22 ರಿಂದ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ, ಅಭಿಯಾನ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಅರಣ್ಯ ಇಲಾಖೆಯಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಮೇ 22 ರಿಂದ ಜೂನ್ 5 ವರೆಗೆ ಒಟ್ಟು 15 ದಿನಗಳ ಕಾಲ ಅಂತರರಾಷ್ಟ್ರೀಯ ಜೀವ ವೈವಿದ್ಯ ದಿನಾಚರಣೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದಲ್ಲಿ ವೃಕ್ಷಾರೋಪಣ, ಬೀಜದುಂಡೆತಯಾರಿಕೆ, ಕೆರೆ, ನದಿ ಮೂಲ ಸಮೀಕ್ಷೆ, ಸೂಕ್ಷ್ಮ ಜೀವವೈವಿದ್ಯತೆ ತಾಣಗಳನ್ನು ಗುರುತಿಸುವಿಕೆ, ಔಷಧಿ ಸಸ್ಯ ವನ ನಿರ್ಮಾಣ, ವಿನಾಶದ ಅಂಚಿನ ಸೂಕ್ಷ್ಮ ಅರಣ್ಯ ಪ್ರದೇಶಗಳಿಗೆ ಭೇಟಿ ಸಮೀಕ್ಷೆ ಸೇರಿದಂತೆ ಇತರೆ ಕಾರ್ಯಚಟುವಟಿಕೆಗಳನ್ನು ಮಾಡಲಾಗುತ್ತಿದೆ.

ಇದರ ಜೊತೆಗೆ ಜೀವ ವೈವಿಧ್ಯ ಸೂಕ್ಷ್ಮ ತಾಣಗಳಿಗೆ ಭೇಟಿ, ಸಮೀಕ್ಷೆ, ಸಸ್ಯಗಣತಿ ವರದಿ, ಸನ್ಮಾನ, ಗೌರ, ಜೀವ ವೈವಿಧ್ಯವರದಿಗಳ ಬಿಡುಗಡೆ, ತಳಮಟ್ಟದ ಜೀವ ವೈವಿಧ್ಯ ಸಂಘಟನೆ ಚುರುಕುಗೊಳಿಸುವುದು ಮಾಡಲಾಗುತ್ತಿದೆ. ಸಾರ್ವಜನಿಕರು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*