ಜೀಲ್ಲಾ ಸುದ್ದಿಗಳು
ಯಮಕನಮರಡಿ:ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ಯಮಕನಮರಡಿಯ ಸುಮಾರು ಸಾವಿರಾರು ಕಾರ್ಮಿಕರು ತಮ್ಮ ಮನೆಗೂ ಸೇರದಂತಹ ಸಂದಿಗ್ಧ ಸ್ಥಿತಿಯಲ್ಲಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಕಾರ್ಮಿಕರ ಜವಾಬ್ದಾರಿಯನ್ನು ಹೊತ್ತು ಅವರಿಗೆ ರಕ್ಷಣೆ ನೀಡುವ ಮೂಲಕ ಜನಪ್ರತಿನಿಧಿ ಹೇಗೆ ಇರಬೇಕೆಂದು ತೋರಿಸಿಕೊಟ್ಟಿದ್ದಾರೆ.
ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರು ಶಾಸಕರ ಕಾಳಜಿಗೆ ಮನಸೋತು ತಮ್ಮ ಮನದಾಳದ ಮಾತುಗಳನ್ನು ಆಡುತ್ತಾ ಶಾಸಕರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆ ಅನ್ನುತ್ತಿದ್ದಾರೆ. ಶಾಸಕರು ನಮ್ಮ ಪಾಲಿನ ದೇವರು ಎಂದು ಕಣ್ಣೀರು ಸುರಿಸಿ ತಮ್ಮ ಪಾಲಿಗೆ ನಮ್ಮ ಮನೆಯೇ ಇಲ್ಲದಂತ ಸ್ಥಿತಿಯಲ್ಲಿ ಶಾಸಕರು ತಮ್ಮ ಸ್ವಂತ ವಸತಿ ಗೃಹ ನೀಡಿ ಕಾನೂನು ಪ್ರಕಾರ ನಮ್ಮನ್ನು ೧೪ ದಿನಗಳ ಕ್ವಾರಂಟೈನ್ ಮಾಡಿಸಿ ಊಟ ವಸತಿ ನೀಡುತ್ತಿರುವುದು ನಿಜಕ್ಕೂ ನಮ್ಮ ಪಾಲಿಗೆ ಅವರು ದೇವರೆ. ನಾವು ನಮ್ಮ ಊರಿಗೆ ಹೋಗಿ ನಮ್ಮ ತಂದೆ ತಾಯಿ ಕುಟುಂಬದವರ ಮುಖ ನೋಡುತ್ತೆವೊ ಇಲ್ಲ ಎಂಬ ಆತಂಕ ನಮ್ಮಲ್ಲಿ ಮನೆ ಮಾಡಿತ್ತು. ಆದ್ರ ಶಾಸಕ ಸತೀಶ ಜಾರಕಿಹೊಳಿ ಅವರು ನಮ್ಮ ಪಾಲಿಗೆ ದೇವರಾಗಿ ಬಂದು ನಮ್ಮ ನೆರವಿಗೆ ಬಂದಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಎಂದು ನಾವು ಶುಭ ಹಾರೈಸುತ್ತೇವೆ.
ಇದು ಮಹಾರಾಷ್ಟ್ರದಿಂದ ಕೊರೋನಾ ಹಾವಳಿಯಿಂದ ಬೆಚ್ಚಿಬಿದ್ದು ತಮ್ಮ ತವರು ರಾಜ್ಯ ಕರ್ನಾಟಕಕ್ಕೆ ಬಂದ ವಲಸೆ ಕಾರ್ಮಿಕರ ಮಾತುಗಳು. ಮಹಾ ರಾಜ್ಯದ ಮುಂಬೈಯಲ್ಲಿ ಜೀವನೋಪಾಯ ನಡೆಸುತ್ತಿದ್ದ ಈ ಕಾರ್ಮಿಕರು ಕೊರೋನಾ ಎಂಬ ಭೀಕರ ಮಹಾಮಾರಿಗೆ ತತ್ತರಿಸಿ ಊಟ ವಸತಿ ಇಲ್ಲದೆ ಬೇರೆ ದಾರಿಯಿಲ್ಲದೆ ಕರ್ನಾಟಕಕ್ಕೆ ಬಂದಿದ್ದಾರೆ.ಇವರನ್ನು ಕೊಗನೊಳ್ಳಿ ಚೆಕ್ ಪೊಸ್ಟ್ ಬಳಿ ತಡೆಹಿಡಿಯಲಾಗಿತ್ತು. ಬಳಿಕ ಶಾಸಕರು ಇವರನ್ನು ಗುರುತಿಸಿ ಕಾನೂನು ಪ್ರಕಾರ ತಮ್ಮದೇ ಗೆಸ್ಟ್ ಹೌಸ್ ಮತ್ತು ದಡ್ಡಿಯ ಇತರೆ ಕಡೆ ಕ್ವಾರಂಟೈನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭಗಳಲ್ಲಿ ರಮೇಶ ಪಾಟೀಲ, ತಾನಾಜಿ ಸುಂಟಕರ್, ಸುನೀಲ ಹುಕ್ಕೇರಿ, ವಿಲಾಸ ನಾಯಿಕ, ಕಲ್ಪನಾ ಕುರಾಡೆ, ಕಿರಣಸಿಂಗ್ ರಜಪೂತ, ಮಹೇಶ ಕಡಪಟ್ಟಿ, ಮುನ್ನಾ ಬಾಗವಾನ್ ಸೇರಿ ಇತರರು ಇದ್ದರು
Be the first to comment