ಜೀಲ್ಲಾ ಸುದ್ದಿಗಳು
ಬಾಗಕೋಟೆ:ಕರೋನಾ ಲಾಕ್ ಡೌನ್ ನಿಂದಾಗಿ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವ ಅಲೆಮಾರಿಗಳಿಗೆ ಯಾವುದೇ ಸೂರು ಇಲ್ಲದೆ ಸಣ್ಣ ಪುಟ್ಟ ಬಯಲು ನಾಟಕ, ಚಿಂದಿ ಆಯುವ, ಬೀಗ ಛತ್ರಿ ರೀಪೆರಿ,ವಂಶಾವಳಿ ಹೇಳುವ,ಭವಿಷ್ಯ ಹೇಳುವ,ಹಂದಿ ಸಾಕಾಣಿಕೆ,ಚಾಪೆ ಹಾಗೂ ಬುಟ್ಟಿ ಹೆಣೆಯುವ, ಕೂದಲು,ಟೇಪು ಪಿನ್ನ, ಹೀಗೆ ನಾನಾ ತರಹದ ವ್ಯಾಪಾರ ಮಾಡಿಕೊಂಡು ಅತಂತ್ರ ಸ್ಥಿತಿಯಲ್ಲಿರುವ ತುಂಬಾ ದಮನಿತ ಅತ್ಯಂತ ತಳ ಸಮುದಾಯಗಳನ್ನು ಹೊರತುಪಡಿಸಿ ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಈ ಸಂಕಷ್ಟ ಸಮಯದಲ್ಲಿ ಬುಡ್ಗ ಜಂಗಮ,ಸಿಂದೋಳ್ಳು,ದಕ್ಕಲಿಗ,ಕೊರಮ,ಶಿಳ್ಳೆಕ್ಯಾತ,ಗೋಂಧಳಿ,ಬುಡಬುಡಕಿ,ಹೆಳವ,ಜೋಗಿ,ಚನ್ನದಾಸರ,ನಾಥಪಂಥಿ,ಕಟಬು,ಶಿಕ್ಕಲಗಾರ,ಗೊಸಂಗಿ ಇಂಥಹ ಅಲೆಮಾರಿ/ಆದಿವಾಸಿ/ಬುಡಕಟ್ಟು ಸಮುದಾಯಗಳನ್ನು ಮರೆತು ಕೆಲವೇ ಕೆಲವು ಸಮುದಾಯಗಳಿಗೆ ಆರ್ಥಿಕ ಸೌಲಭ್ಯ ಕೊಟ್ಟು, ಪಕ್ಷಪಾತ ತಾರತಮ್ಯ ಮಾಡಿರುವುದು ಕಂಡುಬಂದಿದೆ.
ಸವಿತ/ಮಡಿವಾಳ/ನೇಕಾರ/ಆಟೋ ಮತ್ತು ವಾಹನ ಚಾಲಕರು/ಕಟ್ಟಡ ಕಾರ್ಮಿಕರು/ಹೂ ಬೆಳದ ರೈತರು ಮತ್ತು ಮಾರಾಟಗಾರರ ಹಾಗೂ ಇತ್ಯಾದಿ ಶ್ರಮಿಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದು ಸ್ವಾಗತರ್ಹ.
ಆದರೆ ಈ ದೇಶದ, ಈ ರಾಜ್ಯದ, ಮೂಲ ನಿವಾಸಿಗಳಾದ ಅಲೆಮಾರಿ/ಆದಿವಾಸಿ/ಬುಡಕಟ್ಟು ಸಮುದಾಯವನ್ನು ಕಡೆಗಣಿಸಿರುವುದು ದುರದೃಷ್ಟ ದುರ್ದೈವ.ಈ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲ ಅಲೆಮಾರಿ ಸಮುದಾಯದ ಮುಖಂಡರು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ತಹಶಿಲ್ದಾರರ ಮೂಲಕ ಹಲವು ಬಾರಿ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳು ಈಗಲಾದರೂ ಈ ಸಮುದಾಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವುದರೊಂದಿಗೆ ಅಲೆಮಾರಿ ಜನಾಂಗದವರು ಅಭಿವೃದ್ಧಿ ನಿಗಮದಲ್ಲಿ ಪಡೆದ ಸಾಲ ಮನ್ನಾ ಮಾಡಲು ಅಲೆಮಾರಿ/ಆದಿವಾಸಿ/ಬುಡಕಟ್ಟು ಸಮುದಾಯದ ಪರವಾಗಿ ಯವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಿ ಮಾನ್ಪಡೆಯವರು ನಮ್ಮ ಅಂಬಿಗ ನ್ಯೂಸ್ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
Be the first to comment