬದ ವಸ್ತುಗಳ ಖರಿದಿಗೆ ಪರಿದಾಡಿದರು.ಹುಕ್ಕೇರಿ ಸಿ ಪಿ ಆಯ್ ಗುರುರಾಜ ಕಲ್ಯಾಣಶೇಟ್ಟಿ ಮಾರ್ಗದರ್ಶನ ದಲ್ಲಿ ಹುಕ್ಕೇರಿ, ಯಮಕನಮರ್ಡಿ,ಸಂಕೇಶ್ವರ ಮತ್ತು ಪಾಶ್ಚಾಪೂರ ಪಿ ಎಸ್ ಆಯ್ ಗಳಾದ ಶಿವಾನಂದ ಗುಡಗನಟ್ಟಿ, ರಮೇಶ ಪಾಟೀಲ , ಗಣಪತಿ ಕೊಗನೋಳ್ಳಿ ಆಯಾ ಸರಹದ್ದಿನಲ್ಲಿ ದ್ವನಿ ವರ್ಧಕ ಮೂಲಕ ಸಾರ್ವಜನಿಕರಿಗೆ ಕಫ್ಯೂ೯ ಬಗ್ಗೆ ಜಾಗ್ರತೆ ಮೂಡಿಸಿ ಸೂಕ್ತ ಬಂದೋಬಸ್ತ ಮಾಡಿದರು.

ನಗರಗಳ ಅಂಗಡಿ ಮುಗ್ಗಟ್ಟಗಳು ಸಂಪೂರ್ಣ ಬಂದ ಆಗಿವೆ, ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆ ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಸಂಕೇಶ್ವರ ಬಸ್ ಡಿಪೋ ದಿಂದ ಯಾವದೆ ಬಸ್ಸಗಳು ರಸ್ತೆಗೆ ಇಳಿಯಲಿಲ್ಲ.

Be the first to comment

Leave a Reply

Your email address will not be published.


*