ದಿನೇದಿನೇ ಹೆಚ್ಚುತ್ತಿರುವ ಕರೋನ ವೈರಸ್ ನ ಆತಂಕಕ್ಕೆ ಬೆಚ್ಚಿಬಿದ್ದ ಜಿಲ್ಲೆಯ ಜನತೆ

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜೀಲ್ಲಾ ಸುದ್ದಿಗಳು

ಗಿರಿ ನಗರ ಯಾದಗಿರಿ ಜಿಲ್ಲೆಯಲ್ಲಿ ಮತ್ತೇ 05 ಜನರಿಗೆ ಕೋವಿಡ್-19 ಸೋಂಕು ದೃಢ ಜಿಲ್ಲೆಯಲ್ಲಿ 10 ಕ್ಕೆ ಏರಿಕೆಯಾದ ಸೊಂಕಿತರ ಸಂಖ್ಯೆ.

 

  • ಯಾದಗಿರಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣ

ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಮೂವರು ಕಾರ್ಮಿಕರಿಗೆ ಕೋವಿಡ್-19 ದೃಢಪಟ್ಟಿತ್ತು.

ಆದರೆ ಈಗ ಗಿರಿನಗರ ಯಾದಗಿರಿ ಜಿಲ್ಲೆಯಲ್ಲಿ ಮತ್ತೇ 05 ಪ್ರಕರಣಗಳು ದಾಖಲಾಗಿದ್ದು ಪಾಸಿಟಿವ್ ಬಂದಿವೆ ಇದರಿಂದ
ಗ್ರೀನ್ ಝೋನ್ ವಲಯ ಯಾದಗಿರಿ ಜಿಲ್ಲೆಯಲ್ಲಿ ಈಗ ಒಟ್ಟು 10 ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಿಂದ ಆಗಮಿಸಿದ 04 ಜನ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿಗೆ ಸೋಂಕು ದೃಢವಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ ಹೆಣ್ಣು ಮಗಳಾದ 25 ವರ್ಷದ P-1188 ಮತ್ತು ನಾಲ್ಕು ಜನ ಗಂಡು ಮಕ್ಕಳಾದ 25 ವರ್ಷದ P-1189, 30 ವರ್ಷದ P-1190, 15 ವರ್ಷದ P-1191 ಮತ್ತು 30 ವರ್ಷದ P-1192 ಎಂದು ಗುರುತಿಸಲಾಗಿದೆ..ಈ

ಕಳೆದ ಮೇ.12ರಂದು ಮೊದಲ ಬಾರಿಗೆ ಸುರಪುರ ನಗರಕ್ಕೆ ಗುಜರಾತ್ ನ ಅಹಮದಾಬಾದ್ ನಿಂದ ಆಗಮಿಸಿದ ದಂಪತಿ 33 ವರ್ಷದ ಮಹಿಳೆ P- 867, 38 ವರ್ಷದ ಪುರುಷ P- 868 ಸೋಂಕು ಕಾಣಿಸಿತ್ತು ನಂತರ ನಿನ್ನೆ ದಿನ ಮೇ 17 ರಂದು ಸ್ವಾಸ್ಥ್ಯಿಕ ಕ್ವಾರಂಟೈನ್ ನಲ್ಲಿದ್ದ ಮೂವರು ಕಾರ್ಮಿಕರು P-1139 ಮತ್ತು 34 ವರ್ಷದ P-1141 ಇಬ್ಬರು ಪುರುಷರು ಮತ್ತು ಮುಂಬೈನಿಂದ ಬಂದ 22 ವರ್ಷದ P-1140 ಯುವಕನಿಗೆ ಸೋಂಕು ತಾಗಿರುವುದು ದೃಢವಾಗಿತ್ತು.

ಹಸಿರು ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಕಾರ್ಮಿಕರು ಆಗಮಿಸಿದ್ದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದ್ದು ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ ಹೊರತು ಕಡಿಮೆಯಾಗುವಂತೆ ಕಾಣುತ್ತಿಲ್ಲ,

ಜಿಲ್ಲೆಯಲ್ಲಿ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರವನ್ನು ಮರೆತು ಜನ ಜಾತ್ರೆಯನ್ನು ಮಾಡುತ್ತಿರುವುದು ನಿಜವಾಗಿಯೂ ಜಿಲ್ಲಾಡಳಿತ ತಲೆ ತಗ್ಗಿಸುವಂತೆ ಮಾಡಿದೆ.

ಈದೀಗ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿರುವವರಿಗೆ ಸೋಂಕು ದೃಢವಾಗಿದೆ.

ಸಾಮಾನ್ಯವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲರೂ ಸಾಮೂಹಿಕವಾಗಿಯೇ ಇರುವುದರಿಂದ ಅವರು ದಾಖಲಾದಾಗಿನಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿ ಎಷ್ಟು ಜನ ಬಂದವರು ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಎಷ್ಟು ಎನ್ನುವುದು ಜಿಲ್ಲಾಡಳಿತಕ್ಕೆ ತೀವ್ರ ತಲೆನೋವು ತಂದಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಕ್ವಾರಂಟೈನ್ ನಲ್ಲಿ ಇವರೊಟ್ಟಿಗೆ ವಾಸವಿದ್ದ ವೇಳೆ ಸಂಪರ್ಕಕ್ಕೆ ಬಂದ ಎಲ್ಲರನ್ನು ಪ್ರತ್ಯೇಕವಾಗಿರಿಸುವ ಸಾಧ್ಯತೆಗಳಿವೆ.

ಇಷ್ಟು ದಿನ ಕಳೆದರು ಜಿಲ್ಲೆಯಲ್ಲಿ ಕೋವಿಡ್-19 ರ ಯಾವುದೇ ಭಯವಿರಲಿಲ್ಲ ಈಗ ಮತ್ತೇ ಜವರಾಯ ಜಿಲ್ಲೆಗೆ ವಕ್ಕರಿಸಿದ್ದಾನೆ.

ಇದೀಗ ಲಾಡ್ ಡೌನ್ ಸಡಿಲಿಕೆ ವೇಳೆಯಲ್ಲಿಯೇ ಸರಕು ಸಾಗಾಣೆ ವಾಹನದಲ್ಲಿ ಅಹಮದಾಬಾದ್ ನಿಂದ ಬಂದ ದಂಪತಿಗಳು ಸೋಂಕು ತಂದರೆ, ಇದೀಗ ಮಹಾರಾಷ್ಟ್ರ ದಿಂದ ಬಂದವರೆಲ್ಲರೂ ಮುಳುವಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಗಳು ವಲಸೆ ಕಾರ್ಮಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಅವರಿದ್ದಲ್ಲಿಯೇ ವ್ಯವಸ್ಥೆ ಮಾಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲವೇನೊ ಎಂದು ಜನ ಜಿಲ್ಲಾಡಳಿತದ ವಿರುದ್ಧ ಮಾತನಾಡಿಕೊಳ್ಳುತ್ತಿದ್ದಾರೆ.

 

Be the first to comment

Leave a Reply

Your email address will not be published.


*