ಜೀಲ್ಲಾ ಸುದ್ದಿಗಳು
ಬಾಗಕೋಟೆ:ಕೋವಿಡ್-19 ದಿಗ್ಬಂದನ ಕಾರಣದಿಂದಾಗಿ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳು ಅಕ್ಷರಶಃ ನಲುಗಿ ಹೋಗಿವೆ. ಮೊದಲೇ ಜೀವಿಸಲು ಸೂರಿಲ್ಲದೆ, ಹೊಟ್ಟೆಬಟ್ಟೆಗಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಎದುರಿಸುತ್ತಿರುವ ಜಟಿಲ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸಿ ಮುಂದೆ ಸರ್ಕಾರಕ್ಕೆ ವರದಿ ನೀಡಿ ಅಲೆಮಾರಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಳ್ಳುವ ಸೂಕ್ತ ಕ್ರಮದ ಬಗ್ಗೆ ಬೆಂಗಳೂರಿನ ತಳಸಮುದಾಯಗಳ ಅಧ್ಯಯನ ಕೇಂದ್ರ “ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ, ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಜೊತೆಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕದ ಅಲೆಮಾರಿ ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟವು ಈ ಕೆಳಕಂಡಂತೆ ZOOM Aap ನಲ್ಲಿ ಆನ್ ಲೈನ ಸಭೆಯನ್ನು ಆಯೋಜಿಸಲಾಗಿದೆ.
ಸಮುದಾಯಗಳು ಕೋವಿಡ್19 ಸಭೆಯನ್ನು ದಿನಾಂಕ 19-05-2020ರಂದು ಸಮಯ 11:00 AM ಹಮ್ಮಿಕೊಂಡಿರುವ ಸದರಿ ಸಭೆಯಲ್ಲಿ ಪ್ರತಿ ಸಮುದಾಯಗಳೊಂದಿಗೆ ನೇರವಾಗಿ ಚರ್ಚಿಸಲು ಅಂತರ್ಜಾಲದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಆಸಕ್ತಿ ಇರುವ ಸಮುದಾಯದ ಮುಖಂಡರು ಈ ಕೆಳಗಿನ ಲಿಂಕನ್ನು ಬಳಸಿಕೊಂಡು ತಮ್ಮ ತಮ್ಮ ಸಮುದಾಯಗಳಿಗೆ ಆಗಿರುವ ಸಮಸ್ಯೆ ಮತ್ತು ಸವಾಲುಗಳನ್ನು ಮಂಡಿಸಿ ಪರಿಹಾರ ಮಾರ್ಗೋಪಾಯಗಳ ಬಗ್ಗೆ ತಿಳಿಸಬಹುದು
COVID 19: ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳು ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಸಮುದಾಯದ ಮುಖಂಡರು ಮತ್ತು ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಹಾಗಾಗಿ ಅಲೆಮಾರಿ ಮುಖಂಡರುಗಳು ಇದರ ಸದುಪಯೋಗ ಪಡೆದಕೊಳ್ಳಬೇಕಾಗಿ ವಿನಂತಿಸುತ್ತೇವೆ.
ವಿಶೇಷ ಸೂಚನೆ.
1) ಆಸಕ್ತರು ಮೊದಲು ತಮ್ಮ ಮೊಬೈಲಿನಲ್ಲಿನ Playstore Aap ಮೂಲಕ Zoom Aap ಡೌನ್‌ಲೋಡ್ ಮಾಡಿಕೊಳ್ಳಬೇಕು.
2) ನಂತರ ನೆಟ್ ಆನ್ ಮಾಡಿ Zoom Aap ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ ಈ ಕೆಳಗೆ ನೀಡಿರುವ ID ನಂಬರ್ ಎಂಟರ್ ಮಾಡಿ ಲಾಗಿನ್ ಮೂಲಕ ಸಭೆಯಲ್ಲಿ ಬಾಗವಹಿಸಬಹುದು. ಮಾಹಿತಿ ಕೊರತೆ ಇರುವರು (ಆನ್ಲೈನ್ ಬಳಸೋಕೆ ಗೊತ್ತಿಲ್ಲದವರು ಮಾಹಿತಿ ಇರುವ ಸಹಾಯ ಪಡೆದು ಈ ಅಮೂಲ್ಯ ಸಭೆಯಲ್ಲಿ ಬಾಗವಹಿಸಬೇಕು.
3) ಪ್ರತಿಯೊಬ್ಬರಿಗೆ ಮೂರು ನಿಮಿಷಗಳ ಕಾಲಾವಕಾಶ ಮಾತ್ರ. ಒಬ್ಬರು ಕೇಳಿದ ಪ್ರಶ್ನೆ ,ಸಮಸ್ಯೆ ಮತ್ತು ವಿಷಯಗಳು ಪುನರಾವರ್ತನೆ ಆಗಬಾರದು.
ಕೆ ಚಾವಡೆ ಲೋಕೇಶ್
ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
https://zoom.us/j/91096720297
Meeting ID: 910 9672 0297
Be the first to comment