ಗ್ರಾಮೀಣ ಭಾಗದ ಪತ್ರಕರ್ತರನ್ನು ಕಡೆಗಣಿಸಿದ ರಾಜ್ಯ ಸರ್ಕಾರ

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜೀಲ್ಲಾ ಸುದ್ದಿಗಳು

  • ಗ್ರಾಮೀಣ ಭಾಗದ ಪತ್ರಕರ್ತರಿಗೂ ಕೂಡ ಸರ್ಕಾರ ಸಹಾಯ ಧನ ಘೋಷಿಸಲಿ.
  • ಸುರಪುರದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಘಟಕದಿಂದ ಸಿಎಂ ಗೆ ಮನವಿ.

ಅಂಬಿಗ ನ್ಯೂಸ್ ಸುರಪುರ :ದೇಶಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ಸರಕಾರ ವೈರಸ್ ಹರಡುವಿಕೆ ತಡೆಯಲು ಹರ ಸಾಹಸ ಪಡುತ್ತಿದ್ದು, ದೇಶದ ಜನತೆಯ ಹೀತ ದೃಷ್ಟಿಯಿಂದ ಸರಕಾರಗಳು ಈಗಾಗಲೇ ವಿಷೇಶ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ,

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ವರ್ಗದ ಜನತೆಗೆ ಕಸುಬುದಾರರಿಗೆ ಸಹಾಯ ಧನ ನೀಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿವೆ, ಆದರೆ ಗ್ರಾಮೀಣ ಭಾಗಗಳಲ್ಲಿನ ಸುದ್ದಿಗಳನ್ನು ವರದಿ ಮಾಡುವ ಮೂಲಕ ಕೋವಿಡ್ 19 ವೈರಸ್ ತಡೆಗಟ್ಟಲು ಮುನ್ನಚ್ಚರಿಕೆ ಕ್ರಮ ವಹಿಸಲು ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರಕಾರದಿಂದ ಯಾವುದೇ ಸಹಾಯ ಧನ ಘೋಷಣೆ ಮಾಡದಿರುವುದು ಬೇಸರದ ಸಂಗತಿಯಾಗಿದೆ.

ಕೊರೋನ ವಾರಿಯರ್ಸ್ ವ್ಯಾಪ್ತಿಗೆ ಬರುವ ಪತ್ರಕರ್ತರು ಕೂಡ ಹಗಲಿರುಳೆನ್ನೆದೆ ಮನೆ, ಮಠ, ಹೆಂಡತಿ, ಮಕ್ಕಳು, ಬಂಧು ಬಳಗವನ್ನು ಲೆಕ್ಕಿಸದೆ ಲಾಕ್ ಡೌನ್ ಆದಾಗಿನಿಂದಲೂ ಕೋವಿಡ್ 19 ರ ಸುದ್ದಿಯಲ್ಲಿ ನೀರತರಾಗಿದ್ದು ತಮ್ಮ ಜೀವದ ಹಂಗು ತೊರೆದು ಕ್ವಾರೆಂಟೈನ್ ಕೇಂದ್ರಗಳು , ರೇಡ್ ಝೋನ್, ಕಂಟೈನ್ಮೆಂಟ್, ಲಾಕ್ ಡೌನ್ ಏರಿಯಾಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವವನ್ನು ಸುದ್ದಿ ಮಾಡುವುದರ ಮೂಲಕ ಸರಕಾರದ ಗಮನಕ್ಕೆ ತರುತ್ತಿದ್ದಾರೆ, ಆದರೆ ಸರಕಾರ ಮಾತ್ರ ಪತ್ರಕರ್ತರಿಗೆ ಆರೋಗ್ಯ ಕಿಟ್ ಗಳಾಗಲಿ ವೀಮಾ ಸೌಲಭ್ಯವಾಗಲಿ ನೀಡಿಲ್ಲ, ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ,
ಆದ್ದರಿಂದ ಗ್ರಾಮಿಣ ಭಾಗದ ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೆ,ಏಜಂಟರುಗಳಿಗೆ ವಿಷೇಶ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸಹಾಯ ಧನ ನೀಡಬೇಕೆಂದು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಕುಂಬಾರ ಸರಕಾರವನ್ನು ಒತ್ತಾಯಿಸಿದರು.

ರಾಜ್ಯದ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರಕಾರದ ಸೌಲಭ್ಯಳನ್ನು ಮತ್ತು ಸಹಾಯ ಧನ ನೀಡಲು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸುರಪುರ ಗ್ರೇಡ್ ೨ ತಹಶಿಲ್ದಾರ ಸೂಫಿಯಾ ಸುಲ್ತಾನಾ ರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು,

ಇದೇ ಸಂದರ್ಭದಲ್ಲಿ
ಕರ್ನಾಟಕ ಜರ್ನಲಿಸ್ಟ್ಸ್ ಯುನಿಯನ್ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಮಲ್ಲು ಗುಳಗಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ, ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ, ಕಾರ್ಯದರ್ಶಿ ಸೋಮಶೇಖರ್ ನರಬೋಳಿ, ರಾಘವೇಂದ್ರ ಮಾಸ್ತರ , ಕಲಿಂ ಫರೀಧಿ,ಶ್ರೀಕರ ಜೋಷಿ, ಶೀವರಾಜ ಪಾಣೇಗಾಂವ್ ,ಭೀಮಯ್ಯ ಕಡೆಚೂರ, ಧೀರೆಂದ್ರ ಕುಲಕರ್ಣಿ ಸೆರಿದಂತೆ ಎಲ್ಲಾ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*