ಜೀಲ್ಲಾ ಸುದ್ದಿಗಳು
ಬಾಗಲಕೋಟೆ: ಜಮಖಂಡಿ ತಾಲೂಕು.ಕೋವಿಡ್ -19 ದಿಂದಾಗಿ ಜಮಖಂಡಿ ನಗರದಲ್ಲಿ ಲಾಕ್ ಡೌನ್ ಬಹಳಷ್ಟು ಬಿಗಿ ಕ್ರಮಗಳನ್ನು ಅನುಸರಿಸುತ್ತಿದ್ದು ಜನರು ಯಾವುದೇ ಕಾರಣಕ್ಕೂ ಹೊರ ಬರದಂತೆ ಹಾಗೂ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆಗಾಗಿ ಜನಪ್ರೀಯ ಶಾಸಕರಾದ ಶ್ರೀ ಆನಂದ ನ್ಯಾಮಗೌಡ ಹಂಚಿಕೊಳ್ಳೋಣ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ.
ಜಮಖಂಡಿ ನಗರದ 15 ನೇ ವಾಡ್೯ನ ಸದಸ್ಯರಾದ ಶ್ರೀ ದಾನೇಶ ಗಾಟಗೆಯವರ ಮುಂದಾಳತ್ವದಲ್ಲಿ,ಅನೇಕ ಯುವ ಸಂಘಟನೆಗಳು,ಸಂಘ ಸಂಸ್ಥೆಗಳು,ದಾನಿಗಳ ನೆರವಿನೊಂದಿಗೆ ಇಂದು ಸುಮಾರು 200 ಅತಿ ಕಡು ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ತಯಾರಿಸಿ ಯುವ ಶಾಸಕರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭ ದಲ್ಲಿ ಶಾಸಕರು ಮಾತನಾಡಿ “ಹಂಚಿಕೊಳ್ಳೋಣ” ಎಂಬ ಕರೆಗೆ ಓ ಗೊಟ್ಟ ಎಲ್ಲ ಯುವಕ ಮಿತ್ರರಿಗೂ,ಸಂಘ ಸಂಸ್ಥೆಗಳಿಗು, ದಾನಿಗಳಿಗೂ ಧನ್ಯವಾದಗಳನ್ನು ತಿಳಿಸಿ ಇಂದು ಈ ಕಾರ್ಯದಿಂದ ನಮ್ಮ ಜಮಖಂಡಿಯವರೆಲ್ಲರು ಒಗ್ಗಟ್ಟನ್ನು ಮೆರೆದದ್ದು ನಾವೆಲ್ಲರು ಒಂದು ಎಂದು ತೋರಿಸಿಕೊಟ್ಟಿದ್ದಾರೆ.
Be the first to comment