ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ:- ಕಳೆದ 22 ನೇ ತಾರೀಖಿನಂದು ಮದ್ಯಾಹ್ನ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಮಂಟಪ ಬಳಿಯ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ನದಿಯಲ್ಲಿ ನಾಪತ್ತೆಯಾಗಿದ್ದ ಚಂದಪ್ಪ ಕೊಂಡಿಕಾರ ಎಂಬ ವ್ಯಕ್ತಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮೂರು ಜನ ಬಿಸಿಲ ಧಗೆ ತಣಿಸಿಕೊಳ್ಳಲು ಹೋಗಿ ನದಿಗೆ ಈಜಲು ಹೋಗಿ ನಾಪತ್ತೆಯಾಗಿ,ಕಳೆದ ಎರಡು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಲಾಗಿತ್ತು.
ಅಗ್ನಿಶಾಮಕ ದಳ ಮತ್ತು ಮೀನುಗಾರರು ಎರಡು ದಿನಗಳಿಂದ ಸತತ ಪ್ರಯತ್ನ ಮಾಡಿದ್ದರು.
ಇಂದು ಬೆಳಿಗ್ಗೆ ಆರು ಗಂಟೆಗೆ ಮತ್ತೆ ಹುಡುಕಾಟ ಆರಂಭಿಸಲಾಗಿತ್ತು.
7 ಗಂಟೆಯ ಸುಮಾರಿಗೆ ಶವ ತೇಲಿದ್ದು ನಂತರ ಹೊರ ತರಲಾಗಿದೆ.
ಸ್ಥಳಕ್ಕೆ ಸುರಪುರ ತಹಸೀಲ್ದಾರ್ ನಿಂಗಣ್ಣ ಬಿರಾದಾರ್, ಪಿಐ ಎಸ್.ಎಮ್.ಪಾಟೀಲ್, ಪಿಎಸ್ಐ ಚಂದ್ರಶೇಖರ ನಾರಾಯಣಪುರ ಭೇಟಿ ನೀಡಿದ್ದಾರೆ.
ಸಧ್ಯ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಪರೀಕ್ಷೆ ನಡೆಸಲಾಗುತ್ತಿದೆ.
Be the first to comment