ಉದ್ಯಾಣವನ ಅತೀಕ್ರಮಣ ತೆರವಿಗೆ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ:

ಪಟ್ಟಣದ ವಿದ್ಯಾನಗರದ ಮದರಿ ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟಿರುವ ಸ್ಥಳವನ್ನು ಕೆಲವರು ಅತಿಕ್ರಮಣ ಮಾಡಿ, ಅಲ್ಲಿ ಪರಿಸರ ಮಾಲಿನ್ಯ ಉಂಟು ಮಾಡುವ ಸಿಮೆಂಟ್ ಬ್ಲಾಕ್ ತಯಾರಿಸುವ ಘಟಕವನ್ನು ನಡೆಸುತ್ತಿದ್ದು, ಇದನ್ನು ತೆರವುಗೊಳಿಸಿ, ಅಲ್ಲಿ ಉದ್ಯಾನವನವನ್ನು ನಿರ್ಮಿಸುವಂತೆ ಕೋರಿ ಬಡಾವಣೆಯ ನಿವಾಸಿಗಳು ಸೋಮವಾರ ಪುರಸಭೆಯ ಕಂದಾಯ ಅಕಾರಿ ಎಂ.ಬಿ.ಮಾಡಗಿ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಮದರಿ ಬಡಾವಣೆಯ ರಿ.ಸ.ನಂ. ೮೮/ಕ ಪ್ಲಾಟ್ ಸಂಖ್ಯೆ ೨೫ ಹಾಗೂ ರಿ.ಸ.ನಂ. ೮೮ ಡ ದಲ್ಲಿ ೦೧ ನೇ ಪ್ಲಾಟನ್ನು ಉದ್ಯಾನವನಕ್ಕಾಗಿ ಹಾಗೂ ೮೮/ ಡ ದಲ್ಲಿಯ ೫ ನೇ ಪ್ಲಾಟ್ ನ್ನು ಸಾರ್ವಜನಿಕ ಸ್ಥಳಕ್ಕಾಗಿ ಮೀಸಲಿಟ್ಟಿದೆ. ಆದರೆ ಈ ನಿವೇಶನಗಳಲ್ಲಿ ಪರಿಸರ ಮಾಲಿನ್ಯ ಮಾಡುವ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಇದರಿಂದ ಬಡಾವಣೆಯ ಜನರಿಗೆ ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ತೊಂದರೆಯಾಗಿದೆ. ಈ ಘಟಕವನ್ನುತೆರವುಗೊಳಿಸುವಂತೆ ಮೊದಲು ಬಡಾವಣೆಯ ನಿವಾಸಿಗಳು ಸಿಮೆಂಟ್ ಬ್ಲಾಕ್ ತಯಾರಿಸುವವರಿಗೆ ಹೇಳಿದ್ದಾಗ, ಮೂರು ತಿಂಗಳಲ್ಲಿ ತೆರವುಗೊಳಿಸುವುದಾಗಿ ಹೇಳಿದ್ದರು. ಆದರೆ ಒಂದು ವರ್ಷ ಕಳೆದರೂ ಅದನ್ನು ತೆರವುಗೊಳಿಸಿಲ್ಲ, ಕಾರಣ ಅತಿಕ್ರಮಣಕ್ಕೊಳಗಾಗಿರುವ ಸ್ಥಳವನ್ನು ಒಂದು ವಾರದೊಳಗಾಗಿ ತೆರವುಗೊಳಿಸಿ, ಅಲ್ಲಿ ಉದ್ಯಾನವನ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ. ನಿಯೋಗದಲ್ಲಿ ನಿವಾಸಿಗಳಾದ ಮುಪ್ಪಯ್ಯ ಮುಪ್ಪಯ್ಯನಮಠ, ಎಸ್.ಬಿ.ನಾಗೂರ, ಅಡಿವೆಪ್ಪ ಧನ್ನೂರ, ಜಿ.ಎಚ್.ಚವನಬಾವಿ, ಬಿ.ಡಿ.ಆರೇಶಂಕರ, ಎಸ್.ಡಿ.ಮಾಶ್ಯಾಳ, ಮೊಜನ ಬೆನಕೊಟಗಿ, ಶೇಖರಯ್ಯ ಗಣಾಚಾರಿ, ವೈ.ಬಿ.ಕುರಿ, ಸಿದ್ದನಗೌಡ ಗೌಡರ, ಎಸ್.ಎಸ್.ಹಗರಗುಂಡ, ಜಿ.ಬಿ.ಪಾಟೀಲ, ಎ.ಬಿ.ಮಲಗೌಡರ, ಎಸ್.ಬಿ.ಮೇಟಿ ಇದ್ದರು.



 

Be the first to comment

Leave a Reply

Your email address will not be published.


*