ಲಾಕ್‌ ಡೌನ್‌ 4.0. ಏನಿದು ಇಲ್ಲಿ ಮಾಹಿತಿ

ವರದಿ:- ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

  • 4ನೇ ಹಂತದ ಲಾಕ್ ಡೌನ್ ಪ್ರಾರಂಭ
  • ಸುಮಾರು 2 ತಿಂಗಳ ಕಾಲಾವಕಾಶ ಸಕಾ೯ರ ಸದುಪಯೋಗ ಪಡಿಸಿ ಕೊಂಡಿತಾ.?

ಸುಮಾರು 2 ತಿಂಗಳು ಅಂದರೆ 60 ದಿನದ ಕಾಲಾವಕಾಶದಲ್ಲಿ ಸರ್ಕಾರ ಮುಂದಿನ ಹಂತದ ಪರೀಕ್ಷೇ ಮತ್ತು ಚಿಕಿತ್ಸೆಗಾಗಿ ಬೇಕಾದ ಪರಿಕರಗಳ ಸಂಗ್ರಹಣೆ ಮಾಡಿಕೊಳ್ಳುವುದು, ರೋಗ ಪೀಡಿತರನ್ನ ಕೊರಾಂಟೈನ್ ಗೆ ಸ್ಥಳ ಮತ್ತು ಚಿಕಿತ್ಸೆಗೆ ಸ್ಥಳ ಕಾಯ್ದಿರಿಸಲು ಬೇಕಾದಷ್ಟು ಸಮಯ ಆಗಿತ್ತು.

ಈ ಅವದಿಯಲ್ಲಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು ಸಂಶೋದನೆಗೂ ಕಾಲಾವಕಾಶ ಸಿಕ್ಕಿತ್ತು.

ಈ ಅವದಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯನ್ನ ರೋಗದಿಂದ ದೂರ ಇರುವ ಮೂಲಕ ನಿಯಂತ್ರಿಸುವ ಏಕ ಮಾತ್ರ ಮಾರ್ಗದಿಂದ ಭಾರತದಲ್ಲಿ ಬೇರೆ ದೇಶಕ್ಕಿಂತ ಪರಿಣಾಮಕಾರಿ ಪಲಿತಾಂಶ ಪಡೆದಿದ್ದೇವೆ.

ವಿಶಾಲ ದೇಶ, ವಿಪರೀತ ಜನ ಸಂಖ್ಯೆ, ಸಾವಿರಾರು ಬಾಷೆ, ಆಹಾರ,ಆಚಾರ, ವಿಚಾರ, ಸಂಪ್ರದಾಯದಲ್ಲಿ ವಿಭಿನ್ನತೆ ಇರುವ ಜನರನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ.

ಹೊಟ್ಟೆಪಾಡಿಗೆ ಉದ್ಯೋಗಕ್ಕಾಗಿ ಹೊರ ಹೋದವರಿಗೆ ವಾಪಾಸ್ ಅವರ ಊರಿಗೆ ತಲುಪಲು ಅವಕಾಶ ಮಾಡಿಕೊಡುವ ಹಂತದಲ್ಲಿ ರೋಗ ನಿಯಂತ್ರಣ ನಿರೀಕ್ಷೆಯಂತೆ ಕೈ ಮೀರುತ್ತಿದೆ.

ಹಸಿದವರಿಗೆ ಆಹಾರ ಭದ್ರತೆ, ಆಥಿ೯ಕ ವ್ಯವಹಾರದ ಪರಿಹಾರ, ಶಿಕ್ಷಣದಲ್ಲಿ ಬದಲಿ ವ್ಯವಸ್ಥೆ, ಸ್ಥಳಿಯ ಉದ್ಯೋಗವಕಾಶದ ಪರಿಹಾರ ಸಕಾ೯ರ ತೆಗೆದುಕೊಂಡಿದೆ.

ಮುಂದಿನ ಹಂತದಲ್ಲಿ ಎಲ್ಲಾ ಮಿತಿ ಮೀರಿ ಹರಡುವ ರೋಗ ಪೀಡಿತರ ಚಿಕಿತ್ಸೆ ಸುಲಭವಾಗಿ ದೊರೆಯುವುಂತೆ ಮಾಡುವ ದೊಡ್ಡ ಸವಾಲಿದೆ.

ಲಾಕ್ ಡೌನ್ ನಲ್ಲಿ ದೊರಕಿರುವ ಎರೆಡು ತಿಂಗಳ ಕಾಲಾವಕಾಶ ಸರಿಯಾಗಿ ಸಕಾ೯ರ ಬಳಸಿಕೊಂಡು ತಯಾರಿ ಮಾಡಿದ್ದರೆ ಎಲ್ಲವನ್ನೂ ಸರಾಗವಾಗಿ ಎದುರಿಸುವುದು ಸಮಸ್ಯೆ ಆಗುವುದಿಲ್ಲ.

ಈ ಮದ್ಯದಲ್ಲಿ ಮುಂದುವರಿದ ದೇಶದಲ್ಲಿ ವ್ಯಾಕ್ಸಿನ್ ಕಂಡು ಹಿಡಿಯಲು ಮತ್ತು ಅದರ ಪಲಿತಾ೦ಶ ಪರೀಕ್ಷೆ ಕೂಡ ಪ್ರಗತಿಯಲ್ಲಿದೆ ಅದರಲ್ಲಿ ಯಶಸ್ವಿ ಆದರೆ ನಮ್ಮ ದೇಶ ಈ ಅತಿ ದೊಡ್ಡ ಗಂಡಾಂತರ ಸುಲಭದಲ್ಲಿ ಪರಿಹಾರವಾದಂತೆ.

ಎರೆಡು ತಿಂಗಳ ಕಾಲಾವಕಾಶ ಸರಿಯಾಗಿ ಬಳಸಿಕೊಳ್ಳದಿದ್ದಲ್ಲಿ, ಮತ್ತು ಸೋಂಕು ನಿಯಂತ್ರಣಕ್ಕೆ ಬರದಿದ್ದಲ್ಲಿ ಸಕಾ೯ರದ ವಿಪಲತೆಗೆ ಬಾರೀ ತಲೆದಂಡ ಕಟ್ಟುವಂತಾಗಲಿದೆ.

ಆ ಪರಿಸ್ಥಿತಿ ಭಾರತ ದೇಶಕ್ಕೆ ಬರದಿರಲಿ ಎಲ್ಲವೂ ಸುಖಾಂತ್ಯದಲ್ಲಿ ಮುಕ್ತಾಯವಾಗಲಿ ಎಂಬುವುದು ನಮ್ಮ ಪತ್ರಿಕೆಯ ಅಶಯ.

Be the first to comment

Leave a Reply

Your email address will not be published.


*