ಗಿರಿನಾಡು ಯಾದಗಿರಿ ಜಿಲ್ಲೆಯಾದ್ಯಂತ 36 ತಾಸಿನ ಲಾಕ್ ಡೌನ್ ಗೆ ಅಭೂತಪೂರ್ವ ಬೆಂಬಲ.

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜೀಲ್ಲಾ ಸುದ್ದಿಗಳು

  • ಸುರಪುರದಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು.

ಅಂಬಿಗ ನ್ಯೂಸ್ ಯಾದಗಿರಿ :-ಇಡೀ ರಾಜ್ಯದಾದ್ಯಂತ ರವಿವಾರ ಸಂಪೂರ್ಣ ಲಾಕ್ ಡೌನ್ ಆದೇಶ ಹೊರಡಿಸಲಾಗಿದ್ದು ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ 36 ತಾಸಿನ ಲಾಕ್‌ಡೌನ್‌ಗೆ ಗಿರಿ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಿದ್ದು ಇಡೀ ಜಿಲ್ಲೆಯೇ ಲಾಕ್‌ಡೌನ್‌ಗೊಳಗಾಗಿದೆ.

ಬೆಳಿಗ್ಗೆ 8 ಗಂಟೆಯ ವರೆಗೆ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಹೊರಗೆ ಬಂದಿದ್ದರು,
ಭಾನುವಾರದ ಬಾಡೂಟ ಪ್ರಿಯರು ಬೆಳ್ಳಂಬೆಳಿಗ್ಗೆ ಮಾಂಸ ಖರೀದಿಗೆ ಮುಗಿಬಿದ್ದು ನಂತರ 9 ಗಂಟೆಯಾಗುತ್ತಿದ್ದಂತೆ ಎಲ್ಲರೂ ತಮ್ಮ ಮನೆ ಸೇರಿದ್ದಾರೆ.

ಶನಿವಾರ ನಗರ ಸಭೆಯ ಸಿಬ್ಬಂದಿಗಳು ನಗರದಾದ್ಯಂತ ಪ್ರಚಾರ ಮಾಡಿ ಜನತಾ ಕರ್ಫ್ಯೂಗೆ ಬೆಂಬಲಿಸಲು ಸೂಚಿಸಿದ್ದರು.

ಅದರಂತೆ ಜನರು ಸಹಕಾರ ನೀಡಿದ್ದು, ಸದಾ ಜನರಿಂದ ತುಂಬಿರುತ್ತಿದ್ದ ಮಹಾತ್ಮಾಗಾಂಧಿ ವೃತ್ತ, ಮಾರುಕಟ್ಟೆ, ದರ್ಬಾರ್ ರಸ್ತೆ ಹಾಗೂ ಬಸ್ ನಿಲ್ದಾಣ ಖಾಲಿಯಾಗಿ ಬಿಕೋ ಎನ್ನುತ್ತಿದೆ.

ಸೋಮವಾರ ರಂಜಾನ್ ಹಬ್ಬವಿದ್ದರೂ ಮುಸ್ಲಿಂ ಬಾಂಧವರು ಬೆಳಿಗ್ಗೆಯೇ ಹಬ್ಬದ ಖರೀದಿಗೆ ತರಕಾರಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಿ ನಂತರ ಮನೆಯಲ್ಲಿದ್ದು ಜನತಾ ಕರ್ಫ್ಯೂಗೆ ಸಹಕರಿಸಿದ್ದಾರೆ.

Be the first to comment

Leave a Reply

Your email address will not be published.


*