ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ನಡುವಲಹಳ್ಳಿ ಪಾವ೯ತಮ್ಮ,ಗುಡೇಕೋಟೆ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು ಈ ಕುರಿತು ಹೇಳಿಕೆ ನೀಡಿದ್ದಾರೆ.ಕೆಲ ದಿನಗಳ ಹಿಂದೆಯಷ್ಟೇ ತನ್ನ ಪತಿ ತಿಪ್ಪೇಸ್ವಾಮಿಯನ್ನು ಗ್ರಾಮದ ಸೋಮಪ್ಪ ಎಂಬ ವ್ಯಕ್ತಿಯು,ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ,ಅಮಾನವೀಯವಾಗಿ ತಲೆಗೆ ಹಾಗೂ ಕೆಲ ಸೂಕ್ಷ್ಮ ಜಾಗಗಳಿಗೆ ಒಳಪೆಟ್ಟಾಗುವಂತೆ ಹೊಡೆದಿದ್ದರು.
ಈ ಕುರಿತು ದೂರು ಪಡೆಯಲು ಆಸ್ಪತ್ರೆಗೆ ಬಂದ ಗುಡೇಕೋಟೆ ಪೊಲೀಸರು,ಆಸ್ಪತ್ರೆಗೆ ಆಗಮಿಸಿ ತನ್ನಿಂದ ಹೆಳಿಕೆ ಪಡೆದಿದ್ದಾರೆ,ಈ ಸಂದಭ೯ದಲ್ಲಿ ಅನವಶ್ಯಕವಾಗಿ ತನ್ನೊಂದಿಗೆ ಪೊಲೀಸರು ಅನುಚಿತವಾಗಿ ವತಿ೯ಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಹೆದರಿಸಿ ಗಧರಿಸಿ ಅವರು ತನ್ನಿಂದ ಎರೆಡು ಕಾಲೀ ಪೇಪರಿಗೆ ಸಹಿ ಮಾಡಿಸಿಕೊಂಡಿದ್ದಾರೆ ಮತ್ತು ಎಪ್ಐಆರ್ ತೆದುಕೊಳ್ಳಲು ತಾನು ಪೊಲೀಸ್ ಠಾಣೆಗೆ ತೆರಳಿದ್ದಾಗ ಕೂಡ ಪೊಲೀಸರು ಮತ್ತೆರೆಡು ಕಾಲಿ ಪೇಪರಿಗೆ ಸಹಿ ಹಾಕಿಸಿಕೊಂಡಿದ್ದಾರೆ,ಸಹಿ ಮಾಡಲು ಒಪ್ಪದಿದ್ದಕ್ಕೆ ಪೊಲೀಸರು ಹೆದರಿಸಿ ಬೆದರಿಸಿದ್ದಾರೆ ಎಂದು ಪಾವ೯ತಮ್ಮ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಗಂಡನ ತಲೆಗೆ ಭಾರೀ ಒಳ ಪೆಟ್ಟುಬಿದ್ದಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ,ವೈಧ್ಯರು ಚಿಕಿತ್ಸೆಗೆ ಲಕ್ಷಾನುಗಟ್ಟಲೆ ಹಣ ಕಾಚಾ೯ಗುತ್ತದೆ ಎಂದಿದ್ದಾರೆ, ನಾವು ಕೂಲ ನಾಲಿ ಮಾಡಿಕಂಡು ಜೀವನ ಸಾಗಿಸೋರು ಅದಕ್ಕಾಗಿ ಹಲ್ಲೆ ಮಾಡೊರುವವರಿಂದಲೇ ಪರಿಹಾರ ಹಣ ಕೊಡಿಸಬೇಕು,ಕೊಲೆಯತ್ನ ದೂರು ನೀಡಿ ನಾಲ್ಕೇದು ದಿನಗಳಾದ್ರೂ ಆರೋಪಿಗಳನ್ನು ವಿಚಾರಿಸಿಲ್ಲ,ಅವರು ಪೊಲೀಸರೆದಿರುಗೇ ಓಡಾಡಿಕಂಡಿದ್ದಾರೆ,ಆದ್ರೂ ಅವರನ್ನ ಪೊಲೀಸರಿಗೆ ಅವರನ್ನ ಹಿಡಿಯಾಕಾಗಿಲ್ಲ ಎಂದು ಪಾವ೯ತಮ್ಮ ದೂರಿದ್ದಾರೆ.