ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ನಡೆದ ಕ್ಷತ್ರೀಯ ಸಮಾಜದ ಹಾಗೂ ಅಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕಿನ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷರಾಗಿ ರಾವಸಾಹೇಬ ದೇಸಾಯಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾಜಿ ಬಿಜಾಪೂರ ಅವಿರೋಧವಾಗಿ ಆಯ್ಕೆಯಾದರು.
ಅಲ್ಲದೇ ಸಹ ಕಾರ್ಯದರ್ಶಿಯಾಗಿ ಸುರೇಶ ಕಲಾಲ, ಖಜಾಂಚಿಯಾಗಿ ನೊಂಗರಾಜ ಮಹೀಂದ್ರಕರ ಮತ್ತು ತಾಲೂಕಾ ಯುವ ಘಟಕದ ಅಧ್ಯಕ್ಷರಾಗಿ ಮಂಜುನಾಥ ಕಲಾಲ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನೆಗೆ ಉಪಾಧ್ಯಕ್ಷರನ್ನಾಗಿ ಕ್ಷತ್ರೀಯ ಒಕ್ಕೂಟದ ಅಂಗ ಸಮಾಜಗಳ ಅಧ್ಯಕ್ಷರನ್ನೇ ಆಯ್ಕೆ ಮಾಡಲಾಯಿತು. ಅದರಲ್ಲಿ ಮರಾಠಾ ಸಮಾಜದಿಂದ ಅರ್ಜುನ ನಲವಡೆ, ಕ್ಷತ್ರೀಯ ಸಮಾಜದಿಂದ ಗುರಪ್ಪ ತಾಡಪತ್ರಿ, ರಜಪೂತ ಸಮಾಜದಿಂದ ದೀಪಕ ರಾಯಚೂರ, ಲೋಹಾರ ಸಮಾಜದಿಂದ ರಾಮು ಪವಾರ, ಭಾವಸಾರ ಸಮಾಜದಿಂದ ನಾಗೇಶ ಲಾತೂರಕರ, ಸೋಮವಂಶದಿಂದ ಮಂಜುನಾಥ ಪೇಟಕರ, ಕಲಾಲ ಸಮಾಜದಿಂದ ತುಕಾರಾಮ ಕಲಾಲ, ಗೊಂದಳೆ ಸಮಾಜದಿಂದ ನಾರಾಯಣ ದುರ್ವೆ, ಜೋಗಿ ಸಮಾಜದಿಂದ ಮೋಹನ ವಾಂಗಮೋರೆ, ಬೈಲಪತ್ತಾರ ಸಮಾಜದಿಂದ ಭೀಮರಾಜ ಪತ್ತಾರ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಿಂದನ ಅವಧಿಯ ಅಧ್ಯಕ್ಷರಾಗಿದ್ದ ಪರಶುರಾಮ ಪವಾರ ವಹಿಸಿದ್ದರು. ಸಭೆಯಲ್ಲಿ ನೇತಾಜಿ ನಲಡವೆ, ಭರತ ಭೋಸಲೆ, ಚಂದ್ರಶೇಖರ ಕಲಾಲ, ತಾನಾಜಿ ಘೋರ್ಪಡೆ, ಯಶವಂತ ಕಲಾಲ, ನಾರಾಯಣ ಗೊಂದಳೆ, ಭೀಮಣ್ಣ ಗೊಂದಳೆ, ಕೃಷ್ಣಾಜಿ ಪವಾರ ಮತ್ತಿತರರು ಪಾಲ್ಗೊಂಡಿದ್ದರು.
Be the first to comment