ಜೀಲ್ಲಾ ಸುದ್ದಿಗಳು
ಬಾಗಲಕೋಟೆ: ಕೊರೊನಾ ಹೆಮ್ಮಾರಿಯ ಸೊಂಕು ಹರಡುವಿಕೆ ತಡೆಗಟ್ಟುವಲ್ಲಿ ಹೊರ ರಾಜ್ಯದಿಂದ ಬಂದವರನ್ನು 14 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ.
ಇತ್ತಿಚಿಗೆ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂಬ ಹೆದರಿಕೆಯಿಂದ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವರುಂಟು,ಕ್ವಾರಂಟೈನ್ ಗೆ ಒಳ ಪಡಿಸಲು ಮಾಹಿತಿ ಕೇಳಲು ಹೋದವರ ಮೇಲೆ ಹಲ್ಲೆ ಮಾಡಿದವರುಂಟು,ಕ್ವಾರಂಟೈನ್ ಭಯಪಟ್ಟು ತಮ್ಮನ್ನು ತಾವು ಮರೆಮಾಚಿಕೊಂಡು ಓಡಾಡುವವರುಂಟು,ಆದರೆ ಬಾದಾಮಿ ತಾಲೂಕಿನ ಕುಳಗೇರಿಯ ಈರಪ್ಪ ಹಣ್ಣಿನ ಎಂಬ ರೈತ ಹೊಲದಲ್ಲಿಯೇ ಸ್ವಯಂ ಕ್ವಾರಂಟೈನ್ ಬಯಸಿ ಅಧಿಕಾರಿಗಳ ಜೊತೆ ಕೈ ಜೋಡಿಸಿ ನಿಯಮ ಪಾಲನೆಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ಕುಳಗೇರಿ ಗ್ರಾಮದಲ್ಲಿ ಒಂದು ಎಕರೆ ಜಮೀನು ಹೊಂದಿರುವ 50 ವರ್ಷದ ಈರಪ್ಪ ಕೆಲಸಕ್ಕಾಗಿ ಕೇರಳ ರಾಜ್ಯದ ಕಾಸರಗೋಡು ಸಮೀಪದ ಶೇಷಾಪೂರದಲ್ಲಿದ್ದರು.ಲಾಕ್ ಡೌನ್ ಆಗುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿದ ಈರಪ್ಪ ಮರಳಿ ತನ್ನ ಗ್ರಾಮಕ್ಕೆ ಬಂದು ತಲುಪುವುದರೊಳಗಾಗಿ ಆರೋಗ್ಯ ಇಲಾಖೆಯವರಿಗೆ ಹೊಲದಲ್ಲಯೇ ಕ್ವಾರಂಟೈನ್ ಆಗುತ್ತೇನೆ ಯಾರ ಸಂಪರ್ಕಕ್ಕೂ ಬರುವುದಿಲ್ಲ ಎಂಬ ಮಾಹಿತಿ ನೀಡಿದ್ದರು.
ಚಕ್ಕಡಿಯೊಂದನ್ನು ತರಿಸಿ ,ಬಿದಿರು,ಟಾರ್ಪಾಲಿನ ಅಳವಡಿಸಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಚಕ್ಕಡಿಯನ್ನೆ ಮನೆ ಮಾಡಿಕೊಂಡು ಹೊಲವನ್ನು ಹದಗೊಳಿಸಿದ್ದಾರೆ.ಗ್ರಾಮ ಪಂಚಾಯತಿ ಪಿ.ಡಿ.ಓ ಚಂದ್ರಕಾಂತ ದೊಡ್ಡಪತ್ತಾರ,ಆರೋಗ್ಯ ಮೇಲ್ವಿಚಾರಕ ಅಶೋಕ ತಿಮ್ಮಾಪೂರ ಇವರು ಮೇಲಿಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
Be the first to comment