ಅಲೆಮಾರಿ ಜನಾಂಗದ ಸಿಕ್ಕಲಗಾರ ಸಮುದಾಯಕ್ಕೆ ರೈತರಿಂದ ಖರೀದಿಸಿದ ತರಕಾರಿ ವಿತರಣೆ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಜಮಖಂಡಿ ತಾಲೂಕು ರೈತ ಬೆಳೆದ ಬೆಳೆ ಕಣ್ಣು ಮುಂದೆ ಮಣ್ಣಾಗುತ್ತಿರುವ ದೃಶ್ಯ ನೋಡಿ ರೈತರ ಬಾಳಿಗೆ ಆಶಾ ದೀಪವಾಗಿ ಆಸರೆಯಾದ ಜನಪ್ರಿಯ ಶಾಸಕರು.ಶ್ರೀ .ಆನಂದ.ಸಿ.ನ್ಯಾಮಗೌಡರು ರೈತರ ತರಕಾರಿಗಳನ್ನ ಸ್ವತಃ ಹಣ ಕೊಟ್ಟು ರೈತರಿಂದ ಖರೀದಿಸಿ ಇಂದು ಕ್ಷೇತ್ರದ ಬಡ ಜನರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ತರಕಾರಿ ನೀಡುತ್ತಿದ್ದಾರೆ.

ಜಮಖಂಡಿ ನಗರಸಭೆಯ 17 ನೇ ವಾರ್ಡಿನಲ್ಲಿ ಅಲೆಮಾರಿ ಗುಂಪಿಗೆ ಸೇರಿದ ಸಿಕ್ಕಲಗಾರ ಸಮುದಾಯವರ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿಗೆ ನಗರಸಭಾ ಸದಸ್ಯೆಯಾದ ಶ್ರೀಮತಿ ಪುತಳವ್ವ ಚೌಧರಿ ಯವರ ಮೂಲಕ ತರಕಾರಿಗಳ ಕಿಟ್ ವಿತರಿಸಲಾಯಿತು.

ಜಮಖಂಡಿ ಮತಕ್ಷೇತ್ರದ ಯುವಕರ ಆಶಾಕಿರಣ ಹಾಗೂ ಜನಪ್ರೀಯ, ಶಾಸಕರಾದ ಶ್ರೀ ಅನಂದ ನ್ಯಾಮಗೌಡರು ತರಕಾರಿಗಳನ್ನು ಖರೀದಿಸಿ ತರಕಾರಿ ಕಿಟ್ ಗಳನ್ನು ತಯಾರಿಸಿ ಕಡುಬಡವರ ಕುಟುಂಬಗಳಿಗೆ ಆಯಾ ನಗರಸಭಾ ಸದಸ್ಯರ ಮೂಲಕ ಹಂಚುತ್ತಿದ್ದಾರೆ.

ಈ ವೇಳೆ ಸಿಕ್ಕಲಗಾರ ಸಮುದಾಯದ ಮುಖ್ಯಸ್ಥರಾದ ಗಂಗಪ್ಪ ಸಿಕ್ಕಲಗಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*