ಗಿರಿ ಜಿಲ್ಲೆಯಲ್ಲಿ ಇಂದು ಮತ್ತೇ 24 ಹೊಸ covid19 ಪ್ರಕರಣಗಳು ದೃಢ, ಜಿಲ್ಲೆಯಲ್ಲಿ ಬರೋಬ್ಬರಿ ಸೊಂಕಿತರ ಸಂಖ್ಯೆ 111 ಕ್ಕೆ ಏರಿಕೆ.

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜೀಲ್ಲಾ ಸುದ್ದಿಗಳು

  • ಯಾದಗಿರಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ.
  • ಯಾದಗಿರಿಯಲ್ಲಿ ಇಂದು ಒಂದು ವರ್ಷದ ಮಗು ಸೇರಿದಂತೆ 24 ಜನರಿಗೆ ಕೊರೊನಾ ಸೋಂಕು ಧೃಡ

ಯಾದಗಿರಿ:ಯಾದಗಿರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,ಹೊರತು ಕಡಿಮೆಯಾಗುವುದು ಯಾವ ಲಕ್ಷಣಗಳು ಕಾಣುತ್ತಿಲ್ಲ ಮಹಾರಾಷ್ಟ್ರದಿಂದ ಬಂದಿರುವ ವಲಸಿಗರಿಗೆ ಕೋರೋನಾ ಮಹಾಮಾರಿ ವಕ್ಕರಿಸಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಯಾದಗಿರಿಯಲ್ಲಿ ಮುಂಜಾನೆ-06, ಹಾಗೂ ಮಧ್ಯಾಹ್ನ-18 ಜನರಿಗೆ ಸೋಂಕು ದೃಢಪಟ್ಟಿದೆ.

ಒಂದು ವರ್ಷದ ಒಂದು ಹೆಣ್ಣು ಮಗು, ಎರಡು ವರ್ಷದ ಒಂದು ಗಂಡು ಮಗು, ಮೂರುವರ್ಷದ ಒಂದು ಹೆಣ್ಣು ಮಗು, ನಾಲ್ಕು ವರ್ಷದ ಒಂದು ಗಂಡು ಮಗು, 8ವರ್ಷದ ಒಂದು ಹೆಣ್ಣು ಮಗು, ಸೇರಿದಂತೆ ಒಟ್ಟಾರೆಯಾಗಿ ಇಂದು ಹದಿನಾಲ್ಕು ಜನ ಮಹಿಳೆಯರಿಗೆ ಹಾಗೂ ಹತ್ತು ಜನ ಪುರುಷರು ಸೇರಿದಂತೆ ಒಟ್ಟು 24 ಜನರಿಗೆ ಈದಿನ ಕೊರೊನಾ ಸೋಂಕು ದೃಡಪಟ್ಟಿದೆ.

ಒಟ್ಟಾರೆಯಾಗಿ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಿದೆ-111.

ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಈಡಾಗಿದ್ದು, ಮಹಾರಾಷ್ಟ್ರದಿಂದ ಬಂದಿರುವ ವಲಸಿಗರಿಗೆ ಹೆಚ್ಚು ಸೋಂಕು ಧೃಡಪಟ್ಟಿದ್ದು, ಇನ್ನು ಪರೀಕ್ಷಾ ವರದಿಗಳು ಬರಬೇಕಿದೆ.

ಮಹಾರಾಷ್ಟ್ರದಿಂದ ಬಂದಿರುವ ವಲಸಿಗರಿಂದಲೇ ಕೊರೊನಾ ಸೋಂಕು ಬಂದಿದೆ.
ದಯವಿಟ್ಟು ಯಾರೂ ಧೃತಿಗೆಡಬೇಕಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಗಳನ್ನು ಮುಖಕ್ಕೆ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದು ಜಿಲ್ಲಾಡಳಿತ ಸೂಚಿಸಿದೆ.
ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ-2056.
ಇಂದು ಗುಣಮುಖರಾದರು-18, ಒಟ್ಟು ಗುಣಮುಖರಾದವರು-634,ಹೊಸ ಪ್ರಕರಣಗಳು-130.

Be the first to comment

Leave a Reply

Your email address will not be published.


*