ಸೋಮಪ್ಪ ಮತ್ತು ಮಂಜಪ್ಪ ಇಬ್ರೂ ನಮಗೆ ಪ್ರಾಣ ಭಯ ಹಾಕ್ಯಾರ ಕೊಲ್ಲುತ್ತೀವಿ ಅಂದಾರ ಅವರಿಂದ ನಮಗೆ ರಕ್ಷಣೆ ಕೊಡಬೇಕು.ಅದಕ್ಕಾಗಿ ಸೋಮಪ್ಪ ಹಾಗು ಮಂಜಪ್ಪ ರನ್ನು ಬಂಧಿಸಲೇಬೇಕು, ಚಿಕಿತ್ಸೆಗೆ ಬೇಕಾದ ಸೂಕ್ತ ಪರಿಹಾರ ಕೊಡಿಸಬೇಕು, ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು,
ಪ್ರಮುಖರಿಗೆ ದೂರು-
ಗುಡೇಕೋಟೆ ಪೊಲೀಸರು ತನ್ನಿಂದ ಸಹಿಮಾಡಿಸಿ ಕೊಂಡಿರುವ ನಾಲ್ಕು ಕಾಲಿ ಪೇಪರ್ ಗಳನ್ಮು ನನಗೆ ಹಾಗೇಯೇ ವಾಪಾಸು ಕೊಡಬೇಕು,ಅಪರಾಧಿಗಳನ್ನು ಕೊಲೆಯತ್ನ ಪ್ರಖರಣದಡಿ ಬಂಧಿಸಬೇಕು,ಇಲ್ಲದಿದ್ದರೆ ಗುಡೇಕೋಟೆ ಪೊಲೀಸರ ವಿರುದ್ಧ ಕಾನೂ ರೀತ್ಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕುಟುಂಬ ಸದಸ್ಯರೆಲ್ಲರೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು,ರಾಜ್ಯ ಮಹಿಳಾ ಆಯೋಗ, ಮಾನವಹಕ್ಕು ಆಯೋಗ, ಹೈಕೋಟ್೯ ನ್ಯಾಯಾಧೀಶರು, ಸುಪ್ರೀಂಕೋಟ್೯ನ್ಯಾಯಾಧೀಶರು,ಹೋಂ ಮಿನಿಸ್ಟರ್, ರಾಜ್ಯಪಾಲರು,ಡಿಜಿ,ಐಜಿ,ಹಾಗೂ ಎಲ್ಲಾ ಮಾಧ್ಯಮಗಳ ಕಚೇರಿಗೆ,ಸೂಕ್ತ ದಾಖಲುಗಳ ಸಮೇತ ದೂರು ನೀಡಲಾಗುವುದು ಎಂದು ಪಾವ೯ತಮ್ಮ ಹೇಳಿಕೆ ನೀಡಿದ್ದಾರೆ.ಗುಡೇಕೋಟೆ ಪೊಲೀಸರಿಗೆ ಕಾನೂನು ಬಗ್ಗೆ ಗೌರವ ಇದ್ದರೆ,ಎರೆಡು ದಿನಗಳೊಳಗಾಗಿ ಪತಿ ತಿಪ್ಪೇಸ್ವಾಮಿಯ ಮೇಲೆ ವಿನಾಕಾರಣ ಮಾರಾಣಾಂತಿಕ ಹಲ್ಲೆ ಮಾಡಿರುವ ಹಲ್ಲೆಕೋರ ಸೋಮಪ್ಪ ಹಾಗೂ ತಮಗೆ ಪ್ರಾಣಬೆದರಿಕೆ ಹಾಕಿರುವ ಮಂಜುನಾಥನನ್ನು ಬಂಧಿಸಬೇಕು ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಪಾವ೯ತಮ್ಮ ಈ ಮೂಲಕ ಎಚ್ಚರಿಸಿದ್ದಾರೆ.
ಮನವಿ
ಪ್ರಾಮಾಣಿಕತೆಗೆ ಹೆಸರಾಗಿರುವ ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್ರವರು ಜಿಲ್ಲಾ ಕಥ೯ವ್ಯ ನಿಷ್ಠೆಗೆ ಖ್ಯಾತರಾಗಿರುವ ಪೊಲೀಸ್ ವರಿಷ್ಠಾದಿಕಾರಿ ಎಸ್.ಕೆ.ಬಾಬಾರವರು ಈ ಕುರಿತು ಖುದ್ದು ಪರಿಶೀಲಿಸಿ ತಮ್ಮ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಪಾವ೯ತಮ್ಮ ಈ ಮೂಲಕ ಅವರಲ್ಲಿ ಕೋರಿದ್ದಾರೆ.
Be the first to comment