ಮಧೋಳದಲ್ಲಿ ವಿವಿಧ ಕಾರ್ಯಕ್ರಮಗಳಗೆ ಡಿಸಿಎಂ ಕಾರ್ಜೋಳ ಚಾಲನೆ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಮುಧೋಳ ತಾಲೂಕು:
ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಮುಧೋಳ್ ನಲ್ಲಿ ಇಂದು ಆಶಾ ಕಾರ್ಯಕರ್ತೆರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಗೃಹ ರಕ್ಷಕ ದಳ ಸೇರಿದಂತೆ ಕೊರೊನಾ ವಾರಿಯರ್‌ ಗಳಿಗೆ ಮಾಸ್ಕ್ , ಸ್ಯಾನಿಟೈಜರ್ ಗಳನ್ನು ವಿತರಿಸಿ, ಕೊರೊನಾ ನಿಯಂತ್ರಣ ಕ್ಕಾಗಿ ಅವರ ಹೋರಾಟವನ್ನು ಶ್ಲಾಘಿಸಿದರು. ಸರ್ಕಾರದ ನಿರ್ದೇಶಗಳನ್ನು ಅನುಸರಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಡಿಸಿಎಂ ತಿಳಿಸಿದರು.
ಕೊರೊನಾ ವೈರಾಣು ನಿಯಂತ್ರಣ ಕ್ಕಾಗಿ ಮುಧೋಳ್ ತಾಲೂಕು ಆಡಳಿತವು ಆಯೋಜಿಸಿರುವ ಗ್ರಾಮ ಮಟ್ಟದ ಕೋವಿಡ್ 19 ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಚಾಲನೆ ನೀಡಿದರು.

ಕೊರೊನಾ ವೈರಾಣು ನಿಯಂತ್ರಣ ಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನ ಶಕ್ತಿಮೀರಿ ಶ್ರಮಿಸುತ್ತಿದೆ. ದಾನಿಗಳು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಬಿಜೆಪಿ ಮುಧೋಳ್ ಘಟಕವು ಆಯೋಜಿಸಿದ್ದ ನಿಧಿ ಸಂಗ್ರಹ ಮಹಾ ಸಂಪರ್ಕ ಅಭಿಯಾನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಚಾಲನೆ ನೀಡಿದರು.

Be the first to comment

Leave a Reply

Your email address will not be published.


*