ಮುಸ್ಲಿಂ ಸಮುದಾಯದ ಬಂಧುಗಳಿಂದ ಮನೆಯಲ್ಲಿ ಸರಳ ರಂಜಾನ್ ಆಚರಣೆ .

ವರದಿ:-ಪ್ರಕಾಶ ಮಂದಾರ ಹರಿಹರ

ರಾಜ್ಯದ ಸುದ್ದಿಗಳು

ಕೊರಾನಾ ವೈರಸ್ ಮನುಷ್ಯ ಜೀವನದ ಎಲ್ಲಾ ಕೋನಗಳಲ್ಲೂ ತನ್ನ ಅಸ್ತಿತ್ವ ತೋರಿಸಿದೆ, ಮತ್ತು ‘ಪರಿವತ೯ನೆ ಜಗದ ನಿಯಮ’ ಎಂಬ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತಾ ಉವಾಚ ಸತ್ಯವಾಗಿದೆ.

ಹಿಂದೂ ದಮಿ೯ಯರ ಹೊಸ ವಷ೯ದಲ್ಲೇ (ಯುಗಾದಿ) ಕೊರಾನಾ ವೈರಸ್ ಒಕ್ಕರಿಸಿದ್ದರಿಂದ ಯುಗಾದಿಯ ಸಂಭ್ರಮವನ್ನು ಆಚರಿಸಲು ಸಾಧ್ಯವಾಗಿಲ್ಲ, ಹಾಗಾಗಿ ಯುಗಾದಿ ಖರೀದಿಗಳು ನಡೆಯಲಿಲ್ಲ.

ಅಕ್ಷಯ ತದಿಗೆಗೆ ಚಿನ್ನದ ಅಂಗಡಿಗಳು ತೆರೆಯಲೇ ಇಲ್ಲ ,ಮತ್ತು ವಿವಾಹಗಳಿಗೆ ಅನುಮತಿಯೆ ಇರಲಿಲ್ಲ.

ಮುಸ್ಲಿಂ ಸಮಾಜದ ಒಂದು ತಿಂಗಳ ಕಾಲ ನಡೆಯುವ ರಂಜಾನ್ ಉಪವಾಸದ ತಿಂಗಳು ನಿನ್ನೆ ಮುಗಿದು,ಚಂದ್ರ ದರ್ಶನವಾಗದ ಕಾರಣ ನಾಳೆ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ .

ಭಕ್ತಿಯಿಂದ ಮಸೀದಿಯಲ್ಲಿ 5 ಬಾರಿ ದೇವರನ್ನ ಪ್ರಾರ್ಥಿಸುವ, ನಮಾಜ್ ಮನೇಲೇ ಮಾಡಬೇಕಾದ ಅನಿವಾಯ೯ತೆಯನ್ನು ಕರೋನಾ ತಂದೊಡ್ಡಿದೆ .

ರಮ್ಜಾನ್ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗಳಿಗೆ ಈ ಬಾರಿ ನಿರ್ಬಂಧ ಹೇರಲಾಗಿದೆ. ಹೊಸ ಬಟ್ಟೆ, ಅದ್ಧೂರಿ ಆಚರಣೆ,ಹಬ್ಬದ ಪ್ರಯುಕ್ತ ರಜಾ ಮಾಡಿ ಸಂಬಂಧಿಕರ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಸ್ವತಃ ಸಮಾಜದ ಬಂಧುಗಳೇ ಅರ್ಥ ಮಾಡಿಕೊಂಡು ಸ್ವಯಂ ನಿರ್ಬಂಧವನ್ನು ಹಾಕಿಕೊಂಡಿದ್ದಾರೆ .

ಪ್ರಾರಂಭದಲ್ಲಿ ಇದನ್ನೆಲ್ಲ ಕಟ್ಟರ್ ಧರ್ಮವಾದಿಗಳು ವಿರೋದಿಸಿದ್ದರು, ಇದರಿಂದ ವೈರಸ್ ಸಾಮೂಹಿಕವಾಗಿ ಹರಡುವ ಭಯ ಉಂಟಾಗಿತ್ತು.

ನಂತರ ಈ ಸಮಾಜದ ವಿದ್ಯಾವಂತ ಜನತೆ ಸರ್ಕಾರದ ಮನವಿಯ ಉದ್ದೇಶದ ಅರ್ಥವನ್ನು ತಮ್ಮ ಸಮಾಜಕ್ಕೆ ಬಂಧುಗಳಿಗೆ ಮನನ ಮಾಡಿದ್ದರಿಂದ ಅವರಿಗೂ ಕೊರಾನ ವೈರಸ್ ನ ತೀವ್ರತೆ ಅರಿವಾಗಿವಾಗಿದೆ, ಸರ್ಕಾರದೊಂದಿಗೆ ಸಹಕರಿಸಿ’ಜೊತೆ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ.ಯೈ

ಹಿಂದೂ ಧರ್ಮಿಯರ ಯುಗಾದಿ ,ಮತ್ತು ಮುಸ್ಲಿಂ ಧರ್ಮಿಯರ ರಮ್ಜಾನ್ ಹಬ್ಬ ದೇಶದ ಆರ್ಥಿಕ ವ್ಯವಹಾರದಲ್ಲಿ ದೊಡ್ಡ ವಹೀವಾಟು, ಸಾವಿರಾರು ಕೋಟಿಯ ಈ ವಹಿವಾಟು ಈ ವರ್ಷ ಇಲ್ಲವಾಗಿದೆ.

ಈ ಮಾರಣಾಂತಿಕ ವೈರಸ್ ಅವರವರ ಧರ್ಮ ಆಚರಿಸಿ ಪರರ ಧರ್ಮವನ್ನು ಗೌರವಿಸುವ ಉನ್ನತ ಆದರ್ಶಗಳನ್ನು ನೆನಪಿಸಿದೆ.

ಸಮಸ್ತ ಭಾರತೀಯರೆಲ್ಲಾ ಒಂದೇ, ದೇಶದ ಕಾನೂನು ಎಲ್ಲರೂ ಗೌರವಿಸೋಣ ಎಂಬ ಸಂದೇಶ ನೀಡಿದೆ.

ಕೊರಾನ ವೈರಸ್ ಗೆ ಜಾತಿ, ಧರ್ಮದ, ದೇಶ ಗಡಿ ,ಎಂಬ ಬೇಧ ಭಾವವಿಲ್ಲ ಎಂಬುವುದನ್ನು ಎಲ್ಲರಿಗೂ ಆರ್ಥ ಮಾಡಿಸಿದೆ.

ಎಲ್ಲದರಲ್ಲೂ ಕಿಡಿಗೇಡಿತನ ಮಾಡುವವರಿಗೂ ಈ ಬದಲಾವಣೆ ಸೋಜಿಗ ಉಂಟು ಮಾಡಿದೆ.

ದೇವರು ಒಬ್ಬನೆ, ನಾಮ ಹಲವು ,ಎಂಬ ಗಾದೆ ಮಾತು ಎಲ್ಲರಿಗೂ ಅರಿವಾಗಿದ್ದು 2020ರ ಕರೋನಾ ಮಹಿಮೆಯಿಂದ ಅಲ್ಲವೇ?

Be the first to comment

Leave a Reply

Your email address will not be published.


*